عَنْ المِقْدَادِ بْنَ عَمْرٍو الكِنْدِيَّ رضي الله عنه:
أَنَّهُ قَالَ لِرَسُولِ اللَّهِ صَلَّى اللهُ عَلَيْهِ وَسَلَّمَ: أَرَأَيْتَ إِنْ لَقِيتُ رَجُلًا مِنَ الكُفَّارِ فَاقْتَتَلْنَا، فَضَرَبَ إِحْدَى يَدَيَّ بِالسَّيْفِ فَقَطَعَهَا، ثُمَّ لاَذَ مِنِّي بِشَجَرَةٍ، فَقَالَ: أَسْلَمْتُ لِلَّهِ، أَأَقْتُلُهُ يَا رَسُولَ اللَّهِ بَعْدَ أَنْ قَالَهَا؟ فَقَالَ رَسُولُ اللَّهِ صَلَّى اللهُ عَلَيْهِ وَسَلَّمَ: «لاَ تَقْتُلْهُ» فَقَالَ: يَا رَسُولَ اللَّهِ إِنَّهُ قَطَعَ إِحْدَى يَدَيَّ، ثُمَّ قَالَ ذَلِكَ بَعْدَ مَا قَطَعَهَا؟ فَقَالَ رَسُولُ اللَّهِ صَلَّى اللهُ عَلَيْهِ وَسَلَّمَ: «لاَ تَقْتُلْهُ، فَإِنْ قَتَلْتَهُ فَإِنَّهُ بِمَنْزِلَتِكَ قَبْلَ أَنْ تَقْتُلَهُ، وَإِنَّكَ بِمَنْزِلَتِهِ قَبْلَ أَنْ يَقُولَ كَلِمَتَهُ الَّتِي قَالَ».
[صحيح] - [متفق عليه] - [صحيح البخاري: 4019]
المزيــد ...
ಮಿಕ್ದಾದ್ ಬಿನ್ ಅಮ್ರ್ ಕಿಂದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಅವರು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಾನು ಸತ್ಯನಿಷೇಧಿಯನ್ನು ಎದುರುಗೊಂಡು ಅವನೊಂದಿಗೆ ಹೋರಾಡುವಾಗ ಅವನು ನನ್ನ ಒಂದು ಕೈಯನ್ನು ಖಡ್ಗದಿಂದ ಕಡಿದು ತುಂಡು ಮಾಡಿ, ನಂತರ ಒಂದು ಮರದಲ್ಲಿ ಆಶ್ರಯ ಪಡೆದು, "ನಾನು ಅಲ್ಲಾಹನಿಗೆ ಶರಣಾಗಿದ್ದೇನೆ" ಎಂದು ಹೇಳಿದರೆ ಅವನ ಬಗ್ಗೆ ನೀವೇನು ಹೇಳುತ್ತೀರಿ? ಓ ಅಲ್ಲಾಹನ ಸಂದೇಶವಾಹಕರೇ! ಅವನು ಆ ಮಾತನ್ನು ಹೇಳಿದ ಬಳಿಕ ನಾನು ಅವನನ್ನು ಕೊಲ್ಲಬಹುದೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವನನ್ನು ಕೊಲ್ಲಬಾರದು." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನು ನನ್ನ ಒಂದು ಕೈಯನ್ನು ತುಂಡು ಮಾಡಿದ್ದಾನೆ. ತುಂಡು ಮಾಡಿದ ನಂತರ ಅವನು ಆ ಮಾತನ್ನು ಹೇಳಿದ್ದಾನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವನನ್ನು ಕೊಲ್ಲಬಾರದು. ನೀವೇನಾದರೂ ಅವನನ್ನು ಕೊಂದರೆ, ನೀವು ಅವನನ್ನು ಕೊಲ್ಲುವುದಕ್ಕೆ ಮೊದಲಿನ ನಿಮ್ಮ ಸ್ಥಾನದಲ್ಲಿ ಅವನು ಇರುತ್ತಾನೆ ಮತ್ತು ಅವನು ಆ ಮಾತನ್ನು ಹೇಳುವುದಕ್ಕೆ ಮೊದಲಿನ ಅವನ ಸ್ಥಾನದಲ್ಲಿ ನೀವು ಇರುತ್ತೀರಿ."
[صحيح] - [متفق عليه] - [صحيح البخاري - 4019]
ಮಿಕ್ದಾದ್ ಬಿನ್ ಅಸ್ವದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುವುದೇನೆಂದರೆ, ಯುದ್ಧದಲ್ಲಿ ಅವರು ಒಬ್ಬ ಸತ್ಯವಿಷೇಧಿಯೊಂದಿಗೆ ಮುಖಾಮುಖಿಯಾಗಿ, ಇಬ್ಬರೂ ಖಡ್ಗದಿಂದ ಹೋರಾಡಿ, ನಂತರ ಆ ಸತ್ಯನಿಷೇಧಿ ತನ್ನ ಖಡ್ಗದಿಂದ ಅವರ ಕೈಯನ್ನು ತುಂಡು ಮಾಡುತ್ತಾನೆ. ನಂತರ ಆ ಸತ್ಯನಿಷೇಧಿ ಅಲ್ಲಿಂದ ಓಡಿ ಒಂದು ಮರದಲ್ಲಿ ಆಶ್ರಯ ಪಡೆದು "ಲಾಇಲಾಹ ಇಲ್ಲಲ್ಲಾಹ್" ಎಂದು ಹೇಳಿದರೆ, ಅವನು ನನ್ನ ಕೈಯನ್ನು ತುಂಡು ಮಾಡಿದ ಬಳಿಕವೂ ಅವನನ್ನು ಕೊಲ್ಲುವುದು ನನಗೆ ಸಮ್ಮತಾರ್ಹವೇ?
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನನ್ನು ಕೊಲ್ಲಬಾರದು."
ಆಗ ಅವರು ಪುನಃ ಕೇಳುತ್ತಾರೆ: "ಓ ಅಲ್ಲಾಹನ ಸಂದೇಶವಾಹಕರೇ! ، ಅವನು ನನ್ನ ಒಂದು ಕೈಯನ್ನು ತುಂಡು ಮಾಡಿದ್ದಾನೆ. ಹೀಗಿದ್ದರೂ ನಾನು ಅವನನ್ನು ಕೊಲ್ಲಬಾರದೇ?"
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನನ್ನು ಕೊಲ್ಲಬಾರದು. ಏಕೆಂದರೆ, ಅವನ ರಕ್ತವು ಪವಿತ್ರವಾಗಿ ಬಿಟ್ಟಿದೆ. ಅವನು ಇಸ್ಲಾಂ ಸ್ವೀಕರಿಸಿದ ಬಳಿಕ ನೀವು ಅವನನ್ನು ಕೊಲ್ಲಬಾರದು. ಏಕೆಂದರೆ, ಅವನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ನಿಮ್ಮಂತೆ ಅವನ ರಕ್ತ ಕೂಡ ಪವಿತ್ರವಾಗಿದೆ. ಆದರೆ, ನೀವು ಅವನನ್ನು ಕೊಂದರೆ, ಅವನನ್ನು ಕೊಂದ ಕಾರಣ ಕಾನೂನಿಗೆ ಅನುಗುಣವಾಗಿ ಅಥವಾ ಪ್ರತೀಕಾರದ ನಿಯಮದ ಪ್ರಕಾರ ನೀವು ಕೊಲೆಗೆ ಅರ್ಹರಾಗುತ್ತೀರಿ.