عن عائشة رضي الله عنها عن النبي صلى الله عليه وسلم قال:
«إِنَّ أَبْغَضَ الرِّجَالِ إِلَى اللهِ الْأَلَدُّ الْخَصِمُ».
[صحيح] - [متفق عليه] - [صحيح البخاري: 2457]
المزيــد ...
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹು ಜನರ ಪೈಕಿ ಅತಿಯಾಗಿ ದ್ವೇಷಿಸುವುದು ಮಹಾ ಜಗಳಗಂಟನನ್ನಾಗಿದೆ."
[صحيح] - [متفق عليه] - [صحيح البخاري - 2457]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಜನರ ಪೈಕಿ ತೀವ್ರವಾಗಿ ಮತ್ತು ಅತಿಯಾಗಿ ತರ್ಕ ಮಾಡುವವನನ್ನು ಅತಿಯಾಗಿ ದ್ವೇಷಿಸುತ್ತಾನೆ. ಅಂದರೆ, ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧನಾಗದ ಮತ್ತು ತರ್ಕಿಸುತ್ತಲೇ ತನ್ನನ್ನು ಸಮರ್ಥಿಸಿಕೊಳ್ಳುವವನನ್ನು. ಒಂದು ವೇಳೆ ಅವನು ಸತ್ಯದ ಪರವಾಗಿ ತರ್ಕಿಸುವುದಾದರೂ ಅವನು ತರ್ಕದಲ್ಲಿ ಮಿತಿಮೀರಿ ನ್ಯಾಯದ ಮಿತಿಯನ್ನು ದಾಟುತ್ತಾನೆ ಮತ್ತು ಅಜ್ಞಾನದಿಂದ ತರ್ಕಿಸತೊಡಗುತ್ತಾನೆ.