+ -

عَنْ أَبِي هُرَيْرَةَ رضي الله عنه:
أَنَّ رَسُولَ اللهِ صَلَّى اللهُ عَلَيْهِ وَسَلَّمَ كَانَ يَقُولُ فِي سُجُودِهِ: «اللهُمَّ اغْفِرْ لِي ذَنْبِي كُلَّهُ دِقَّهُ، وَجِلَّهُ، وَأَوَّلَهُ وَآخِرَهُ وَعَلَانِيَتَهُ وَسِرَّهُ».

[صحيح] - [رواه مسلم] - [صحيح مسلم: 483]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸುಜೂದ್‌ನಲ್ಲಿ ಹೀಗೆ ಹೇಳುತ್ತಿದ್ದರು: "ಓ ಅಲ್ಲಾಹ್, ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸು, ಅವುಗಳಲ್ಲಿ ಚಿಕ್ಕದು, ದೊಡ್ಡದು, ಮೊದಲನೆಯದ್ದು, ಕೊನೆಯದ್ದು, ಬಹಿರಂಗವಾದದ್ದು ಮತ್ತು ರಹಸ್ಯವಾದದ್ದು."

[صحيح] - [رواه مسلم] - [صحيح مسلم - 483]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸುಜೂದ್‌ನಲ್ಲಿ ಪ್ರಾರ್ಥಿಸುತ್ತಾ ಹೀಗೆ ಹೇಳುತ್ತಿದ್ದರು: "ಓ ಅಲ್ಲಾಹ್, ನನ್ನ ಪಾಪಗಳನ್ನು ಕ್ಷಮಿಸು" ಅಂದರೆ, ಅವುಗಳನ್ನು ಮರೆಮಾಡು ಮತ್ತು ಅವುಗಳ ದುಷ್ಪರಿಣಾಮಗಳಿಂದ ನನ್ನನ್ನು ರಕ್ಷಿಸು. ಅವುಗಳನ್ನು ಕ್ಷಮಿಸು, ಮನ್ನಿಸು ಮತ್ತು ಕಡೆಗಣಿಸು. "ಎಲ್ಲಾ" ಅಂದರೆ: ಅವುಗಳಲ್ಲಿ "ಚಿಕ್ಕದು" ಕ್ಷುಲ್ಲಕವಾದದ್ದು ಮತ್ತು ಕಡಿಮೆ ಸಂಖ್ಯೆಯದ್ದು, "ದೊಡ್ಡದು" ಭೀಕರವಾದದ್ದು ಮತ್ತು ಹೆಚ್ಚಿನ ಸಂಖ್ಯೆಯದ್ದು, "ಮೊದಲನೆಯದ್ದು" ಮೊದಲನೆಯ ಪಾಪ, "ಕೊನೆಯದ್ದು" ಮತ್ತು ಅವುಗಳ ನಡುವಿನದ್ದು, "ಬಹಿರಂಗವಾದದ್ದು ಮತ್ತು ರಹಸ್ಯವಾದದ್ದು" ಮತ್ತು ನೀನು ಮಾತ್ರ ತಿಳಿದಿರುವಂತಹ ಪಾಪಗಳು.

ಹದೀಸಿನ ಪ್ರಯೋಜನಗಳು

  1. ಇಬ್ನುಲ್ ಖಯ್ಯಿಮ್ ಹೇಳುತ್ತಾರೆ: "ಸಣ್ಣ ಮತ್ತು ದೊಡ್ಡ, ಸೂಕ್ಷ್ಮ ಮತ್ತು ಗಂಭೀರ, ಮೊದಲನೆಯ ಮತ್ತು ಕೊನೆಯ, ರಹಸ್ಯ ಮತ್ತು ಬಹಿರಂಗವಾದ ಎಲ್ಲಾ ಪಾಪಗಳಿಗೂ ಕ್ಷಮೆಯನ್ನು ಕೋರಲಾಗಿದೆ. ಈ ಸಾಮಾನ್ಯೀಕರಣ ಮತ್ತು ಸಮಗ್ರತೆಯು ದಾಸನು ತಿಳಿದಿರುವ ಮತ್ತು ತಿಳಿಯದಿರುವ ಎಲ್ಲಾ ಪಾಪಗಳಿಗೂ ಪಶ್ಚಾತ್ತಾಪ ಪಡುವಂತೆ ಮಾಡುತ್ತದೆ."
  2. ಹೀಗೆ ಹೇಳಲಾಗಿದೆ: "ಚಿಕ್ಕದು" ಅನ್ನು "ದೊಡ್ಡದು" ಗಿಂತ ಮೊದಲು ಏಕೆ ಉಲ್ಲೇಖಿಸಲಾಗಿದೆ ಎಂದರೆ, ಕ್ಷಮೆ ಕೇಳುವವನು ತನ್ನ ಬೇಡಿಕೆಯಲ್ಲಿ ಏರುತ್ತಾ ಹೋಗುತ್ತಾನೆ, ಅಂದರೆ ಮೇಲೇರುತ್ತಾನೆ. ಏಕೆಂದರೆ, ಹೆಚ್ಚಾಗಿ ಸಣ್ಣ ಪಾಪಗಳನ್ನು ಪುನರಾವರ್ತಿಸುವುದರಿಂದ ಮತ್ತು ಅವುಗಳನ್ನು ನಿರ್ಲಕ್ಷಿಸುವುದರಿಂದ ದೊಡ್ಡ ಪಾಪಗಳು ಉಂಟಾಗುತ್ತವೆ. ಅವು ದೊಡ್ಡ ಪಾಪಗಳನ್ನು ತಲುಪುವ ಸಾಧನಗಳಿದ್ದಂತೆ. ಸ್ಥಾಪಿಸಲು ಮತ್ತು ತೆಗೆದುಹಾಕಲು ಸಾಧನಗಳನ್ನು ಮೊದಲು ಉಲ್ಲೇಖಿಸಬೇಕಾದುದು ಸರಿಯಾದ ಕ್ರಮವಾಗಿದೆ.
  3. ಅಲ್ಲಾಹನ ಮುಂದೆ ವಿನಮ್ರತೆಯನ್ನು ಪ್ರಕಟಿಸಲಾಗಿದೆ ಮತ್ತು ಸಣ್ಣ ಹಾಗೂ ದೊಡ್ಡದಾದ ಎಲ್ಲಾ ಪಾಪಗಳಿಗೂ ಕ್ಷಮೆಯನ್ನು ಕೋರಲಾಗಿದೆ.
  4. ಇಮಾಮ್ ನವವಿ ಹೇಳುತ್ತಾರೆ: "ಇದರಲ್ಲಿ ಪ್ರಾರ್ಥನೆಯನ್ನು ಬಲಪಡಿಸುವುದು ಮತ್ತು ಅದರ ಪದಗಳನ್ನು ಹೆಚ್ಚಿಸುವುದು ಕಂಡುಬರುತ್ತದೆ. ಕೆಲವು ಪದಗಳು ಇತರ ಪದಗಳ ಅರ್ಥವನ್ನು ನೀಡುತ್ತಿದ್ದರೂ ಸಹ."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الموري المالاجاشية الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು