عَنْ عَائِشَةَ أُمِّ المُؤْمنين رَضيَ اللهُ عنها قَالَتْ: سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ:
«يُحْشَرُ النَّاسُ يَوْمَ الْقِيَامَةِ حُفَاةً عُرَاةً غُرْلًا» قُلْتُ: يَا رَسُولَ اللهِ النِّسَاءُ وَالرِّجَالُ جَمِيعًا يَنْظُرُ بَعْضُهُمْ إِلَى بَعْضٍ؟ قَالَ صَلَّى اللهُ عَلَيْهِ وَسَلَّمَ: «يَا عَائِشَةُ، الْأَمْرُ أَشَدُّ مِنْ أَنْ يَنْظُرَ بَعْضُهُمْ إِلَى بَعْضٍ».
[صحيح] - [متفق عليه] - [صحيح مسلم: 2859]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಕೇಳಿದ್ದೇನೆ:
"ಪುನರುತ್ಥಾನ ದಿನದಂದು ಜನರನ್ನು ಬರಿಗಾಲಿನಲ್ಲಿ, ನಗ್ನರಾಗಿ ಮತ್ತು ಸುನ್ನತಿ ಮಾಡದ ಸ್ಥಿತಿಯಲ್ಲಿ ಒಟ್ಟುಗೂಡಿಸಲಾಗುವುದು". ನಾನು (ಆಯಿಷಾ) ಕೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ಮಹಿಳೆಯರು ಮತ್ತು ಪುರುಷರು ಎಲ್ಲರೂ ಒಟ್ಟಿಗೆ, ಪರಸ್ಪರ ನೋಡುತ್ತಾರೆಯೇ?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಆಯಿಷಾ, ಪರಿಸ್ಥಿತಿಯು ಅವರು ಪರಸ್ಪರ ನೋಡುವುದಕ್ಕಿಂತಲೂ ಹೆಚ್ಚು ಭಯಾನಕವಾಗಿರುತ್ತದೆ".
[صحيح] - [متفق عليه] - [صحيح مسلم - 2859]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುನರುತ್ಥಾನ ದಿನದ ಕೆಲವು ವಿಷಯಗಳನ್ನು ವರ್ಣಿಸುತ್ತಾರೆ. ಅದೇನೆಂದರೆ, ಜನರನ್ನು ಅವರ ಸಮಾಧಿಗಳಿಂದ ಎಬ್ಬಿಸಿದ ನಂತರ ವಿಚಾರಣೆಗಾಗಿ ಒಟ್ಟುಗೂಡಿಸಲಾಗುವುದು. ಅವರ ಸ್ಥಿತಿಯು ಹೇಗಿರುತ್ತದೆಂದರೆ ಅವರು ಪಾದರಕ್ಷೆಗಳಿಲ್ಲದೆ ಬರಿಗಾಲಿನಲ್ಲಿ, ಬಟ್ಟೆ ಅಥವಾ ಮರೆಯಿಲ್ಲದೆ ನಗ್ನ ದೇಹದೊಂದಿಗೆ, ಮತ್ತು ಅವರ ತಾಯಂದಿರು ಅವರಿಗೆ ಜನ್ಮ ನೀಡಿದ ದಿನದಂತೆ ಸುನ್ನತಿ ಮಾಡದ ಸ್ಥಿತಿಯಲ್ಲಿರುತ್ತಾರೆ. ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇದನ್ನು ಕೇಳಿದಾಗ, ಆಶ್ಚರ್ಯದಿಂದ ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಮಹಿಳೆಯರು ಮತ್ತು ಪುರುಷರು ಎಲ್ಲರೂ ಒಟ್ಟಿಗೆ, ಪರಸ್ಪರ ನೋಡುತ್ತಾರೆಯೇ?! ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಮರಣದ ನಂತರ ಎಬ್ಬಿಸಿ ಒಟ್ಟುಗೂಡಿಸುವ ಆ ನಿಲುಗಡೆಯು ಎಂತಹ ಭಯಾನಕತೆಗಳನ್ನು ಹೊಂದಿರುತ್ತದೆ ಎಂದರೆ, ಅದು ಜನರ ಗಮನ ಮತ್ತು ದೃಷ್ಟಿಗಳನ್ನು 'ಔರತ್' (ಗುಪ್ತಾಂಗ) ಗಳನ್ನು ನೋಡುವುದರಿಂದ ಬೇರೆಡೆಗೆ ಸೆಳೆಯುತ್ತದೆ.