عَنْ أَنَسِ بْنِ مَالِكٍ رضي الله عنه قَالَ:
سَمِعْتُ رَسُولَ اللهِ صَلَّى اللَّهُ عَلَيْهِ وَسَلَّمَ يَقُولُ: «قَالَ اللَّهُ تَبَارَكَ وَتَعَالَى: يَا ابْنَ آدَمَ إِنَّكَ مَا دَعَوْتَنِي وَرَجَوْتَنِي غَفَرْتُ لَكَ عَلَى مَا كَانَ فِيكَ وَلاَ أُبَالِي، يَا ابْنَ آدَمَ لَوْ بَلَغَتْ ذُنُوبُكَ عَنَانَ السَّمَاءِ ثُمَّ اسْتَغْفَرْتَنِي غَفَرْتُ لَكَ، وَلاَ أُبَالِي، يَا ابْنَ آدَمَ إِنَّكَ لَوْ أَتَيْتَنِي بِقُرَابِ الأَرْضِ خَطَايَا ثُمَّ لَقِيتَنِي لاَ تُشْرِكُ بِي شَيْئًا لأَتَيْتُكَ بِقُرَابِهَا مَغْفِرَةً».
[حسن] - [رواه الترمذي] - [سنن الترمذي: 3540]
المزيــد ...
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಆದಮರ ಪುತ್ರನೇ! ನೀನು ಎಲ್ಲಿಯ ತನಕ ನನ್ನಲ್ಲಿ ಪ್ರಾರ್ಥಿಸುತ್ತೀಯೋ ಮತ್ತು ನನ್ನಲ್ಲಿ ನಿರೀಕ್ಷೆಯಿಡುತ್ತೀಯೋ ಅಲ್ಲಿಯ ತನಕ ನೀನು ಮಾಡಿದ್ದೆಲ್ಲವನ್ನೂ ನಾನು ನಿನಗೆ ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನಿನ್ನ ಪಾಪಗಳು ಆಕಾಶದಲ್ಲಿರುವ ಮೋಡಗಳನ್ನು ತಲುಪಿ, ನಂತರ ನೀನು ನನ್ನಲ್ಲಿ ಕ್ಷಮೆಯಾಚಿಸಿದರೂ, ನಾನು ನಿನ್ನನ್ನು ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನೀನು ನನ್ನ ಬಳಿಗೆ ಭೂಮಿ ತುಂಬಾ ಪಾಪಗಳೊಂದಿಗೆ ಬಂದು, ನಂತರ ನನ್ನೊಂದಿಗೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನನ್ನನ್ನು ಭೇಟಿಯಾದರೆ, ನಾನು ಭೂಮಿ ತುಂಬಾ ಕ್ಷಮೆಯೊಂದಿಗೆ ನಿನ್ನ ಬಳಿಗೆ ಬರುತ್ತೇನೆ."
[حسن] - [رواه الترمذي] - [سنن الترمذي - 3540]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಕುದ್ಸಿ ಹದೀಸಿನಲ್ಲಿ ಹೀಗೆ ಹೇಳುತ್ತಾನೆ: "ಓ ಆದಮರ ಪುತ್ರನೇ! ನೀನು ನನ್ನಲ್ಲಿ ಪ್ರಾರ್ಥಿಸುತ್ತಿರುವ, ನನ್ನ ದಯೆಯನ್ನು ನಿರೀಕ್ಷಿಸುತ್ತಿರುವ ಮತ್ತು ನನ್ನ ಬಗ್ಗೆ ನಿರಾಶನಾಗದಿರುವ ತನಕ ನಾನು ನಿನ್ನ ಪಾಪಗಳನ್ನು ಮರೆಮಾಚುವೆನು ಮತ್ತು ಅಳಿಸಿಬಿಡುವೆನು. ನನಗೆ ಅದೊಂದು ವಿಷಯವೇ ಅಲ್ಲ. ನಿನ್ನ ಪಾಪ ಅಥವಾ ಅಪರಾಧವು ಮಹಾ ಪಾಪಗಳಲ್ಲಿ ಸೇರಿದ್ದಾಗಿದ್ದರೂ ಸಹ. ಓ ಆದಮರ ಪುತ್ರನೇ! ನಿನ್ನ ಪಾಪಗಳು ಆಕಾಶ ಮತ್ತು ಭೂಮಿಯ ಎಲ್ಲಾ ಮುಕ್ಕು-ಮೂಲೆಗಳನ್ನು ತಲುಪುವ ರೀತಿಯಲ್ಲಿ, ಅವುಗಳ ನಡುವಿನ ಭಾಗವನ್ನು ಸಂಪೂರ್ಣವಾಗಿ ತುಂಬುವಷ್ಟರ ಮಟ್ಟಿಗೆ ಹೆಚ್ಚಾಗಿದ್ದು, ನಂತರ ನೀನು ನನ್ನಲ್ಲಿ ಕ್ಷಮೆಯಾಚಿಸಿದರೆ, ನಾನು ನಿನ್ನ ಪಾಪಗಳನ್ನು ಅಳಿಸುವೆನು ಮತ್ತು ಅವೆಲ್ಲವನ್ನೂ ಕ್ಷಮಿಸಿ ಬಿಡುವೆನು. ಅವುಗಳ ಹೆಚ್ಚಳವು ನನಗೊಂದು ವಿಷಯವೇ ಅಲ್ಲ.
ಓ ಆದಮರ ಪುತ್ರನೇ! ನೀನು ಮರಣಾನಂತರ ನನ್ನ ಬಳಿಗೆ ಭೂಮಿ ತುಂಬಾ ಪಾಪಗಳೊಂದಿಗೆ ಬಂದು, ನಂತರ ನನ್ನೊಂದಿಗೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ಏಕದೇವವಿಶ್ವಾಸಿಯಾಗಿ ನೀನು ನನ್ನನ್ನು ಭೇಟಿಯಾದರೆ, ಈ ಎಲ್ಲಾ ಪಾಪಗಳಿಗೆ ಬದಲಿಯಾಗಿ ನಾನು ಭೂಮಿ ತುಂಬಾ ಕ್ಷಮೆಯೊಂದಿಗೆ ನಿನ್ನನ್ನು ಎದುರುಗೊಳ್ಳುತ್ತೇನೆ. ಏಕೆಂದರೆ ನಾನು ವಿಶಾಲವಾದ ಕ್ಷಮೆಯನ್ನು ಹೊಂದಿರುವವನು. ಶಿರ್ಕ್ (ದೇವ ಸಹಭಾಗಿತ್ವ) ಗೆ ಹೊರತಾದ ಎಲ್ಲಾ ಪಾಪಗಳನ್ನು ನಾನು ಕ್ಷಮಿಸುತ್ತೇನೆ."