عن جَرِيْر بنِ عبدِ الله رضي الله عنه قال:
كُنَّا عِنْدَ النَّبِيِّ صَلَّى اللهُ عَلَيْهِ وَسَلَّمَ، فَنَظَرَ إِلَى الْقَمَرِ لَيْلَةً -يَعْنِي الْبَدْرَ- فَقَالَ: «إِنَّكُمْ سَتَرَوْنَ رَبَّكُمْ كَمَا تَرَوْنَ هَذَا الْقَمَرَ، لَا تُضَامُونَ فِي رُؤْيَتِهِ، فَإِنِ اسْتَطَعْتُمْ أَنْ لَا تُغْلَبُوا عَلَى صَلَاةٍ قَبْلَ طُلُوعِ الشَّمْسِ وَقَبْلَ غُرُوبِهَا فَافْعَلُوا» ثُمَّ قَرَأَ: «{وَسَبِّحْ بِحَمْدِ رَبِّكَ قَبْلَ طُلُوعِ الشَّمْسِ وَقَبْلَ الْغُرُوبِ}»
[صحيح] - [متفق عليه] - [صحيح البخاري: 554]
المزيــد ...
ಜರೀರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಮ್ಮೆ ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಯಲ್ಲಿದ್ದೆವು. ಆಗ ಅವರು ರಾತ್ರಿಯಲ್ಲಿ ಚಂದ್ರನ ಕಡೆಗೆ—ಅಂದರೆ ಪೂರ್ಣಚಂದ್ರನ ಕಡೆಗೆ—ನೋಡಿ ಹೇಳಿದರು: "ನೀವು ಈ ಚಂದ್ರನನ್ನು ನೋಡುವಂತೆ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನೋಡುವಿರಿ. ಅವನನ್ನು ನೋಡುವುದರಲ್ಲಿ ನಿಮಗೆ ಯಾವುದೇ ತೊಂದರೆಯಿರುವುದಿಲ್ಲ. ಆದ್ದರಿಂದ ಸೂರ್ಯೋದಯಕ್ಕೆ ಮೊದಲಿನ ಮತ್ತು ಸೂರ್ಯಾಸ್ತಕ್ಕೆ ಮೊದಲಿನ ನಮಾಝ್‌ಗಳನ್ನು ಕಳಕೊಳ್ಳದಿರಲು ನಿಮಗೆ ಸಾಧ್ಯವಾಗುವುದಾದರೆ ಹಾಗೆ ಮಾಡಿರಿ." ನಂತರ ಅವರು ಪಠಿಸಿದರು: "ಮತ್ತು ಸೂರ್ಯೋದಯಕ್ಕೆ ಮೊದಲು ಹಾಗೂ ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ."
[صحيح] - [متفق عليه] - [صحيح البخاري - 554]
ಒಮ್ಮೆ ಹುಣ್ಣಿಮೆಯ ರಾತ್ರಿಯಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರೊಂದಿಗೆ ಕುಳಿತಿದ್ದಾಗ ಹೀಗೆ ಹೇಳಿದರು: ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಯಾವುದೇ ಗೊಂದಲಗಳಿಲ್ಲದೆ ನೇರವಾಗಿ ಕಣ್ಣಾರೆ ನೋಡುವರು. ಅವನನ್ನು ನೋಡಲು ಅವರು ನೂಕು-ನುಗ್ಗಾಟ ಮಾಡುವುದಿಲ್ಲ. ಅಥವಾ ಅವನನ್ನು ನೋಡಲು ಅವರು ಆಯಾಸ ಅಥವಾ ಕಷ್ಟ ಅನುಭವಿಸುವುದಿಲ್ಲ. ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಫಜ್ರ್ ಮತ್ತು ಅಸರ್ ನಮಾಝ್‌ಗಳಿಂದ ನಿಮ್ಮನ್ನು ತಡೆಯುವ ಯಾವುದೇ ಅಡ್ಡಿಗಳನ್ನು ನಿವಾರಿಸಲು ನಿಮಗೆ ಸಾಧ್ಯವಾದರೆ ಹಾಗೆ ಮಾಡಿರಿ. ಆ ಎರಡು ನಮಾಝ್‌ಗಳನ್ನು ಪೂರ್ಣರೂಪದಲ್ಲಿ ಅವುಗಳ ಸಮಯದಲ್ಲಿ ಸಾಮೂಹಿಕವಾಗಿ ನಿರ್ವಹಿಸಿರಿ. ಏಕೆಂದರೆ ಅಲ್ಲಾಹನ ಮುಖ ದರ್ಶನವಾಗಲು ಅದು ಒಂದು ಕಾರಣವಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ಮತ್ತು ಸೂರ್ಯೋದಯಕ್ಕೆ ಮೊದಲು ಹಾಗೂ ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ."