عَنْ أَبِي سَعِيدٍ رَضيَ اللهُ عنه:
أَنَّ جِبْرِيلَ أَتَى النَّبِيَّ صَلَّى اللهُ عَلَيْهِ وَسَلَّمَ، فَقَالَ: يَا مُحَمَّدُ اشْتَكَيْتَ؟ فَقَالَ: «نَعَمْ» قَالَ: «بِاسْمِ اللهِ أَرْقِيكَ، مِنْ كُلِّ شَيْءٍ يُؤْذِيكَ، مِنْ شَرِّ كُلِّ نَفْسٍ أَوْ عَيْنِ حَاسِدٍ، اللهُ يَشْفِيكَ بِاسْمِ اللهِ أَرْقِيكَ».
[صحيح] - [رواه مسلم] - [صحيح مسلم: 2186]
المزيــد ...
ಅಬೂ ಸಈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಮುಹಮ್ಮದ್, ನೀವು ಅಸ್ವಸ್ಥರಾಗಿದ್ದೀರಾ?" ಅವರು (ಪ್ರವಾದಿ) ಹೇಳಿದರು: "ಹೌದು". ಅವರು (ಜಿಬ್ರೀಲ್) ಹೇಳಿದರು: "ಅಲ್ಲಾಹನ ಹೆಸರಿನಿಂದ ನಾನು ನಿಮಗೆ 'ರುಕ್ಯಾ' (ಮಂತ್ರ) ಮಾಡುತ್ತೇನೆ, ನಿಮಗೆ ನೋವುಂಟುಮಾಡುವ ಪ್ರತಿಯೊಂದು ವಸ್ತುವಿನಿಂದ, ಪ್ರತಿಯೊಂದು (ಕೆಟ್ಟ) ಆತ್ಮದ ಕೆಡುಕಿನಿಂದ ಅಥವಾ ಅಸೂಯೆಪಡುವವನ ಕಣ್ಣಿನಿಂದ (ದೃಷ್ಟಿಯಿಂದ). ಅಲ್ಲಾಹು ನಿಮ್ಮನ್ನು ಗುಣಪಡಿಸುತ್ತಾನೆ. ಅಲ್ಲಾಹನ ಹೆಸರಿನಿಂದ ನಾನು ನಿಮಗೆ 'ರುಕ್ಯಾ' ಮಾಡುತ್ತೇನೆ".
[صحيح] - [رواه مسلم] - [صحيح مسلم - 2186]
ದೇವದೂತರಾದ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಅವರಲ್ಲಿ ಕೇಳಿದರು: ಓ ಮುಹಮ್ಮದ್, ನೀವು ಅನಾರೋಗ್ಯದಿಂದ ಬಳಲುತ್ತಿದ್ದೀರಾ? ಅವರು (ಪ್ರವಾದಿ) ಹೇಳಿದರು: ಹೌದು. ಆಗ ಜಿಬ್ರೀಲ್ ರವರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಮಾತುಗಳಿಂದ 'ರುಕ್ಯಾ' (ಮಂತ್ರ) ಮಾಡಿದರು: "ಅಲ್ಲಾಹನ ಹೆಸರಿನಿಂದ" ಅವನಲ್ಲಿ ಸಹಾಯ ಕೋರುತ್ತಾ "ನಾನು ನಿಮಗೆ 'ರುಕ್ಯಾ' ಮಾಡುತ್ತೇನೆ" ಮತ್ತು ನಿಮ್ಮನ್ನು ಅಲ್ಲಾಹನ ರಕ್ಷಣೆಯಲ್ಲಿಡುತ್ತೇನೆ, "ನಿಮಗೆ ನೋವುಂಟುಮಾಡುವ ಪ್ರತಿಯೊಂದು ವಸ್ತುವಿನಿಂದ" ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, "ಪ್ರತಿಯೊಂದು (ಕೆಟ್ಟ) ಆತ್ಮದ ಕೆಡುಕಿನಿಂದ", "ಅಥವಾ ಅಸೂಯೆಪಡುವವನ ಕಣ್ಣಿನಿಂದ" ಅದು ನಿಮಗೆ ತಗಲುವುದರಿಂದ. ಅಲ್ಲಾಹು "ನಿಮ್ಮನ್ನು ಗುಣಪಡಿಸುತ್ತಾನೆ" ಮತ್ತು ನಿಮ್ಮನ್ನು ರಕ್ಷಿಸುತ್ತಾನೆ ಹಾಗೂ ಎಲ್ಲಾ ರೋಗಗಳಿಂದ ಕಾಪಾಡುತ್ತಾನೆ. "ಅಲ್ಲಾಹನ ಹೆಸರಿನಿಂದ ನಾನು ನಿಮಗೆ 'ರುಕ್ಯಾ' ಮಾಡುತ್ತೇನೆ" ಎಂದು ಅವರು ಒತ್ತು ನೀಡುವುದಕ್ಕಾಗಿ ಪುನರಾವರ್ತಿಸಿದರು, ಮತ್ತು ಪರಿಶುದ್ಧನಾದ ಅವನನ್ನು (ಅಲ್ಲಾಹನನ್ನು) ಹೊರತುಪಡಿಸಿ ಬೇರೆ ಯಾರೂ ಪ್ರಯೋಜನಕಾರಿಯಲ್ಲ ಎಂದು ಸೂಚಿಸಲು ಅವರು ಅದರಿಂದಲೇ ಪ್ರಾರಂಭಿಸಿ ಅದರಿಂದಲೇ ಕೊನೆಗೊಳಿಸಿದರು.