عَنِ ابْنِ عَبَّاسٍ رضي الله عنهما عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«مَنْ عَادَ مَرِيضًا، لَمْ يَحْضُرْ أَجَلُهُ فَقَالَ عِنْدَهُ سَبْعَ مِرَارٍ: أَسْأَلُ اللَّهَ الْعَظِيمَ رَبَّ الْعَرْشِ الْعَظِيمِ أَنْ يَشْفِيَكَ، إِلَّا عَافَاهُ اللَّهُ مِنْ ذَلِكَ الْمَرَضِ».
[صحيح] - [رواه أبو داود والترمذي وأحمد] - [سنن أبي داود: 3106]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಮರಣದ ಸಮಯವು ಇನ್ನೂ ಬಂದಿರದ ರೋಗಿಯನ್ನು ಸಂದರ್ಶಿಸಿ, ಅವನ ಬಳಿ ಏಳು ಬಾರಿ: 'ಮಹಾ ಅರ್ಶಿನ ಒಡೆಯನಾದ ಮಹೋನ್ನತನಾದ ಅಲ್ಲಾಹನಲ್ಲಿ ಅವನು ನಿನ್ನನ್ನು ಗುಣಪಡಿಸಬೇಕೆಂದು ನಾನು ಕೇಳುತ್ತೇನೆ' ಎಂದು ಹೇಳಿದರೆ, ಅಲ್ಲಾಹು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ."
[صحيح] - [رواه أبو داود والترمذي وأحمد] - [سنن أبي داود - 3106]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮರಣದ ಸಮಯ ಸಮೀಪಿಸದ ರೋಗದಿಂದ ಬಳಲುತ್ತಿರುವ ಒಬ್ಬ ಮುಸ್ಲಿಮನನ್ನು ಇನ್ನೊಬ್ಬ ಮುಸ್ಲಿಮನು ಸಂದರ್ಶಿಸಿ, ನಂತರ ಹೀಗೆ ಪ್ರಾರ್ಥಿಸಿದರೆ: "ಮಹೋನ್ನತನಾದ ಅಲ್ಲಾಹನಲ್ಲಿ ನಾನು ಕೇಳುತ್ತೇನೆ". ಅಂದರೆ ಅವನ ಸಾರ, ಗುಣಲಕ್ಷಣಗಳು ಮತ್ತು ಕ್ರಿಯೆಗಳನ್ನು ಮುಂದಿಟ್ಟು ಕೇಳುತ್ತೇನೆ. "ಮಹಾ ಅರ್ಶಿನ ಒಡೆಯನೊಂದಿಗೆ ಅವನು ನಿನ್ನನ್ನು ಗುಣಪಡಿಸಲೆಂದು". ಇದನ್ನು ಏಳು ಬಾರಿ ಪುನರಾವರ್ತಿಸಿದರೆ, ಅಲ್ಲಾಹನು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ.