عَنْ عُثْمَانَ بْنِ أَبِي الْعَاصِ الثَّقَفِيِّ رضي الله عنه أَنَّهُ شَكَا إِلَى رَسُولِ اللهِ صَلَّى اللهُ عَلَيْهِ وَسَلَّمَ وَجَعًا يَجِدُهُ فِي جَسَدِهِ مُنْذُ أَسْلَمَ، فَقَالَ لَهُ رَسُولُ اللهِ صَلَّى اللهُ عَلَيْهِ وَسَلَّمَ:
«ضَعْ يَدَكَ عَلَى الَّذِي تَأَلَّمَ مِنْ جَسَدِكَ، وَقُلْ بِاسْمِ اللهِ ثَلَاثًا، وَقُلْ سَبْعَ مَرَّاتٍ أَعُوذُ بِاللهِ وَقُدْرَتِهِ مِنْ شَرِّ مَا أَجِدُ وَأُحَاذِرُ».
[صحيح] - [رواه مسلم] - [صحيح مسلم: 2202]
المزيــد ...
ಉಸ್ಮಾನ್ ಬಿನ್ ಅಬುಲ್ ಆಸ್ ಸಕಫಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಇಸ್ಲಾಂ ಸ್ವೀಕರಿಸಿದ ಕಾಲದಿಂದ ತಾನು ತನ್ನ ದೇಹದಲ್ಲಿ ಅನುಭವಿಸುತ್ತಿದ್ದ ನೋವಿನ ಬಗ್ಗೆ ಅಳಲನ್ನು ವ್ಯಕ್ತಪಡಿಸಿದಾಗ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹೇಳಿದರು:
"ನೋವಿರುವ ಸ್ಥಳದಲ್ಲಿ ಕೈಯಿಟ್ಟು ಮೂರು ಬಾರಿ 'ಬಿಸ್ಮಿಲ್ಲಾ' (ಅಲ್ಲಾಹನ ನಾಮದಲ್ಲಿ) ಎಂದು ಹೇಳು. ನಂತರ ಏಳು ಬಾರಿ ಹೀಗೆ ಹೇಳು: ನಾನು ಅನುಭವಿಸುತ್ತಿರುವ ಮತ್ತು ಭಯಪಡುತ್ತಿರುವ ಈ ಕೆಡುಕಿನಿಂದ ನಾನು ಅಲ್ಲಾಹನಲ್ಲಿ ಮತ್ತು ಅವನ ಶಕ್ತಿಯಲ್ಲಿ ರಕ್ಷೆ ಬೇಡುತ್ತೇನೆ."
[صحيح] - [رواه مسلم] - [صحيح مسلم - 2202]
ಉಸ್ಮಾನ್ ಬಿನ್ ಅಬುಲ್ ಆಸ್ ಸಕಫಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಮಾರಣಾಂತಿಕ ನೋವು ಉಂಟಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಭೇಟಿಯಾಗಲು ಬಂದರು ಮತ್ತು ಅವರಿಗೆ ಬಾಧಿಸಿದ ಅನಾರೋಗ್ಯವನ್ನು ಅಲ್ಲಾಹು ನಿವಾರಿಸುವಂತಹ ಒಂದು ಪ್ರಾರ್ಥನೆಯನ್ನು ಕಲಿಸಿಕೊಟ್ಟರು. ಅದೇನೆಂದರೆ, ಅವರು ನೋವಿರುವ ಸ್ಥಳದಲ್ಲಿ ಕೈಯನ್ನಿಟ್ಟು ಮೂರು ಬಾರಿ 'ಬಿಸ್ಮಿಲ್ಲಾ' ಎಂದು ಹೇಳುವುದು. ನಂತರ ಏಳು ಬಾರಿ ಹೀಗೆ ಹೇಳುವುದು: "ನಾನು ರಕ್ಷೆ ಬೇಡುತ್ತೇನೆ." ಅಂದರೆ, ನಾನು ಅಭಯ ಬೇಡುತ್ತೇನೆ, ಆಶ್ರಯಬೇಡುತ್ತೇನೆ. "ಅಲ್ಲಾಹನಲ್ಲಿ ಮತ್ತು ಅವನ ಶಕ್ತಿಯಲ್ಲಿ ನಾನು ಅನುಭವಿಸುತ್ತಿರುವ ಈ ಕೆಡುಕಿನಿಂದ" ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ನಾನು ಅನುಭವಿಸುತ್ತಿರುವ ಈ ನೋವಿನಿಂದ. "ಮತ್ತು ನಾನು ಭಯಪಡುತ್ತಿರುವ" ಅಂದರೆ, ಭವಿಷ್ಯದಲ್ಲಿ ನನಗೆ ವ್ಯಥೆ ಮತ್ತು ಹೆದರಿಕೆಗೆ ಕಾರಣವಾಗಬಹುದೆಂದು ನಾನು ಭಯಪಡುತ್ತಿರುವ, ಅಥವಾ ಈ ಅನಾರೋಗ್ಯವು ಮುಂದುವರಿದು ನನ್ನ ದೇಹವಿಡೀ ನೋವಿನಿಂದ ಬಳಲಬಹುದೆಂದು ನಾನು ಭಯಪಡುತ್ತಿರುವುದರಿಂದ.