عن عقبة بن عامر رضي الله عنه قال: قال رسول الله صلى الله عليه وسلم:
«أَحَقُّ الشُّرُوطِ أَنْ تُوفُوا بِهِ مَا اسْتَحْلَلْتُمْ بِهِ الْفُرُوجَ».
[صحيح] - [متفق عليه] - [صحيح البخاري: 2721]
المزيــد ...
ಉಕ್ಬ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ನೆರವೇರಿಸಬೇಕಾದ ಅತ್ಯಂತ ಅರ್ಹ ಷರತ್ತುಗಳು ನಿಮಗೆ ಲೈಂಗಿಕ ಸಂಪರ್ಕವನ್ನು ಧರ್ಮಸಮ್ಮತಗೊಳಿಸುವ ಶರತ್ತುಗಳಾಗಿವೆ."
[صحيح] - [متفق عليه] - [صحيح البخاري - 2721]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಕಾರಣವಾಗುವ ಷರತ್ತುಗಳು ನೆರವೇರಿಸಲು ಅತ್ಯಂತ ಅರ್ಹವಾದ ಷರತ್ತುಗಳಾಗಿವೆ. ಇವು ಲೈಂಗಿಕ ಸಂಪರ್ಕವನ್ನು ಅನುಮತಿಸುವ ಶರತ್ತುಗಳಾಗಿದ್ದು ಮಹಿಳೆ ತನ್ನ ವಿವಾಹ ಕರಾರಿನಲ್ಲಿ ಇವುಗಳ ಬೇಡಿಕೆಯಿಡುತ್ತಾಳೆ.