+ -

عن أبي موسى رضي الله عنه أن النبي صلى الله عليه وسلم قال:
«لا نِكَاحَ إِلّا بِوَليٍّ».

[صحيح] - [رواه أبو داود والترمذي وابن ماجه وأحمد] - [سنن أبي داود: 2085]
المزيــد ...

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಪೋಷಕನಿಲ್ಲದಿದ್ದರೆ ವಿವಾಹವಿಲ್ಲ."

[صحيح] - [رواه أبو داود والترمذي وابن ماجه وأحمد] - [سنن أبي داود - 2085]

ವಿವರಣೆ

ವಿವಾಹ ಕರಾರನ್ನು ನಡೆಸಿಕೊಡುವ ಪೋಷಕರ ಅನುಪಸ್ಥಿತಿಯಲ್ಲಿ ಒಬ್ಬ ಮಹಿಳೆ ವಿವಾಹವಾದರೆ ಆ ವಿವಾಹ ಸಿಂಧುವಲ್ಲವೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الإيطالية الأورومو الأذربيجانية الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ವಿವಾಹ ಸಿಂಧುವಾಗಲು ಪೋಷಕರ ಉಪಸ್ಥಿತಿಯು ಷರತ್ತಾಗಿದೆ. ಪೋಷಕನ ಅನುಪಸ್ಥಿತಿಯಲ್ಲಿ ವಿವಾಹ ನಡೆದರೆ, ಅಥವಾ ಮಹಿಳೆಯೊಬ್ಬಳು ಸ್ವಯಂ ವಿವಾಹವಾದರೆ, ಆ ವಿವಾಹ ಸಿಂಧುವಲ್ಲ.
  2. ಪೋಷಕರು ಎಂದರೆ ಮಹಿಳೆಗೆ ಅತೀ ಹತ್ತಿರದ ಪುರುಷ ಸಂಬಂಧಿ. ಹತ್ತಿರದ ಸಂಬಂಧಿಗಳಿರುವಾಗ ದೂರದ ಸಂಬಂಧಿಗಳು ಪೋಷಕರ ಸ್ಥಾನ ವಹಿಸಿ ವಿವಾಹ ನಡೆಸಿಕೊಡಬಾರದು.
  3. ಪೋಷಕರಿಗೆ ಸಂಬಂಧಿಸಿದ ಷರತ್ತುಗಳು: ಧಾರ್ಮಿಕ ನಿಯಮಗಳನ್ನು ಪಾಲಿಸಲು ಬದ್ಧನಾಗಿರುವುದು, ಪುರುಷನಾಗಿರುವುದು, ವಿವಾಹದ ಸಾಧಕ-ಬಾಧಕಗಳ ಬಗ್ಗೆ ತಿಳುವಳಿಕೆಯಿರುವುದು, ವಧು ಮತ್ತು ಪೋಷಕರು ಒಂದೇ ಧರ್ಮದವರಾಗಿರುವುದು. ಯಾರಿಗೆ ಈ ಗುಣಗಳ ಕೊರತೆಯಿದೆಯೋ ಅವರು ವಿವಾಹ ನಡೆಸಿಕೊಡುವ ಪೋಷಕ ಸ್ಥಾನ ವಹಿಸಲು ಅರ್ಹರಲ್ಲ.