ಹದೀಸ್‌ಗಳ ಪಟ್ಟಿ

ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವ ಸತ್ಯವಿಶ್ವಾಸಿಗಳೇ ಪರಿಪೂರ್ಣ ವಿಶ್ವಾಸವನ್ನು ಹೊಂದಿದವರು. ನಿಮ್ಮಲ್ಲಿ ಯಾರು ತಮ್ಮ ಮಹಿಳೆಯರೊಡನೆ ಉತ್ತಮವಾಗಿ ವರ್ತಿಸುತ್ತಾರೋ ಅವರೇ ನಿಮ್ಮಲ್ಲಿ ಅತ್ಯುತ್ತಮ ಜನರು
عربي ಆಂಗ್ಲ ಉರ್ದು
ನೀವು ನೆರವೇರಿಸಬೇಕಾದ ಅತ್ಯಂತ ಅರ್ಹ ಷರತ್ತುಗಳು ನಿಮಗೆ ಲೈಂಗಿಕ ಸಂಪರ್ಕವನ್ನು ಧರ್ಮಸಮ್ಮತಗೊಳಿಸುವ ಶರತ್ತುಗಳಾಗಿವೆ
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನವನ್ನು (ಖುತ್ಬತುಲ್ ಹಾಜ) ಕಲಿಸಿಕೊಟ್ಟರು
عربي ಆಂಗ್ಲ ಉರ್ದು
ಪೋಷಕನಿಲ್ಲದಿದ್ದರೆ ವಿವಾಹವಿಲ್ಲ
عربي ಆಂಗ್ಲ ಉರ್ದು
“ಸತ್ಯವಿಶ್ವಾಸಿ ಪುರುಷನು ಸತ್ಯವಿಶ್ವಾಸಿ ಸ್ತ್ರೀಯನ್ನು ದ್ವೇಷಿಸಬಾರದು. ಅವಳ ಒಂದು ಗುಣವನ್ನು ಅವನು ಇಷ್ಟಪಡದಿದ್ದರೆ, ಅವಳ ಇನ್ನೊಂದು ಗುಣವು ಅವನಿಗೆ ಇಷ್ಟವಾಗಬಹುದು
عربي ಆಂಗ್ಲ ಉರ್ದು
“ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು
عربي ಆಂಗ್ಲ ಉರ್ದು
ವಿವಾಹವಾಗುವ ಸಾಮರ್ಥ್ಯವಿರುವವರು ವಿವಾಹವಾಗಬೇಕು. ಏಕೆಂದರೆ, ದೃಷ್ಟಿಯನ್ನು ತಗ್ಗಿಸಲು ಮತ್ತು ಪರಿಶುದ್ಧತೆಯನ್ನು ಕಾಪಾಡಲು ಅದು ಹೆಚ್ಚು ಪರಿಣಾಮಕಾರಿಯಾಗಿದೆ. ವಿವಾಹವಾಗುವ ಸಾಮರ್ಥ್ಯವಿಲ್ಲದವರು ಉಪವಾಸ ಆಚರಿಸಬೇಕು. ಏಕೆಂದರೆ, ಅದು ಅವನಿಗೆ ಗುರಾಣಿಯಾಗಿದೆ
عربي ಆಂಗ್ಲ ಉರ್ದು
ಯಾವುದೇ ಮಹಿಳೆ ತನ್ನ ಪೋಷಕರ (ವಲಿ) ಅನುಮತಿಯಿಲ್ಲದೆ ವಿವಾಹವಾದರೆ, ಆಕೆಯ ವಿವಾಹವು ಬಾತಿಲ್ (ಅಸಿಂಧು) ಆಗಿದೆ. - ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು - ನಂತರ ಅವನು ಆಕೆಯೊಂದಿಗೆ ಸಂಭೋಗ ಮಾಡಿದರೆ, ಆಕೆಯು ಆತನಿಂದ ಪಡೆದ ಲಾಭಕ್ಕೆ ತಕ್ಕಂತೆ ಮೆಹರ್ (ವಿವಾಹದ ಕಾಣಿಕೆ) ಅನ್ನು ಪಡೆಯುತ್ತಾಳೆ. ಅವರು ವಿವಾದ ಉಂಟುಮಾಡಿದರೆ, ಪೋಷಕರಿಲ್ಲದವರಿಗೆ ಸುಲ್ತಾನನು ಪೋಷಕನಾಗುತ್ತಾನೆ
عربي ಆಂಗ್ಲ ಉರ್ದು
ಯಾರು ತಮ್ಮ ಪತ್ನಿಯ ಗುದದ್ವಾರದಲ್ಲಿ ಸಂಭೋಗಿಸುತ್ತಾರೋ ಅವರು ಶಾಪಗ್ರಸ್ತರಾಗಿದ್ದಾರೆ
عربي ಆಂಗ್ಲ ಉರ್ದು
ನಾನು ಕೇಳಿದೆ: ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲೊಬ್ಬರ ಪತ್ನಿಯ ಅವಳ ಗಂಡನ ಮೇಲೆ ಏನೇನು ಹಕ್ಕುಗಳಿವೆ? ಅವರು ಉತ್ತರಿಸಿದರು: "ನೀವು ಆಹಾರ ಸೇವಿಸುವಾಗ ಅವಳಿಗೂ ಆಹಾರ ನೀಡಿರಿ ಮತ್ತು ನೀವು ಬಟ್ಟೆ ಧರಿಸುವಾಗ ಅಥವಾ ನೀವು ಸಂಪಾದಿಸಿದಾಗ ಅವಳಿಗೂ ಉಡಿಸಿರಿ. ಅವಳ ಮುಖಕ್ಕೆ ಹೊಡೆಯಬೇಡಿ, ಮತ್ತು ಅಸಹ್ಯವಾಗಿ ನೋಡಬೇಡಿ ಮತ್ತು (ಕೋಪ ಬಂದಾಗ) ಮನೆಯಲ್ಲಿ ಬಿಟ್ಟು ಬೇರೆಲ್ಲೂ ಅವಳಿಂದ ದೂರವಿರಬೇಡಿ
عربي ಆಂಗ್ಲ ಉರ್ದು
ಯಾರಿಗೆ ಇಬ್ಬರು ಪತ್ನಿಯರಿದ್ದು ಅವನು ಅವರಲ್ಲಿ ಒಬ್ಬಳ ಕಡೆಗೆ ವಾಲಿದರೆ, ಪುನರುತ್ಥಾನ ದಿನದಂದು ಅವನು ಒಂದು ಪಾರ್ಶ್ವಕ್ಕೆ ವಾಲಿದವನಂತೆ ಬರುವನು
عربي ಆಂಗ್ಲ ಉರ್ದು