عن أبي هريرة رضي الله عنه قال: قال رسول الله صلى الله عليه وسلم:
«مَلْعُون مَنْ أتَى امرأتَه في دُبُرِها».
[حسن] - [رواه أبو داود والنسائي في الكبرى وأحمد] - [سنن أبي داود: 2162]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ತಮ್ಮ ಪತ್ನಿಯ ಗುದದ್ವಾರದಲ್ಲಿ ಸಂಭೋಗಿಸುತ್ತಾರೋ ಅವರು ಶಾಪಗ್ರಸ್ತರಾಗಿದ್ದಾರೆ."
[حسن] - [رواه أبو داود والنسائي في الكبرى وأحمد] - [سنن أبي داود - 2162]
ಗಂಡ ತನ್ನ ಹೆಂಡತಿಯ ಗುದದ್ವಾರದಲ್ಲಿ ಸಂಭೋಗಿಸುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಕೆ ನೀಡಿದ್ದಾರೆ ಮತ್ತು ಅವನು ಅಲ್ಲಾಹನ ದಯೆಯಿಂದ ಹೊರಹಾಕಲ್ಪಟ್ಟ ಶಾಪಗ್ರಸ್ತನಾಗಿದ್ದಾನೆ ಎಂದಿದ್ದಾರೆ. ಗುದದ್ವಾರದಲ್ಲಿ ಸಂಭೋಗಿಸುವುದು ಮಹಾಪಾಪವಾಗಿದೆ.