عَنْ عَائِشَةَ أُمِّ المُؤْمِنينَ رَضِي اللهُ عنْها قَالَتْ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«أَيُّمَا امْرَأَةٍ نَكَحَتْ بِغَيْرِ إِذْنِ مَوَالِيهَا، فَنِكَاحُهَا بَاطِلٌ -ثَلَاثَ مَرَّاتٍ- فَإِنْ دَخَلَ بِهَا فَالْمَهْرُ لَهَا بِمَا أَصَابَ مِنْهَا، فَإِنْ تَشَاجَرُوا فَالسُّلْطَانُ وَلِيُّ مَنْ لَا وَلِيَّ لَهُ».
[صحيح] - [رواه أبو داود والترمذي وابن ماجه وأحمد] - [سنن أبي داود: 2083]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಮಹಿಳೆ ತನ್ನ ಪೋಷಕರ (ವಲಿ) ಅನುಮತಿಯಿಲ್ಲದೆ ವಿವಾಹವಾದರೆ, ಆಕೆಯ ವಿವಾಹವು ಬಾತಿಲ್ (ಅಸಿಂಧು) ಆಗಿದೆ. - ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು - ನಂತರ ಅವನು ಆಕೆಯೊಂದಿಗೆ ಸಂಭೋಗ ಮಾಡಿದರೆ, ಆಕೆಯು ಆತನಿಂದ ಪಡೆದ ಲಾಭಕ್ಕೆ ತಕ್ಕಂತೆ ಮೆಹರ್ (ವಿವಾಹದ ಕಾಣಿಕೆ) ಅನ್ನು ಪಡೆಯುತ್ತಾಳೆ. ಅವರು ವಿವಾದ ಉಂಟುಮಾಡಿದರೆ, ಪೋಷಕರಿಲ್ಲದವರಿಗೆ ಸುಲ್ತಾನನು ಪೋಷಕನಾಗುತ್ತಾನೆ."
[صحيح] - [رواه أبو داود والترمذي وابن ماجه وأحمد] - [سنن أبي داود - 2083]
ಮಹಿಳೆಯು ತನ್ನ ಪೋಷಕರ ಅನುಮತಿಯಿಲ್ಲದೆ ಸ್ವಯಂ ವಿವಾಹವಾಗುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ ಮತ್ತು ಆಕೆಯ ವಿವಾಹವು ಬಾತಿಲ್ (ಅಸಿಂಧು) ಎಂದು ಹೇಳಿದ್ದಾರೆ. ಅದು ಎಂದಿಗೂ ಸಂಭವಿಸಬಾರದೆಂಬಂತೆ ಅವರು ಅದನ್ನು ಮೂರು ಬಾರಿ ಪುನರಾವರ್ತಿಸಿ ಹೇಳಿದರು.
ಯಾರು ಆಕೆಯ ಪೋಷಕರ ಅನುಮತಿಯಿಲ್ಲದೆ ಆಕೆಯನ್ನು ವಿವಾಹವಾದರೋ ಆತ ಆಕೆಯೊಂದಿಗೆ ಸಂಭೋಗ ಮಾಡಿದರೆ; ಆಕೆಯ ಗುಪ್ತ ಭಾಗದಲ್ಲಿ ಸಂಭೋಗಿಸಿದ ಕಾರಣಕ್ಕೆ ಆಕೆ ಪೂರ್ಣ ಮಹರ್ ಅನ್ನು ಪಡೆಯುತ್ತಾಳೆ.
ಒಂದು ವೇಳೆ ವಿವಾಹ ಒಪ್ಪಂದದ ಪೋಷಕತ್ವದಲ್ಲಿ ಪೋಷಕರಲ್ಲಿ ಭಿನ್ನಮತ ಉಂಟಾದರೆ - ಮತ್ತು ಅವರ ಶ್ರೇಣಿಗಳು ಸಮಾನವಾಗಿದ್ದರೆ - ಅವರಲ್ಲಿ ಯಾರು ಮೊದಲು ಮುಂದಾಗುತ್ತಾರೋ ಅವರಿಗೆ ಒಪ್ಪಂದವಾಗುತ್ತದೆ, ಅದು ಆಕೆಯ ಹಿತಾಸಕ್ತಿಯನ್ನು ಪರಿಗಣಿಸುವುದಾಗಿದ್ದರೆ. ಪೋಷಕನು (ವಲಿ) ವಿವಾಹ ಮಾಡಿಕೊಡಲು ನಿರಾಕರಿಸಿದರೆ, ಆಕೆಗೆ ಪೋಷಕರಿಲ್ಲದಂತಾಗುತ್ತದೆ. ಆಗ ಸುಲ್ತಾನ್ ಅಥವಾ ಅವನ ಪ್ರತಿನಿಧಿಯಾದ ನ್ಯಾಯಾಧೀಶರು ಮತ್ತು ಅವರ ಸ್ಥಾನದಲ್ಲಿರುವವರು ಆಕೆಗೆ ಪೋಷಕರಾಗುತ್ತಾರೆ. ನಿರಾಕರಿಸದಿದ್ದರೆ ಪೋಷಕರ ಉಪಸ್ಥಿತಿಯಲ್ಲಿ ಸುಲ್ತಾನನಿಗೆ ಪೋಷಕತ್ವ ವಹಿಸುವ ಅಧಿಕಾರವಿರುವುದಿಲ್ಲ.