عَنْ أَبِي هُرَيْرَةَ رضي لله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«لَا يَفْرَكْ مُؤْمِنٌ مُؤْمِنَةً، إِنْ كَرِهَ مِنْهَا خُلُقًا رَضِيَ مِنْهَا آخَرَ» أَوْ قَالَ: «غَيْرَهُ».
[صحيح] - [رواه مسلم] - [صحيح مسلم: 1469]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಸತ್ಯವಿಶ್ವಾಸಿ ಪುರುಷನು ಸತ್ಯವಿಶ್ವಾಸಿ ಸ್ತ್ರೀಯನ್ನು ದ್ವೇಷಿಸಬಾರದು. ಅವಳ ಒಂದು ಗುಣವನ್ನು ಅವನು ಇಷ್ಟಪಡದಿದ್ದರೆ, ಅವಳ ಇನ್ನೊಂದು ಗುಣವು ಅವನಿಗೆ ಇಷ್ಟವಾಗಬಹುದು." ಅಥವಾ ಅವರು ಹೀಗೆ ಹೇಳಿದರು: "ಅವಳ ಬೇರೊಂದು ಗುಣವು."
[صحيح] - [رواه مسلم] - [صحيح مسلم - 1469]
ಗಂಡ ತನ್ನ ಹೆಂಡತಿಯ ಮೇಲೆ ಅನ್ಯಾಯವೆಸಗುವುದು, ಅವಳನ್ನು ತ್ಯಜಿಸುವುದು, ನಿರ್ಲಕ್ಷಿಸುವುದು ಮುಂತಾದವುಗಳಿಗೆ ಕಾರಣವಾಗುವ ರೀತಿಯಲ್ಲಿ ಅವಳನ್ನು ದ್ವೇಷಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಏಕೆಂದರೆ, ಮನುಷ್ಯನನ್ನು ನ್ಯೂನತೆಗಳೊಂದಿಗೆ ಸೃಷ್ಟಿಸಲಾಗಿದೆ. ಅವನು ಅವಳಲ್ಲಿರುವ ಕೆಟ್ಟ ಗುಣವನ್ನು ಇಷ್ಟಪಡದಿದ್ದರೆ, ಅವಳಲ್ಲಿ ಉತ್ತಮವಾದ ಬೇರೆ ಗುಣವು ಕಂಡುಬರಬಹುದು. ಆಗ ಅವನು ತನಗೆ ಒಪ್ಪಿಗೆಯಾಗುವ ಉತ್ತಮ ಗುಣದ ಬಗ್ಗೆ ಸಂತೃಪ್ತನಾಗಿ, ತನಗೆ ಇಷ್ಟವಿಲ್ಲದ ಕೆಟ್ಟ ಗುಣದ ಬಗ್ಗೆ ತಾಳ್ಮೆ ತೋರಬೇಕು. ಇದು ಅವಳಿಂದ ಬೇರ್ಪಡಲು ಕಾರಣವಾಗುವ ರೀತಿಯಲ್ಲಿ ಅವಳನ್ನು ದ್ವೇಷಿಸದೆ ತಾಳ್ಮೆಯಿಂದಿರಲು ಸಹಾಯ ಮಾಡುತ್ತದೆ.