عَنْ أَبِي سَعِيدٍ الْخُدْرِيِّ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«إِنَّ الدُّنْيَا حُلْوَةٌ خَضِرَةٌ، وَإِنَّ اللهَ مُسْتَخْلِفُكُمْ فِيهَا، فَيَنْظُرُ كَيْفَ تَعْمَلُونَ، فَاتَّقُوا الدُّنْيَا وَاتَّقُوا النِّسَاءَ، فَإِنَّ أَوَّلَ فِتْنَةِ بَنِي إِسْرَائِيلَ كَانَتْ فِي النِّسَاءِ».
[صحيح] - [رواه مسلم] - [صحيح مسلم: 2742]
المزيــد ...
ಅಬೂ ಸಈದ್ ಖುದ್ರಿ (ರ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಶ್ಚಯವಾಗಿಯೂ ಇಹಲೋಕವು ಮಧುರವಾಗಿದೆ ಮತ್ತು ಹಸಿರಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ಅದರಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿ, ನೀವು ಹೇಗೆ ವರ್ತಿಸುತ್ತೀರಿ ಎಂದು ನೋಡುತ್ತಾನೆ. ಆದ್ದರಿಂದ ನೀವು ಇಹಲೋಕವನ್ನು ಭಯಪಡಿರಿ ಮತ್ತು ಸ್ತ್ರೀಯರನ್ನು ಭಯಪಡಿರಿ. ಏಕೆಂದರೆ, ಬನೂ ಇಸ್ರಾಈಲರ ಮೊತ್ತಮೊದಲ ಪರೀಕ್ಷೆಯು ಸ್ತ್ರೀಯರ ಮೂಲಕವಾಗಿತ್ತು."
[صحيح] - [رواه مسلم] - [صحيح مسلم - 2742]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಇಹಲೋಕವು ;ರುಚಿಯಲ್ಲಿ ಮಧುರವಾಗಿದೆ ಮತ್ತು ರೂಪದಲ್ಲಿ ಹಸಿರಾಗಿದೆ. ಮನುಷ್ಯನು ಅದರಿಂದ ವಂಚಿತನಾಗಿ, ಅದರಲ್ಲೇ ತಲ್ಲೀನನಾಗಿ, ಅದನ್ನೇ ತನ್ನ ಮುಖ್ಯ ಗುರಿಯಾಗಿ ಮಾಡಿಕೊಳ್ಳುವ ಸಾಧ್ಯತೆಯಿದೆ. ನಿಶ್ಚಯವಾಗಿಯೂ, ಅಲ್ಲಾಹು ನಮ್ಮನ್ನು ಈ ಭೂಮಿಯಲ್ಲಿ ಒಬ್ಬರ ನಂತರ ಒಬ್ಬರು ಬರುವಂತೆ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದಾನೆ—ನಾವು ಹೇಗೆ ವರ್ತಿಸುತ್ತೇವೆ, ನಾವು ಅವನ ಆಜ್ಞೆಗಳನ್ನು ಪಾಲಿಸುತ್ತೇವೆಯೋ ಅಥವಾ ಪಾಲಿಸುವುದಿಲ್ಲವೋ ಎಂದು ಪರೀಕ್ಷಿಸಲು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: ಇಹಲೋಕದ ಆನಂದ ಮತ್ತು ಅಲಂಕಾರಗಳು ನಿಮ್ಮನ್ನು ವಂಚಿಸದಂತೆ ಎಚ್ಚರದಿಂದಿರಿ. ಹಾಗೇನಾದರೂ ಆದರೆ ಅದು ನಿಮ್ಮನ್ನು ಅಲ್ಲಾಹು ಆಜ್ಞಾಪಿಸಿದ್ದನ್ನು ತೊರೆಯುವಂತೆ ಮತ್ತು ಅವನು ವಿರೋಧಿಸಿದ್ದನ್ನು ಮಾಡುವಂತೆ ಪ್ರೋತ್ಸಾಹಿಸಬಹುದು. ಇಹಲೋಕದ ಪರೀಕ್ಷೆಗಳಲ್ಲಿ ಸ್ತ್ರೀಯರ ಮೂಲಕ ಉಂಟಾಗುವ ಪರೀಕ್ಷೆಯ ಬಗ್ಗೆ ನೀವು ಅತ್ಯಧಿಕ ಎಚ್ಚರವಹಿಸಬೇಕು. ಏಕೆಂದರೆ, ಬನೂ ಇಸ್ರಾಈಲರಿಗೆ ಉಂಟಾದ ಮೊತ್ತಮೊದಲ ಪರೀಕ್ಷೆ ಸ್ತ್ರೀಯರ ಮೂಲಕವಾಗಿತ್ತು.