+ -

عَنْ أَبِي سَعِيدٍ الخُدْرِيِّ رضي الله عنه أَنَّ النَّبِيَّ صَلَّى اللَّهُ عَلَيْهِ وَسَلَّمَ قَالَ:
«إِنَّ مِنْ أَعْظَمِ الجِهَادِ كَلِمَةَ عَدْلٍ عِنْدَ سُلْطَانٍ جَائِرٍ».

[حسن لغيره] - [رواه أبو داود والترمذي وابن ماجه وأحمد] - [سنن الترمذي: 2174]
المزيــد ...

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ದಬ್ಬಾಳಿಕೆ ಮಾಡುವ ಆಡಳಿತಗಾರನ ಮುಂದೆ ನ್ಯಾಯವಾದ ಮಾತನ್ನು ಹೇಳುವುದು ಅತಿಶ್ರೇಷ್ಠ ಜಿಹಾದ್ ಆಗಿದೆ."

- [رواه أبو داود والترمذي وابن ماجه وأحمد] - [سنن الترمذي - 2174]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ದಬ್ಬಾಳಿಕೆ ಮತ್ತು ಅನ್ಯಾಯವೆಸಗುವ ಸುಲ್ತಾನ ಅಥವಾ ಮುಖಂಡನ ಮುಂದೆ ನ್ಯಾಯವಾದ ಮತ್ತು ಸತ್ಯವಾದ ಮಾತನ್ನು ಹೇಳುವುದು ಜಿಹಾದ್‌ನ ಅತಿಶ್ರೇಷ್ಠ ಮತ್ತು ಅತಿ ಪ್ರಯೋಜನಕಾರಿ ವಿಧವಾಗಿದೆ. ಏಕೆಂದರೆ, ಇದು ಒಳಿತನ್ನು ಆದೇಶಿಸುವ ಮತ್ತು ಕೆಡುಕನ್ನು ತಡೆಯುವ ಕೆಲಸವಾಗಿದೆ. ನ್ಯಾಯವಾದ ಮಾತನ್ನು ಹೇಳುವುದು ಮಾತು, ಬರಹ, ಕ್ರಿಯೆ ಅಥವಾ ಪ್ರಯೋಜನವು ಲಭ್ಯವಾಗುವ ಮತ್ತು ಕೆಡುಕು ದೂರವಾಗುವ ಇತರ ಯಾವುದೇ ತರಹದಲ್ಲಾದರೂ ಸರಿ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الليتوانية الدرية الرومانية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ತಡೆಯುವುದು ಜಿಹಾದ್‌ನಲ್ಲಿ ಒಳಪಡುತ್ತದೆ.
  2. ಆಡಳಿತಗಾರನಿಗೆ ಉಪದೇಶ ಮಾಡುವುದು ಅತಿದೊಡ್ಡ ಜಿಹಾದ್ ಆಗಿದೆ. ಆದರೆ ಅದಕ್ಕೆ ಜ್ಞಾನ, ವಿವೇಕ ಮತ್ತು ಸ್ಥಿರತೆ ಇರಬೇಕಾದುದು ಕಡ್ಡಾಯ.
  3. ಖತ್ತಾಬಿ ಹೇಳಿದರು: "ಅದು ಅತಿಶ್ರೇಷ್ಠ ಜಿಹಾದ್ ಏಕೆಂದರೆ, ಶತ್ರುಗಳೊಂದಿಗೆ ಹೋರಾಡುವವರು (ಗೆಲುವಿನ) ಆಶಾಭಾವ ಮತ್ತು (ಸೋಲಿನ) ಭಯಾತಂಕದ ನಡುವೆ ಅನಿಶ್ಚಿತತೆಯಲ್ಲಿರುತ್ತಾರೆ. ತಾನು ಸೋಲುತ್ತೇನೋ ಗೆಲ್ಲುತ್ತೇನೋ ಎಂದು ಅವನಿಗೆ ತಿಳಿದಿರುವುದಿಲ್ಲ. ಆದರೆ, ಸುಲ್ತಾನನ ಬಳಿ ಸತ್ಯ ಹೇಳುವವನು ಸುಲ್ತಾನನ ನಿಯಂತ್ರಣದಲ್ಲಿರುತ್ತಾನೆ. ಅವನು ಸತ್ಯವನ್ನು ಹೇಳುವಾಗ ಮತ್ತು ಒಳಿತನ್ನು ಆದೇಶಿಸುವಾಗ, ತನ್ನನ್ನು ತಾನೇ ವಿನಾಶಕ್ಕೆ ಒಡ್ಡಿಕೊಳ್ಳುತ್ತಾನೆ ಮತ್ತು ತನ್ನ ದೇಹವನ್ನು ನಾಶಕ್ಕೆ ಗುರಿಪಡಿಸುತ್ತಾನೆ. ಆದ್ದರಿಂದ, ಜೀವಭಯದ ಬಾಹುಳ್ಯತೆಯಿರುವ ಕಾರಣ ಅದು ಜಿಹಾದ್‌ನ ಅತಿಶ್ರೇಷ್ಠ ವಿಧವಾಗಿದೆ. ಹೀಗೆ ಹೇಳಲಾಗುತ್ತದೆ: ಅದು ಅತಿಶ್ರೇಷ್ಠ ಜಿಹಾದ್ ಏಕೆಂದರೆ, ಆಡಳಿತಗಾರನು ಆ ಮಾತನ್ನೇನಾದರೂ ಸ್ವೀಕರಿಸಿದರೆ, ಹೆಚ್ಚಿನ ಸಂಖ್ಯೆಯ ಜನರಿಗೆ ವ್ಯಾಪಕ ರೀತಿಯಲ್ಲಿ ಉಪಕಾರವಾಗಿ, ಅದರಿಂದ ದೊಡ್ಡ ಮಟ್ಟಿನ ಪ್ರಯೋಜನ ಉಂಟಾಗುತ್ತದೆ."