عَنْ عُقْبَةَ بْنِ عَامِرٍ رضي الله عنه أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«إِيَّاكُمْ وَالدُّخُولَ عَلَى النِّسَاءِ» فَقَالَ رَجُلٌ مِنَ الأَنْصَارِ: يَا رَسُولَ اللَّهِ، أَفَرَأَيْتَ الحَمْوَ؟ قَالَ: «الحَمْوُ المَوْتُ».
[صحيح] - [متفق عليه] - [صحيح البخاري: 5232]
المزيــد ...
ಉಕ್ಬ ಇಬ್ನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮಹಿಳೆಯರ ಬಳಿಗೆ ತೆರಳುವುದರ ಬಗ್ಗೆ ಎಚ್ಚರವಾಗಿರಿ." ಆಗ ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಮೈದುನನ (ಗಂಡನ ಸಹೋದರ) ಬಗ್ಗೆ ನಿಮ್ಮ ಅಭಿಪ್ರಾಯವೇನು?" ಅವರು ಉತ್ತರಿಸಿದರು: "ಮೈದುನ ಮರಣವಾಗಿದ್ದಾನೆ."
[صحيح] - [متفق عليه] - [صحيح البخاري - 5232]
ಅನ್ಯ ಮಹಿಳೆಯರೊಡನೆ ಬೆರೆಯುವುದರ ಬಗ್ಗೆ ಎಚ್ಚರಿಸುತ್ತಾ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಮಹಿಳೆಯರ ಬಳಿಗೆ ಹೋಗುವುದನ್ನು ಮತ್ತು ಮಹಿಳೆಯರು ನಿಮ್ಮ ಬಳಿಗೆ ಬರುವುದನ್ನು ಭಯಪಡಿರಿ."
ಆಗ ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ವ್ಯಕ್ತಿ ಕೇಳಿದರು: "ಗಂಡನ ಸಹೋದರ, ಗಂಡನ ಸಹೋದರ ಪುತ್ರ, ಗಂಡನ ಪಿತೃ ಸಹೋದರ, ಗಂಡನ ಪಿತೃ ಸಹೋದರ ಪುತ್ರ, ಗಂಡನ ಸಹೋದರಿ ಪುತ್ರ ಮುಂತಾದ ಮಹಿಳೆಗೆ ಆಕೆ ವಿವಾಹಿತೆಯಲ್ಲದಿದ್ದರೆ ವಿವಾಹವಾಗಬಹುದಾದ ಗಂಡನ ಹತ್ತಿರದ ಸಂಬಂಧಿಕರ ಬಗ್ಗೆ ನಿಮ್ಮ ಅಭಿಪ್ರಾಯವೇನು?"
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ನೀವು ಮರಣದ ಬಗ್ಗೆ ಎಚ್ಚರವಹಿಸುವಂತೆ ಅವರ ಬಗ್ಗೆ ಎಚ್ಚರವಹಿಸಿರಿ." ಏಕೆಂದರೆ, ಮೈದುನರೊಂದಿಗೆ ಏಕಾಂತದಲ್ಲಿರುವುದು ಧರ್ಮದಲ್ಲಿ ಪರೀಕ್ಷೆ ಮತ್ತು ನಾಶಕ್ಕೆ ಕಾರಣವಾಗುತ್ತದೆ. ಗಂಡನ ತಂದೆ ಮತ್ತು ಮಕ್ಕಳಲ್ಲದ ಇತರ ಸಂಬಂಧಿಕರು ತಡೆಯಲ್ಪಡಲು ಅನ್ಯ ಪುರುಷರಿಗಿಂತಲೂ ಹೆಚ್ಚು ಅರ್ಹರಾಗಿದ್ದಾರೆ. ಏಕೆಂದರೆ, ಇತರರೊಂದಿಗೆ ಏಕಾಂತದಲ್ಲಿರುವುದಕ್ಕಿಂತಲೂ ಹೆಚ್ಚಾಗಿ ಗಂಡನ ಸಂಬಂಧಿಕರೊಂದಿಗೆ ಏಕಾಂತದಲ್ಲಿರುವುದು ಸುಲಭವಾಗಿದೆ. ಇತರರಿಗಿಂತಲೂ ಹೆಚ್ಚು ಕೆಡುಕು ಇವರಿಂದ ನಿರೀಕ್ಷಿಸಲಾಗುತ್ತದೆ. ಇವರಿಂದ ಪರೀಕ್ಷೆ ಸಂಭವನೀಯವಾಗಿದೆ. ಏಕೆಂದರೆ, ಮಹಿಳೆಯ ವಿರೋಧವಿಲ್ಲದೆಯೇ ಅವಳ ಬಳಿಗೆ ತೆರಳಲು ಮತ್ತು ಏಕಾಂತದಲ್ಲಿರಲು ಇವರಿಗೆ ಸಾಧ್ಯವಾಗುತ್ತದೆ. ಕೆಲವೊಮ್ಮೆ ಮೈದುನನ ಉಪಸ್ಥಿತಿಯು ಅನಿವಾರ್ಯವಾಗಿರುತ್ತದೆ ಮತ್ತು ಅವನಿಂದ ದೂರವಾಗಿರಲು ಸಾಧ್ಯವಾಗುವುದಿಲ್ಲ. ರೂಢಿಯಾಗಿ ನಡೆದು ಬಂದಂತೆ ಪುರುಷನು ತನ್ನ ಸಹೋದರನ ಪತ್ನಿಯೊಡನೆ ಏಕಾಂತದಲ್ಲಿರುವುದನ್ನು ಜನರು ಕ್ಷುಲ್ಲಕವಾಗಿ ಪರಿಗಣಿಸುತ್ತಾರೆ. ಇದರ ಹೀನತನ ಮತ್ತು ಕೆಟ್ಟ ದುಷ್ಪರಿಣಾಮಗಳನ್ನು ವೀಕ್ಷಿಸಿದರೆ ಇದು ಮರಣಕ್ಕೆ ಸಮಾನವಾಗಿದೆ. ಆದರೆ ಅನ್ಯಪುರುಷರ ಸ್ಥಿತಿ ಹೀಗಿರುವುದಿಲ್ಲ. ಏಕೆಂದರೆ ಸಾಮಾನ್ಯವಾಗಿ ಅವರ ಬಗ್ಗೆ ಎಚ್ಚರ ವಹಿಸಲಾಗುತ್ತದೆ.