عَنِ ابْنِ عَبَّاسٍ رَضِيَ اللَّهُ عَنْهُمَا عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«أَلْحِقُوا الفَرَائِضَ بِأَهْلِهَا، فَمَا بَقِيَ فَلِأَوْلَى رَجُلٍ ذَكَرٍ».
[صحيح] - [متفق عليه] - [صحيح البخاري: 6737]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
" 'ಫರಾಇದ್'ಗಳನ್ನು (ಆಸ್ತಿಯ ನಿಗದಿತ ಪಾಲುಗಳನ್ನು) ಅವುಗಳ ಹಕ್ಕುದಾರರಿಗೆ ತಲುಪಿಸಿರಿ. ನಂತರ ಏನು ಉಳಿಯುತ್ತದೆಯೋ, ಅದು ಅತ್ಯಂತ ಹತ್ತಿರದ ಪುರುಷ ಸಂಬಂಧಿಗೆ ಸೇರುತ್ತದೆ".
[صحيح] - [متفق عليه] - [صحيح البخاري - 6737]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುವುದೇನೆಂದರೆ, ಪಿತ್ರಾರ್ಜಿತ ಆಸ್ತಿಯನ್ನು ಹಂಚುವ ಜವಾಬ್ದಾರಿ ಹೊತ್ತವರು, ಅದನ್ನು ಅಲ್ಲಾಹು ಆದೇಶಿಸಿದಂತೆ ಅದರ ಹಕ್ಕುದಾರರಿಗೆ ನ್ಯಾಯಯುತವಾದ ಶರೀಅತ್ ಸಮ್ಮತ ಹಂಚಿಕೆಯ ಮೂಲಕ ವಿತರಿಸಬೇಕು. ಅಲ್ಲಾಹನ ಗ್ರಂಥದಲ್ಲಿ ನಿಗದಿಪಡಿಸಲಾದ ಪಾಲುಗಳನ್ನು ಹೊಂದಿರುವವರಿಗೆ ಅವರ ಪಾಲುಗಳನ್ನು ನೀಡಬೇಕು. ಅವು: ಮೂರನೇ ಎರಡಂಶ (2/3), ಮೂರನೇ ಒಂದಂಶ (1/3), ಆರನೇ ಒಂದಂಶ (1/6), ಅರ್ಧ (1/2), ಕಾಲು ಭಾಗ (1/4), ಮತ್ತು ಎಂಟನೇ ಒಂದಂಶ (1/8) ಆಗಿರುತ್ತದೆ. ನಂತರ ಏನು ಉಳಿಯುತ್ತದೆಯೋ, ಅದನ್ನು ಮೃತ ವ್ಯಕ್ತಿಗೆ ಪುರುಷರಲ್ಲಿ ಯಾರು ಅತ್ಯಂತ ಹತ್ತಿರದವರೋ ಅವರಿಗೆ ನೀಡಬೇಕು. ಅವರನ್ನು 'ಅಸಬಾ' (ಉಳಿಕೆ ಪಾಲುದಾರರು) ಎಂದು ಕರೆಯಲಾಗುತ್ತದೆ.