عَنْ عَائِشَةَ رضي الله عنها قَالَتْ:
كَانَ رَسُولُ اللَّهِ صَلَّى اللهُ عَلَيْهِ وَسَلَّمَ يَسْتَحِبُّ الْجَوَامِعَ مِنَ الدُّعَاءِ، وَيَدَعُ مَا سِوَى ذَلِكَ.
[صحيح] - [رواه أبو داود وأحمد] - [سنن أبي داود: 1482]
المزيــد ...
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳುತ್ತಾರೆ:
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಗ್ರವಾದ ಪ್ರಾರ್ಥನೆಗಳನ್ನು ಇಷ್ಟಪಡುತ್ತಿದ್ದರು ಮತ್ತು ಅದಕ್ಕೆ ಹೊರತಾದವುಗಳನ್ನು ಬಿಟ್ಟುಬಿಡುತ್ತಿದ್ದರು."
[صحيح] - [رواه أبو داود وأحمد] - [سنن أبي داود - 1482]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಹಲೋಕ ಮತ್ತು ಪರಲೋಕದ ಒಳಿತಿಗಾಗಿರುವ ಸಮಗ್ರವಾದ ಪ್ರಾರ್ಥನೆಗಳನ್ನು ಇಷ್ಟಪಡುತ್ತಿದ್ದರು. ಅವು ಕಡಿಮೆ ಪದಗಳನ್ನು ಹೊಂದಿರುವ ಮತ್ತು ವಿಶಾಲ ಅರ್ಥವನ್ನು ಒಳಗೊಂಡಿರುವ ಪ್ರಾರ್ಥನೆಗಳಾಗಿದ್ದವು. ಅವುಗಳಲ್ಲಿ ಅಲ್ಲಾಹನ ಸ್ತುತಿ ಮತ್ತು ಒಳಿತುಗಳ ಬೇಡಿಕೆ ಇರುತ್ತಿದ್ದವು. ಇದಲ್ಲದ ಇತರ ಪ್ರಾರ್ಥನೆಗಳನ್ನು ಅವರು ಪ್ರಾರ್ಥಿಸುತ್ತಿರಲಿಲ್ಲ.