عَنْ مَالِكِ بْنِ أَوْسِ بْنِ الْحَدَثَانِ أَنَّهُ قَالَ: أَقْبَلْتُ أَقُولُ مَنْ يَصْطَرِفُ الدَّرَاهِمَ؟ فَقَالَ طَلْحَةُ بْنُ عُبَيْدِ اللهِ وَهُوَ عِنْدَ عُمَرَ بْنِ الْخَطَّابِ رضي الله عنهما: أَرِنَا ذَهَبَكَ، ثُمَّ ائْتِنَا، إِذَا جَاءَ خَادِمُنَا، نُعْطِكَ وَرِقَكَ، فَقَالَ عُمَرُ بْنُ الْخَطَّابِ: كَلَّا، وَاللهِ لَتُعْطِيَنَّهُ وَرِقَهُ، أَوْ لَتَرُدَّنَّ إِلَيْهِ ذَهَبَهُ، فَإِنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«الْوَرِقُ بِالذَّهَبِ رِبًا، إِلَّا هَاءَ وَهَاءَ، وَالْبُرُّ بِالْبُرِّ رِبًا، إِلَّا هَاءَ وَهَاءَ، وَالشَّعِيرُ بِالشَّعِيرِ رِبًا، إِلَّا هَاءَ وَهَاءَ، وَالتَّمْرُ بِالتَّمْرِ رِبًا، إِلَّا هَاءَ وَهَاءَ».
[صحيح] - [متفق عليه] - [صحيح مسلم: 1586]
المزيــد ...
ಮಾಲಿಕ್ ಬಿನ್ ಔಸ್ ಬಿನ್ ಹದಸಾನ್ ರಿಂದ ವರದಿ. ಅವರು ಹೇಳಿದರು: "ಯಾರು ಚಿನ್ನದ ನಾಣ್ಯಗಳನ್ನು ವಿನಿಮಯ ಮಾಡುತ್ತೀರಿ?" ಎಂದು ಕೇಳುತ್ತಾ ನಾನು ಬಂದೆ. ಆಗ ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಯಿದ್ದ ತಲ್ಹ ಬಿನ್ ಉಬೈದುಲ್ಲಾ ಹೇಳಿದರು: "ನಮಗೆ ನಿನ್ನ ಚಿನ್ನದ ನಾಣ್ಯಗಳನ್ನು ತೋರಿಸು. ನಂತರ ನಮ್ಮ ಸೇವಕನು ಬಂದಾಗ ನಮ್ಮ ಬಳಿಗೆ ಬಾ. ನಾವು ನಿನಗೆ ಬೆಳ್ಳಿಯ ನಾಣ್ಯಗಳನ್ನು ನೀಡುತ್ತೇವೆ." ಆಗ ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಖಂಡಿತ ಇಲ್ಲ. ಅಲ್ಲಾಹನಾಣೆ! ನೀನು ಒಂದೋ ಅವನಿಗೆ ಅವನ ಬೆಳ್ಳಿ ನಾಣ್ಯಗಳನ್ನು (ಈಗಲೇ) ಕೊಡಬೇಕು. ಅಥವಾ ಅವನ ಚಿನ್ನದ ನಾಣ್ಯಗಳನ್ನು ಹಿಂದಿರುಗಿಸಬೇಕು. ಏಕೆಂದರೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಚಿನ್ನದ ಬದಲಿಗೆ ಬೆಳ್ಳಿ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು. ಗೋಧಿಯ ಬದಲಿಗೆ ಗೋಧಿ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು. ಬಾರ್ಲಿಯ ಬದಲಿಗೆ ಬಾರ್ಲಿ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು. ಖರ್ಜೂರದ ಬದಲಿಗೆ ಖರ್ಜೂರ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು."
[صحيح] - [متفق عليه] - [صحيح مسلم - 1586]
ತಾಬೀಈವರ್ಯರಾದ ಮಾಲಿಕ್ ಬಿನ್ ಔಸ್ ಹೇಳುವುದೇನೆಂದರೆ, ಅವರಲ್ಲಿ ಕೆಲವು ಚಿನ್ನದ ನಾಣ್ಯಗಳಿದ್ದವು. ಅವರು ಅದನ್ನು ಬೆಳ್ಳಿಯ ನಾಣ್ಯಗಳೊಂದಿಗೆ ವಿನಿಮಯ ಮಾಡಲು ಬಯಸಿದ್ದರು. ಆಗ ತಲ್ಹ ಬಿನ್ ಉಬೈದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ನಿನ್ನ ಚಿನ್ನದ ನಾಣ್ಯಗಳನ್ನು ನಮಗೆ ತೋರಿಸು." ನಂತರ ಅದನ್ನು ಖರೀದಿಸಲು ದಿಟ್ಟ ನಿರ್ಧಾರ ತೆಗೆದುಕೊಂಡ ಬಳಿಕ ಅವರು ಹೇಳಿದರು: "ನಮ್ಮ ಸೇವಕನು ಬಂದಾಗ ನಮ್ಮ ಬಳಿಗೆ ಬಾ. ಆಗ ನಾವು ನಿನಗೆ ಅದಕ್ಕೆ ಬದಲಾಗಿ ಬೆಳ್ಳಿಯ ನಾಣ್ಯಗಳನ್ನು ನೀಡುತ್ತೇವೆ." ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಿ ಅವರ ಬಳಿ ಉಪಸ್ಥಿತರಿದ್ದರು. ಅವರು ಈ ರೀತಿಯ ವ್ಯವಹಾರವನ್ನು ಖಂಡಿಸಿ, ಆಣೆ ಮಾಡುತ್ತಾ ತಲ್ಹರಿಗೆ, ನೀನು ಒಂದೋ ಅವನಿಗೆ ಈಗಲೇ ಬೆಳ್ಳಿಯ ನಾಣ್ಯಗಳನ್ನು ನೀಡಬೇಕು ಅಥವಾ ಅವನ ಚಿನ್ನದ ನಾಣ್ಯಗಳನ್ನು ಹಿಂದಿರುಗಿಸಬೇಕು ಎಂದು ಹೇಳಿದರು. ನಂತರ ಅದನ್ನು ವಿವರಿಸುತ್ತಾ, ಬೆಳ್ಳಿಯನ್ನು ಚಿನ್ನಕ್ಕೆ ಮತ್ತು ಚಿನ್ನವನ್ನು ಬೆಳ್ಳಿಗೆ ಖರೀದಿಸುವುದು ನೇರವಾಗಿ ಕೊಡು-ಕೊಳ್ಳುವ ರೀತಿಯಲ್ಲಿರುವುದು ಕಡ್ಡಾಯವಾಗಿದೆ, ಹಾಗಾಗದಿದ್ದರೆ ಅದು ನಿಷಿದ್ಧ ಬಡ್ಡಿಯಾಗುತ್ತದೆ ಮತ್ತು ಆ ವ್ಯವಹಾರವು ಅಸಿಂಧವಾಗುತ್ತದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದಾರೆಂದು ಹೇಳಿದರು. ಆದ್ದರಿಂದ ಚಿನ್ನವನ್ನು ಬೆಳ್ಳಿಗಾಗಿ ಮತ್ತು ಬೆಳ್ಳಿಯನ್ನು ಚಿನ್ನಕ್ಕಾಗಿ ಕೈಯಿಂದ ಕೈಗೆ ನೇರವಾಗಿ ಹಸ್ತಾಂತರಿಸುವ ಮೂಲಕವಲ್ಲದೆ ಖರೀದಿಸಬಾರದು. ಜವೆಯನ್ನು ಜವೆಗಾಗಿ, ಗೋಧಿಯನ್ನು ಗೋಧಿಗಾಗಿ, ಬಾರ್ಲಿಯನ್ನು ಬಾರ್ಲಿಗಾಗಿ, ಖರ್ಜೂರವನ್ನು ಖರ್ಜೂರಕ್ಕಾಗಿ ಸಮಾನ ಗುಣಮಟ್ಟದಲ್ಲಿ, ಸಮಾನ ತೂಕದಲ್ಲಿ, ಸಮಾನ ಅಳತೆಯಲ್ಲಿ ಕೈಯಿಂದ ಕೈಗೆ ನೇರವಾಗಿ ಹಸ್ತಾಂತರಿಸುವ ಮೂಲಕವಲ್ಲದೆ ಮಾರಾಟ ಮಾಡಬಾರದು. ಈಗ ಕೊಟ್ಟು ಮತ್ತೆ ಪಡೆದುಕೊಳ್ಳುವ ರೀತಿಯಲ್ಲಿ ಮಾರಾಟ ಮಾಡಬಾರದು. ಎರಡೂ ಕಡೆಯವರು ತಮ್ಮ ತಮ್ಮ ವಸ್ತುಗಳನ್ನು ಪಡೆಯುವುದಕ್ಕೆ ಮುನ್ನ ಬೇರ್ಪಡಬಾರದು.