ಹದೀಸ್‌ಗಳ ಪಟ್ಟಿ

ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ನನಗೆ ನನ್ನ ನೆರೆಹೊರೆಯವರ ಬಗ್ಗೆ ನಿರಂತರ ಉಪದೇಶ ಮಾಡುತ್ತಲೇ ಇದ್ದರು. ಎಲ್ಲಿಯವರೆಗೆಂದರೆ ಅವರು ನನ್ನ ನೆರೆಯವನನ್ನು ನನ್ನ ಆಸ್ತಿಯಲ್ಲಿ ಹಕ್ಕುದಾರನನ್ನಾಗಿ ಮಾಡುತ್ತಾರೋ ಎಂದು ನಾನು ಭಾವಿಸತೊಡಗಿದೆ
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹರಕೆಯನ್ನು ನಿಷೇಧಿಸಿದರು ಮತ್ತು ಹೇಳಿದರು: "ಅದು ಯಾವುದೇ ಒಳಿತನ್ನು ತರುವುದಿಲ್ಲ. ಅದರಿಂದ ಜಿಪುಣನಲ್ಲಿರುವ (ಹಣವನ್ನು) ಮಾತ್ರ ಹೊರತೆಗೆಯಲಾಗುತ್ತದೆ
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ, ಅಲ್ಲಾಹನಾಣೆ! ಅಲ್ಲಾಹು ಇಚ್ಛಿಸಿದರೆ, ನಾನು ಒಂದು ಕಾರ್ಯವನ್ನು ಮಾಡುತ್ತೇನೆಂದು ಪ್ರತಿಜ್ಞೆ ಮಾಡಿ, ನಂತರ ನನಗೆ ಇನ್ನೊಂದು ಕಾರ್ಯವು ಅದಕ್ಕಿಂತ ಉತ್ತಮವೆಂದು ಕಂಡರೆ, ನಾನು ನನ್ನ ಪ್ರತಿಜ್ಞೆಗೆ ಪರಿಹಾರ ನೀಡಿ, ಆ ಉತ್ತಮವಾದ ಕಾರ್ಯವನ್ನು ಮಾಡುತ್ತೇನೆ
عربي ಆಂಗ್ಲ ಉರ್ದು
ಯಾರು ಪುನರುತ್ಥಾನ ದಿನದ ಕಷ್ಟಗಳಿಂದ ಅಲ್ಲಾಹು ತನ್ನನ್ನು ರಕ್ಷಿಸಬೇಕೆಂದು ಬಯಸುತ್ತಾನೋ, ಅವನು ಕಷ್ಟದಲ್ಲಿರುವವನಿಗೆ ಸಹಾಯ ಮಾಡಲಿ ಅಥವಾ ಅವನ ಸಾಲವನ್ನು ಮನ್ನಾ ಮಾಡಲಿ
عربي ಆಂಗ್ಲ ಉರ್ದು
ಚಿನ್ನದ ಬದಲಿಗೆ ಬೆಳ್ಳಿ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು. ಗೋಧಿಯ ಬದಲಿಗೆ ಗೋಧಿ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು. ಬಾರ್ಲಿಯ ಬದಲಿಗೆ ಬಾರ್ಲಿ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು. ಖರ್ಜೂರದ ಬದಲಿಗೆ ಖರ್ಜೂರ ನೀಡುವುದು ಬಡ್ಡಿಯಾಗಿದೆ. ಸ್ಥಳದಲ್ಲೇ ವಿನಿಮಯ ಮಾಡುವುದರ ಹೊರತು
عربي ಆಂಗ್ಲ ಉರ್ದು
ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿರುವವನು ಅವುಗಳ ಹಕ್ಕನ್ನು (ಝಕಾತನ್ನು) ನೀಡದಿದ್ದರೆ, ಪುನರುತ್ಥಾನ ದಿನದಂದು ಅವುಗಳನ್ನು ಅಗ್ನಿಯ ಹಾಳೆಗಳಾಗಿ ಪರಿವರ್ತಿಸಿ, ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಲಾಗುವುದು
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ಅಸುನೀಗಿದರೆ ಅವನ ಕರ್ಮಗಳೆಲ್ಲವೂ ಮುಕ್ತಾಯವಾಗುತ್ತವೆ. ಆದರೆ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ನಡೆಯುತ್ತಿರುವ ದಾನ-ಧರ್ಮಗಳು, ಪ್ರಯೋಜನಪಡೆಯಲಾಗುತ್ತಿರುವ ಜ್ಞಾನಗಳು ಮತ್ತು ಅವನಿಗಾಗಿ ಪ್ರಾರ್ಥಿಸುವ ಅವನ ನೀತಿವಂತ ಮಕ್ಕಳು
عربي ಆಂಗ್ಲ ಉರ್ದು
ಓ ಅಲ್ಲಾಹನ ಸಂದೇಶವಾಹಕರೇ! ಉಮ್ಮು ಸಅದ್ ನಿಧನರಾದರು. ಅವರ ಹೆಸರಲ್ಲಿ ಯಾವ ದಾನಧರ್ಮವು ಶ್ರೇಷ್ಠವಾಗಿದೆ?" ಅವರು ಉತ್ತರಿಸಿದರು: "ನೀರು." ಆಗ ಅವರು ಒಂದು ಬಾವಿ ತೋಡಿದರು. ಮತ್ತು ಹೇಳಿದರು: "ಇದು ಉಮ್ಮು ಸಅದ್‌ರಿಗೆ
عربي ಆಂಗ್ಲ ಉರ್ದು
ಯಾರು ಆಣೆ ಹಾಕಿ ಒಬ್ಬ ಮುಸಲ್ಮಾನನ ಹಕ್ಕನ್ನು ಕಸಿದುಕೊಳ್ಳುತ್ತಾನೋ, ಅಲ್ಲಾಹು ಅವನಿಗೆ ನರಕವನ್ನು ಕಡ್ಡಾಯಗೊಳಿಸುತ್ತಾನೆ ಮತ್ತು ಸ್ವರ್ಗವನ್ನು ನಿಷಿದ್ಧಗೊಳಿಸುತ್ತಾನೆ." ಆಗ ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಅದು ಅಲ್ಪ ಪ್ರಮಾಣದ್ದಾಗಿದ್ದರೂ ಸಹ?" ಅವರು ಹೇಳಿದರು: "ಹೌದು, ಅದು ಅರಾಕ್ ಮರದ ಒಂದು ಸಣ್ಣ ಕಡ್ಡಿಯಾಗಿದ್ದರೂ ಸಹ
عربي ಆಂಗ್ಲ ಉರ್ದು