عَنِ ابْنِ عُمَرَ رضي الله عنهما:
عَنِ النَّبِيِّ صَلَّى اللهُ عَلَيْهِ وَسَلَّمَ أَنَّهُ نَهَى عَنِ النَّذْرِ، وَقَالَ: «إِنَّهُ لَا يَأْتِي بِخَيْرٍ، وَإِنَّمَا يُسْتَخْرَجُ بِهِ مِنَ الْبَخِيلِ».
[صحيح] - [متفق عليه] - [صحيح مسلم: 1639]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹರಕೆಯನ್ನು ನಿಷೇಧಿಸಿದರು ಮತ್ತು ಹೇಳಿದರು: "ಅದು ಯಾವುದೇ ಒಳಿತನ್ನು ತರುವುದಿಲ್ಲ. ಅದರಿಂದ ಜಿಪುಣನಲ್ಲಿರುವ (ಹಣವನ್ನು) ಮಾತ್ರ ಹೊರತೆಗೆಯಲಾಗುತ್ತದೆ."
[صحيح] - [متفق عليه] - [صحيح مسلم - 1639]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹರಕೆಯನ್ನು ನಿಷೇಧಿಸಿದರು. ಹರಕೆ ಎಂದರೆ, ಶಾಸನಕರ್ತನು (ಅಲ್ಲಾಹು) ಕಡ್ಡಾಯಗೊಳಿಸದ ಒಂದು ಕಾರ್ಯವನ್ನು ಮನುಷ್ಯನು ಸ್ವಯಂ ಕಡ್ಡಾಯಗೊಳಿಸುವುದಾಗಿದೆ. ಅವರು ಹೇಳುವುದೇನೆಂದರೆ, ಹರಕೆಯು ಏನನ್ನೂ ಮುಂದಕ್ಕೆ ತರುವುದಿಲ್ಲ ಮತ್ತು ಏನನ್ನೂ ಹಿಂದಕ್ಕೆ ತಳ್ಳುವುದಿಲ್ಲ. ಕಡ್ಡಾಯವಾಗಿ ಖರ್ಚು ಮಾಡಬೇಕಾದ ಕಾರ್ಯಕ್ಕೆ ಮಾತ್ರ ಖರ್ಚು ಮಾಡುವ ಜಿಪುಣನಿಂದ ಅವನ ಹಣವನ್ನು ಹೊರೆತೆಗೆಯುವ ಕೆಲಸವನ್ನಷ್ಟೇ ಅದು ಮಾಡುತ್ತದೆ. ಅಲ್ಲಾಹು ಅವನ ಪಾಲಿಗೆ ನಿರ್ಣಯಿಸದ ಏನನ್ನೂ ಹರಕೆ ಅವನಿಗೆ ತಂದುಕೊಡುವುದಿಲ್ಲ.