عَنْ أَبِي هُرَيْرَةَ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ يَقُولُ:
«تَهَادَوا تَحَابُّوا».
[حسن] - [رواه البخاري في الأدب المفرد وأبو يعلى والبيهقي] - [الأدب المفرد: 594]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು:
"ಪರಸ್ಪರ ಉಡುಗೊರೆಗಳನ್ನು ನೀಡಿರಿ, (ಆಗ) ನೀವು ಪರಸ್ಪರ ಪ್ರೀತಿಸುವಿರಿ".
[حسن] - [رواه البخاري في الأدب المفرد وأبو يعلى والبيهقي] - [الأدب المفرد - 594]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ಮುಸ್ಲಿಂ ತನ್ನ ಮುಸ್ಲಿಂ ಸಹೋದರನೊಂದಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಪ್ರೋತ್ಸಾಹಿಸಿದ್ದಾರೆ. ಉಡುಗೊರೆಯು ಪ್ರೀತಿಗೆ ಮತ್ತು ಹೃದಯಗಳನ್ನು ಬೆಸೆಯಲು ಕಾರಣವಾಗುತ್ತದೆ.