+ -

عَنْ أَنَسِ بْنِ مَالِكٍ رَضيَ اللهُ عنهُ قَالَ:
وُقِّتَ لَنَا فِي قَصِّ الشَّارِبِ، وَتَقْلِيمِ الْأَظْفَارِ، وَنَتْفِ الْإِبِطِ، وَحَلْقِ الْعَانَةِ، أَلَّا نَتْرُكَ أَكْثَرَ مِنْ أَرْبَعِينَ لَيْلَةً.

[صحيح] - [رواه مسلم] - [صحيح مسلم: 258]
المزيــد ...

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಮೀಸೆಯನ್ನು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವುದು, ಕಂಕುಳಿನ ಕೂದಲನ್ನು ಕೀಳುವುದು, ಮತ್ತು ಗುಪ್ತಾಂಗದ (ಸುತ್ತಲಿನ) ಕೂದಲನ್ನು ಬೋಳಿಸುವುದು – ಇವುಗಳಲ್ಲಿ ನಾವು ನಲವತ್ತು ರಾತ್ರಿಗಳಿಗಿಂತ ಹೆಚ್ಚು ಕಾಲ (ಅವುಗಳನ್ನು ಹಾಗೆಯೇ) ಬಿಡಬಾರದೆಂದು ನಮಗೆ ಸಮಯವನ್ನು ನಿಗದಿಪಡಿಸಲಾಗಿದೆ."

[صحيح] - [رواه مسلم] - [صحيح مسلم - 258]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುರುಷನ ಮೀಸೆಯನ್ನು ಕತ್ತರಿಸುವುದು, ಕೈ ಮತ್ತು ಕಾಲುಗಳ ಉಗುರುಗಳನ್ನು ಕತ್ತರಿಸುವುದು, ಕಂಕುಳಿನ ಕೂದಲನ್ನು ಕೀಳುವುದು, ಮತ್ತು ಗುಪ್ತಾಂಗದ ಕೂದಲನ್ನು ಬೋಳಿಸುವುದು – ಇವುಗಳನ್ನು ನಲವತ್ತು ದಿನಗಳಿಗಿಂತ ಹೆಚ್ಚು ಕಾಲ ಬಿಡಬಾರದೆಂದು ಸಮಯವನ್ನು ನಿಗದಿಪಡಿಸಿದರು.

ಹದೀಸಿನ ಪ್ರಯೋಜನಗಳು

  1. ಇಮಾಮ್ ಶೌಕಾನಿ ಹೇಳುತ್ತಾರೆ: "ಸರಿಯಾದ ಅಭಿಪ್ರಾಯವೇನೆಂದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಗದಿಪಡಿಸಿದ ನಲವತ್ತು (ದಿನಗಳ) ಮಿತಿಯನ್ನು ಪಾಲಿಸಬೇಕು. ಅದನ್ನು ಮೀರುವುದು ಅನುಮತಿಸಲಾಗಿಲ್ಲ. ಆದರೆ, (ಕೂದಲು, ಉಗುರು) ಬೆಳೆದ ನಂತರ ಆ ಅಂತಿಮ ಸಮಯವು ಮುಗಿಯುವವರೆಗೆ ಕತ್ತರಿಸುವುದು ಇತ್ಯಾದಿಗಳನ್ನು ಬಿಟ್ಟವನು ಸುನ್ನತ್‌ಗೆ ವಿರುದ್ಧವಾಗಿ ಸಾಗಿದನೆಂದು ಪರಿಗಣಿಸಲಾಗುವುದಿಲ್ಲ."
  2. ಇಬ್ನ್ ಹುಬೈರಾ ಹೇಳುತ್ತಾರೆ: "ಈ ಹದೀಸ್ ಆ ಕಾರ್ಯಗಳನ್ನು ವಿಳಂಬಿಸಲು ಇರುವ ಅಂತಿಮ ಮಿತಿಯಾಗಿದೆ. ಆದರೆ ಈ ಮಿತಿಗಿಂತ ಮುಂಚೆಯೇ ಆ ಕಾರ್ಯಗಳನ್ನು ಮಾಡುವುದು ಉತ್ತಮ."
  3. ಇಸ್ಲಾಂ ಸ್ವಚ್ಛತೆ, ಶುದ್ಧೀಕರಣ ಮತ್ತು ಅಲಂಕಾರಕ್ಕೆ ನೀಡುವ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.
  4. ಮೀಸೆಯನ್ನು ಕತ್ತರಿಸುವುದು: ಮೇಲ್ತುಟಿಯ ಮೇಲೆ ಬೆಳೆಯುವ ಕೂದಲಿನ ಸ್ವಲ್ಪ ಭಾಗವನ್ನು ಕತ್ತರಿಸುವುದು.
  5. ಕಂಕುಳಿನ ಕೂದಲನ್ನು ಕೀಳುವುದು: ಅಲ್ಲಿ ಬೆಳೆಯುವ ಕೂದಲನ್ನು ನಿವಾರಿಸುವುದು. ಇದು ತೋಳಿನ ಕೀಲು ಮತ್ತು ಭುಜದ ಕೆಳಗಿರುವ ಸ್ಥಳವಾಗಿದೆ.
  6. ಗುಪ್ತಾಂಗದ ಕೂದಲನ್ನು ಬೋಳಿಸುವುದು: ಇದು ಪುರುಷ ಮತ್ತು ಮಹಿಳೆಯ ಜನನಾಂಗದ ಸುತ್ತಲೂ ಬೆಳೆಯುವ ಒರಟು ಕೂದಲಾಗಿದೆ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು