عَنْ جَابِرِ بْنِ عَبْدِ اللَّهِ رَضيَ اللهُ عنهُما قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«مَا أَسْكَرَ كَثِيرُهُ فَقَلِيلُهُ حَرَامٌ».
[حسن] - [رواه أبو داود والترمذي وابن ماجه وأحمد] - [سنن أبي داود: 3681]
المزيــد ...
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು(ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಯಾವುದರ ಹೆಚ್ಚಿನ ಪ್ರಮಾಣವು ಅಮಲೇರಿಸುತ್ತದೆಯೋ, ಅದರ ಕಡಿಮೆ ಪ್ರಮಾಣವೂ ಹರಾಮ್ (ನಿಷಿದ್ಧ) ಆಗಿದೆ".
[حسن] - [رواه أبو داود والترمذي وابن ماجه وأحمد] - [سنن أبي داود - 3681]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಯಾವುದೇ ಪಾನೀಯ ಅಥವಾ ಆಹಾರವು ಅದರ ಹೆಚ್ಚಿನ ಪ್ರಮಾಣವನ್ನು ಸೇವಿಸಿದಾಗ ಬುದ್ಧಿಯ ಸ್ಥಿಮಿತವನ್ನು ತಪ್ಪಿಸುತ್ತದೆಯೋ, ಅದರ ಕಡಿಮೆ ಪ್ರಮಾಣವನ್ನು ಸೇವಿಸುವುದು ಕೂಡ ನಿಷಿದ್ಧವಾಗಿದೆ. ಆ ಕಡಿಮೆ ಪ್ರಮಾಣವು ಬುದ್ಧಿಯ ಸ್ಥಿಮಿತವನ್ನು ತಪ್ಪಿಸದಿದ್ದರೂ ಸಹ.