عَنِ ابْنِ عُمَرَ رَضيَ اللهُ عنهما قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِنَّ أَحَبَّ أَسْمَائِكُمْ إِلَى اللهِ عَبْدُ اللهِ وَعَبْدُ الرَّحْمَنِ».
[صحيح] - [رواه مسلم] - [صحيح مسلم: 2132]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಅಲ್ಲಾಹನಿಗೆ ನಿಮ್ಮ ಹೆಸರುಗಳಲ್ಲಿ ಅತ್ಯಂತ ಪ್ರಿಯವಾದವು 'ಅಬ್ದುಲ್ಲಾಹ್' (ಅಲ್ಲಾಹನ ದಾಸ) ಮತ್ತು 'ಅಬ್ದುರ್ರಹ್ಮಾನ್' (ಪರಮ ದಯಾಳುವಿನ ದಾಸ)".
[صحيح] - [رواه مسلم] - [صحيح مسلم - 2132]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಹೆಸರುಗಳು ಗಂಡು ಮಕ್ಕಳಿಗೆ 'ಅಬ್ದುಲ್ಲಾಹ್' ಅಥವಾ 'ಅಬ್ದುರ್ರಹ್ಮಾನ್' ಎಂದು ಹೆಸರಿಡುವುದಾಗಿದೆ.