عن ابن عمر رضي الله عنهما:
أَنَّ رَسُولَ اللهِ صَلَّى اللهُ عَلَيْهِ وَسَلَّمَ نَهَى عَنِ الْقَزَعِ.
[صحيح] - [متفق عليه] - [صحيح البخاري: 5921]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
"ತಲೆಯ ಒಂದು ಭಾಗವನ್ನು ಬೋಳಿಸಿ ಇನ್ನೊಂದು ಭಾಗವನ್ನು ಬೋಳಿಸದಿರುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ."
[صحيح] - [متفق عليه] - [صحيح البخاري - 5921]
ತಲೆಯ ಒಂದು ಭಾಗವನ್ನು ಬೋಳಿಸಿ ಇನ್ನೊಂದು ಭಾಗವನ್ನು ಬೋಳಿಸದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ.
ಈ ವಿರೋಧವು ಪುರುಷರಲ್ಲಿ ಹಿರಿಯರು ಮತ್ತು ಕಿರಿಯರೆಲ್ಲರಿಗೂ ಅನ್ವಯವಾಗುತ್ತದೆ. ಮಹಿಳೆಯರು ತಲೆಗೂದಲನ್ನು ಬೋಳಿಸಬಾರದು.