عن أبي هريرة رضي الله عنه قال:
لعن رسول الله صلى الله عليه وسلم الرجل يلبس لِبْسَةَ المرأة، والمرأة تلبس لِبْسَةَ الرجل.
[صحيح] - [رواه النسائي في الكبرى وابن ماجه بمعناه وأحمد] - [السنن الكبرى للنسائي: 9209]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಸ್ತ್ರೀಯರ ಉಡುಪನ್ನು ಧರಿಸುವ ಪುರುಷನನ್ನು ಮತ್ತು ಪುರುಷರ ಉಡುಪನ್ನು ಧರಿಸುವ ಸ್ತ್ರೀಯನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಪಿಸಿದ್ದಾರೆ."
[صحيح] - - [السنن الكبرى للنسائي - 9209]
ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವ ಉಡುಪುಗಳನ್ನು ಧರಿಸಿ ಮಹಿಳೆಯರನ್ನು ಅನುಕರಿಸುವ ಪ್ರತಿಯೊಬ್ಬ ಪುರುಷನೂ ಅಲ್ಲಾಹನ ಕರುಣೆಯಿಂದ ದೂರವಾಗಲಿ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸಿದರು. ಅನುಕರಿಸುವುದು ನೋಟದಲ್ಲಿ, ಬಣ್ಣದಲ್ಲಿ, ರೀತಿಯಲ್ಲಿ, ಉಡುಪು ಧರಿಸುವ ವಿಧಾನದಲ್ಲಿ, ಅಲಂಕಾರದಲ್ಲಿ ಅಥವಾ ಬೇರೆ ಯಾವುದರಲ್ಲಾಗಿದ್ದರೂ ಎಲ್ಲವೂ ಇದರಲ್ಲಿ ಒಳಪಡುತ್ತವೆ. ಅದೇ ರೀತಿ, ಪುರುಷರಿಗೆ ಮಾತ್ರ ಸೀಮಿತವಾಗಿರುವ ಉಡುಪುಗಳನ್ನು ಧರಿಸಿ ಪುರುಷರನ್ನು ಅನುಕರಿಸುವ ಮಹಿಳೆಯು ಕೂಡ. ಈ ರೀತಿ ಮಾಡುವುದು ಮಹಾಪಾಪಗಳಲ್ಲಿ ಒಂದಾಗಿದೆ.