عن عبد الله بن عمر رضي الله عنهما قال:
لعن النبي صلى الله عليه وسلم الوَاصِلَةَ والمُسْتَوْصِلَةَ، والوَاشِمَةَ والمُسْتَوشِمَةَ.
[صحيح] - [متفق عليه] - [صحيح البخاري: 5947]
المزيــد ...
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ವಾಸಿಲಾ' (ಕೂದಲಿಗೆ ಬೇರೆ ಕೂದಲನ್ನು ಸೇರಿಸುವವಳು), 'ಮುಸ್ತೌಸಿಲಾ' (ಕೂದಲಿಗೆ ಬೇರೆ ಕೂದಲನ್ನು ಸೇರಿಸಿಕೊಳ್ಳುವಂತೆ ಹೇಳುವವಳು), 'ವಾಶಿಮಾ' (ಹಚ್ಚೆ ಹಾಕುವವಳು), ಮತ್ತು 'ಮುಸ್ತೌಶಿಮಾ' (ಹಚ್ಚೆ ಹಾಕಿಸಿಕೊಳ್ಳುವವಳು) ಇವರನ್ನು ಶಪಿಸಿದರು.
[صحيح] - [متفق عليه] - [صحيح البخاري - 5947]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಲ್ಕು ವರ್ಗದವರ ಮೇಲೆ ಶಾಪವಿರಲಿ (ಅಲ್ಲಾಹನ ಕರುಣೆಯಿಂದ ದೂರವಾಗುವುದು) ಎಂದು ಪ್ರಾರ್ಥಿಸಿದರು: ಮೊದಲನೆಯವರು: 'ವಾಸಿಲಾ' - ತನ್ನ ಅಥವಾ ಇತರರ ಕೂದಲಿಗೆ ಬೇರೆ ಕೂದಲನ್ನು ಸೇರಿಸುವವಳು. ಎರಡನೆಯವರು: 'ಮುಸ್ತೌಸಿಲಾ' - ತನ್ನ ಕೂದಲಿಗೆ ಬೇರೆ ಕೂದಲನ್ನು ಸೇರಿಸುವಂತೆ ಇತರರನ್ನು ಕೇಳುವವಳು. ಮೂರನೆಯವರು: 'ವಾಶಿಮಾ' - ಸೌಂದರ್ಯ ಮತ್ತು ಅಲಂಕಾರಕ್ಕಾಗಿ ದೇಹದ ಯಾವುದೇ ಭಾಗದಲ್ಲಿ, ಉದಾಹರಣೆಗೆ ಮುಖ, ಕೈ ಅಥವಾ ಎದೆಯಲ್ಲಿ, ಸೂಜಿಯಿಂದ ಚುಚ್ಚಿ, ಅದರಲ್ಲಿ ಸುರ್ಮಾ ಅಥವಾ ಅಂತಹುದನ್ನು ಹಾಕಿ, ಅದರ ಗುರುತು ನೀಲಿ ಅಥವಾ ಹಸಿರಾಗುವಂತೆ ಮಾಡುವವಳು. ನಾಲ್ಕನೆಯವರು: 'ಮುಸ್ತೌಶಿಮಾ' - ತನಗೆ ಹಚ್ಚೆ ಹಾಕುವಂತೆ ಕೇಳುವವಳು. ಈ ಕಾರ್ಯಗಳು ಮಹಾಪಾಪಗಳಲ್ಲಿ (ಕಬಾಇರ್) ಸೇರಿವೆ.