عَنْ أَبِي هُرَيْرَةَ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«مَا أَسْفَلَ مِنَ الكَعْبَيْنِ مِنَ الإِزَارِ فَفِي النَّارِ».
[صحيح] - [رواه البخاري] - [صحيح البخاري: 5787]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಇಝಾರ್‌ನಲ್ಲಿ (ಲುಂಗಿ, ಧೋತಿ, ಪ್ಯಾಂಟು) ಹರಡುಗಂಟುಗಳಿಗಿಂತ ಕೆಳಗಿರುವ ಭಾಗವು ನರಕಾಗ್ನಿಯಲ್ಲಿರುವುದು."
[صحيح] - [رواه البخاري] - [صحيح البخاري - 5787]
ತಮ್ಮ ದೇಹದ ಕೆಳಗಿನ ಭಾಗವನ್ನು ಮುಚ್ಚುವ ಲುಂಗಿ, ಪ್ಯಾಂಟು ಅಥವಾ ಇನ್ನಾವುದೇ ವಸ್ತುವನ್ನು ಪಾದದ ಹರಡುಗಂಟುಗಳಿಗಿಂತ ಕೆಳಗೆ ಇಳಿಬಿಡುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಪುರುಷರನ್ನು ಎಚ್ಚರಿಸಿದ್ದಾರೆ. ಇಝಾರ್ ಅನ್ನು ಇಳಿಬಿಡುವವನ ಪಾದದ ಹರಡುಗಂಟುಗಳ ಕೆಳಗಿನ ಭಾಗವು ನರಕಾಗ್ನಿಯಲ್ಲಿರುತ್ತದೆ. ಇದು ಅವನು ಮಾಡಿದ ಕೃತ್ಯಕ್ಕೆ ಶಿಕ್ಷೆಯಾಗಿದೆ.