عَنْ عَبْدِ اللهِ بْنِ عَمْرٍو رَضيَ اللهُ عنهما قَالَ:
رَجَعْنَا مَعَ رَسُولِ اللهِ صَلَّى اللهُ عَلَيْهِ وَسَلَّمَ مِنْ مَكَّةَ إِلَى الْمَدِينَةِ حَتَّى إِذَا كُنَّا بِمَاءٍ بِالطَّرِيقِ تَعَجَّلَ قَوْمٌ عِنْدَ الْعَصْرِ، فَتَوَضَّؤُوا وَهُمْ عِجَالٌ، فَانْتَهَيْنَا إِلَيْهِمْ وَأَعْقَابُهُمْ تَلُوحُ لَمْ يَمَسَّهَا الْمَاءُ فَقَالَ رَسُولُ اللهِ صَلَّى اللهُ عَلَيْهِ وَسَلَّمَ: «وَيْلٌ لِلْأَعْقَابِ مِنَ النَّارِ أَسْبِغُوا الْوُضُوءَ».
[صحيح] - [متفق عليه] - [صحيح مسلم: 241]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದಿಂದ ಮದೀನಕ್ಕೆ ಹಿಂದಿರುಗಿದೆವು. ಹೀಗೆ ನಾವು ದಾರಿ ಮಧ್ಯೆ ಒಂದು ನೀರಿನ ಸ್ಥಳ ತಲುಪಿದಾಗ, ಅಸರ್ ನಮಾಝ್‌ನ ಸಮಯದಲ್ಲಿ ನಮ್ಮಲ್ಲಿ ಒಂದು ಗುಂಪು ಜನರು ಆತುರದಿಂದ ಓಡಿ ಆತುರದಿಂದ ವುದೂ ನಿರ್ವಹಿಸಿದರು. ನಾವು ಅವರ ಬಳಿಗೆ ತಲುಪಿದಾಗ, ಅವರ ಹಿಮ್ಮಡಿಗಳು ನೀರು ತಾಗದಂತೆ ಕಾಣುತ್ತಿದ್ದವು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಿಮ್ಮಡಿಗಳಿಗೆ ನರಕಾಗ್ನಿಯಿಂದ ವಿನಾಶವಿದೆ. ಪೂರ್ಣವಾಗಿ ವುದೂ ನಿರ್ವಹಿಸಿರಿ."
[صحيح] - [متفق عليه] - [صحيح مسلم - 241]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರೊಂದಿಗೆ ಮಕ್ಕಾದಿಂದ ಮದೀನಕ್ಕೆ ಪ್ರಯಾಣ ಬೆಳೆಸಿದರು. ದಾರಿಮಧ್ಯೆ ಅವರು ನೀರನ್ನು ಕಂಡರು. ಆಗ ಕೆಲವು ಸಹಾಬಿಗಳು ಅಸರ್ ನಮಾಝ್‌ಗೆ ವುದೂ ಮಾಡಲು ಆತುರದಿಂದ ಓಡಿದರು. ಅವರು ಎಷ್ಟರಮಟ್ಟಿಗೆ ಆತುರಪಟ್ಟರೆಂದರೆ, ಅವರ ಪಾದಗಳ ಹಿಂಭಾಗವು ನೋಡುಗರಿಗೆ ನೀರು ತಾಗದೆ ಒಣಗಿರುವಂತೆ ಕಾಣಿಸುತ್ತಿದ್ದವು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ವುದೂ ನಿರ್ವಹಿಸುವಾಗ ಪಾದದ ಹಿಂಭಾಗವನ್ನು ಸರಿಯಾಗಿ ತೊಳೆಯದವರಿಗೆ ನರಕದಲ್ಲಿ ಶಿಕ್ಷೆ ಮತ್ತು ವಿನಾಶವಿದೆ. ವುದೂವನ್ನು ಪೂರ್ಣವಾಗಿ ನಿರ್ವಹಿಸಲು ಪೂರ್ಣ ಗಮನ ನೀಡಿರಿ ಎಂದು ಅವರು ಆದೇಶಿಸಿದರು.