+ -

عَنْ أَبِي هُرَيْرَةَ رضي الله عنه أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«إِذَا تَوَضَّأَ أَحَدُكُمْ فَلْيَجْعَلْ فِي أَنْفِهِ ثُمَّ لِيَنْثُرْ، وَمَنِ اسْتَجْمَرَ فَلْيُوتِرْ، وَإِذَا اسْتَيْقَظَ أَحَدُكُمْ مِنْ نَوْمِهِ فَلْيَغْسِلْ يَدَهُ قَبْلَ أَنْ يُدْخِلَهَا فِي وَضُوئِهِ، فَإِنَّ أَحَدَكُمْ لاَ يَدْرِي أَيْنَ بَاتَتْ يَدُهُ». ولفظ مسلم: «إِذَا اسْتَيْقَظَ أَحَدُكُمْ مِنْ نَوْمِهِ فَلَا يَغْمِسْ يَدَهُ فِي الْإِنَاءِ حَتَّى يَغْسِلَهَا ثَلَاثًا، فَإِنَّهُ لَا يَدْرِي أَيْنَ بَاتَتْ يَدُهُ».

[صحيح] - [متفق عليه] - [صحيح البخاري: 162]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬರು ವುದೂ (ಅಂಗಸ್ನಾನ) ಮಾಡುವಾಗ, ಮೂಗಿಗೆ ನೀರನ್ನು ಎಳೆದು ಹೊರಬಿಡಲಿ. ನಿಮ್ಮಲ್ಲೊಬ್ಬನು ಇಸ್ತಿಜ್ಮಾರ್ (ಕಲ್ಲು ಮುಂತಾದ ವಸ್ತುಗಳಿಂದ ಶುಚಿ) ಮಾಡುವಾಗ ಬೆಸ ಸಂಖ್ಯೆಯಲ್ಲಿ ಮಾಡಲಿ. ನಿಮ್ಮಲ್ಲೊಬ್ಬರು ನಿದ್ದೆಯಿಂದ ಎದ್ದರೆ ಕೈಯನ್ನು ನೀರಿನ ಪಾತ್ರೆಯೊಳಗೆ ಮುಳುಗಿಸುವ ಮೊದಲು ಅದನ್ನು ತೊಳೆಯಲಿ. ಏಕೆಂದರೆ ರಾತ್ರಿ ತನ್ನ ಕೈ ಎಲ್ಲೆಲ್ಲಾ ಇತ್ತೆಂದು ಯಾರಿಗೂ ತಿಳಿದಿರುವುದಿಲ್ಲ." ಮುಸ್ಲಿಂರ ವರದಿಯಲ್ಲಿ ಹೀಗಿದೆ: "ನಿಮ್ಮಲ್ಲೊಬ್ಬರು ನಿದ್ದೆಯಿಂದ ಎದ್ದರೆ ತನ್ನ ಕೈಯನ್ನು ನೀರಿನ ಪಾತ್ರೆಯೊಳಗೆ ಮುಳುಗಿಸುವ ಮೊದಲು ಮೂರು ಬಾರಿ ತೊಳೆಯಲಿ. ಏಕೆಂದರೆ ರಾತ್ರಿ ತನ್ನ ಕೈ ಎಲ್ಲೆಲ್ಲಾ ಇತ್ತೆಂದು ಅವರಿಗೆ ತಿಳಿದಿರುವುದಿಲ್ಲ."

[صحيح] - [متفق عليه] - [صحيح البخاري - 162]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶುದ್ಧೀಕರಣದ ಕೆಲವು ನಿಯಮಗಳನ್ನು ವಿವರಿಸಿದ್ದಾರೆ. ಅವು: 1. ವುದೂ (ಅಂಗಸ್ನಾನ) ಮಾಡುವಾಗ, ಶ್ವಾಸದೊಂದಿಗೆ ನೀರನ್ನು ಮೂಗಿಗೆ ಎಳೆಯಬೇಕು ಮತ್ತು ನಂತರ ಶ್ವಾಸದೊಂದಿಗೆ ಅದನ್ನು ಹೊರಹಾಕಬೇಕು. 2. ಯಾರಾದರೂ ಮಲಮೂತ್ರ ವಿಸರ್ಜನೆಯ ನಂತರ ಕಲ್ಲು ಮುಂತಾದ ವಸ್ತುಗಳನ್ನು ಬಳಸಿ ಶುಚೀಕರಿಸುವುದಾದರೆ, ಬೆಸ ಸಂಖ್ಯೆಯಲ್ಲಿ ಶುಚೀಕರಣ ಮಾಡಬೇಕು ಮತ್ತು ಕನಿಷ್ಠ ಮೂರು ಬಾರಿ ಹಾಗೂ ಗರಿಷ್ಠ ಮಾಲಿನ್ಯವು ನಿವಾರಣೆಯಾಗಿ ಆ ಸ್ಥಳವು ಶುಚಿಯಾಗುವ ತನಕ ಶುಚೀಕರಣ ಮಾಡಬೇಕು. 3. ರಾತ್ರಿಯಲ್ಲಿ ನಿದ್ರೆಯಿಂದ ಎದ್ದಾಗ, ವುದೂ (ಅಂಗಸ್ನಾನ) ನಿರ್ವಹಿಸುವುದಕ್ಕಾಗಿ ಕೈಯನ್ನು ನೀರಿನ ಪಾತ್ರೆಗೆ ಮುಳುಗಿಸುವ ಮೊದಲು ಅದನ್ನು ಪಾತ್ರೆಯ ಹೊರಗೆ ಮೂರು ಬಾರಿ ತೊಳೆಯಬೇಕು. ಈ ಮುನ್ನೆಚ್ಚರಿಕೆ ಏಕೆಂದರೆ, ನಿದ್ರೆಯ ಸಮಯದಲ್ಲಿ ಅವರ ಕೈಗಳು ಏನೆಲ್ಲಾ ಕಲ್ಮಶಗಳನ್ನು ಮುಟ್ಟಿದೆ ಅಥವಾ ಶೈತಾನನು ಮನುಷ್ಯರಿಗೆ ಹಾನಿಕಾರಕವಾದ ವಸ್ತುಗಳನ್ನು ಅಥವಾ ನೀರನ್ನು ಕೆಡಿಸುವಂತಹ ವಸ್ತುಗಳನ್ನು ಅವನ ಕೈಗೆ ಹಚ್ಚಿರಲಾರನು ಎಂದು ಖಚಿತವಾಗಿ ಹೇಳಲಾಗುವುದಿಲ್ಲ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الأورومو الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ವುದೂ (ಅಂಗಸ್ನಾನ) ಮಾಡುವಾಗ ಇಸ್ತಿನ್‌ಶಾಕ್ (ಶ್ವಾಸದೊಂದಿಗೆ ನೀರನ್ನು ಮೂಗಿನೊಳಗೆ ಎಳೆಯುವುದು) ಕಡ್ಡಾಯವಾಗಿದೆ. ಅದೇ ರೀತಿ, ಇಸ್ತಿನ್‌ಸಾರ್ (ಶ್ವಾಸದೊಂದಿಗೆ ನೀರನ್ನು ಹೊರಗೆ ಬಿಡುವುದು) ಕಡ್ಡಾಯವಾಗಿದೆ.
  2. ಮೂರು ಬಾರಿ ಇಸ್ತಿಜ್ಮಾರ್ (ಕಲ್ಲು ಮುಂತಾದ ವಸ್ತುಗಳಿಂದ ಶುಚಿ) ಮಾಡುವುದು ಅಪೇಕ್ಷಣೀಯವಾಗಿದೆ.
  3. ರಾತ್ರಿಯ ನಿದ್ರೆಯಿಂದ ಎದ್ದ ನಂತರ ಕೈಗಳನ್ನು ಮೂರು ಬಾರಿ ತೊಳೆಯಬೇಕು.