+ -

عَنْ عَائِشَةَ أُمِّ المؤْمنينَ رَضيَ اللهُ عنها:
أَنَّ النَّبِيَّ صَلَّى اللهُ عَلَيْهِ وَسَلَّمَ كَانَ إِذَا خَرَجَ مِنَ الغَائِطِ قَالَ: «غُفْرَانَكَ».

[صحيح] - [رواه أبو داود والترمذي وابن ماجه وأحمد] - [سنن أبي داود: 30]
المزيــد ...

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಲಮೂತ್ರ ವಿಸರ್ಜನೆಯ ಸ್ಥಳದಿಂದ ಹೊರ ಬಂದರೆ "ಗುಫ್ರಾನಕ್" ಎಂದು ಹೇಳುತ್ತಿದ್ದರು.

[صحيح] - [رواه أبو داود والترمذي وابن ماجه وأحمد] - [سنن أبي داود - 30]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಲಮೂತ್ರ ವಿಸರ್ಜನೆ ಮಾಡಿ ಹೊರ ಬಂದರೆ "ಓ ಅಲ್ಲಾಹ್ ನಾನು ನಿನ್ನಲ್ಲಿ ಕ್ಷಮೆ ಬೇಡುತ್ತೇನೆ" ಎಂದು ಹೇಳುತ್ತಿದ್ದರು.

ಹದೀಸಿನ ಪ್ರಯೋಜನಗಳು

  1. ಮಲಮೂತ್ರ ವಿಸರ್ಜನೆ ಮಾಡುವ ಸ್ಥಳದಿಂದ ಹೊರಬಂದ ನಂತರ "ಗುಫ್ರಾನಕ್" ಎಂದು ಹೇಳುವುದು ಅಪೇಕ್ಷಣೀಯವಾಗಿದೆ.
  2. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಸಂದರ್ಭಗಳಲ್ಲೂ ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತಿದ್ದರು.
  3. ಕೆಲವರು ಹೇಳುವಂತೆ, ಮಲಮೂತ್ರ ವಿಸರ್ಜನೆಯ ನಂತರ ಕ್ಷಮೆಯಾಚಿಸುವುದಕ್ಕಿರುವ ಕಾರಣವು: ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸಲು ನಮ್ಮಿಂದ ಸಂಭವಿಸಿದ ಕೊರತೆಯನ್ನು ನೀಗಿಸುವುದಕ್ಕಾಗಿದೆ. ಹಾನಿಕಾರಕ ವಸ್ತುಗಳು ನಮ್ಮ ದೇಹದಿಂದ ಹೊರಹೋಗುವಂತೆ ಮಾಡಿರುವುದು ಆ ಅನುಗ್ರಹಗಳಲ್ಲಿ ಒಂದಾಗಿದೆ. ಅದೇ ರೀತಿ ಶೌಚಾಲಯದಲ್ಲಿರುವಾಗ ಅಲ್ಲಾಹನ ಸ್ಮರಣೆಯಿಂದ ನಾವು ದೂರವಾಗಿರುವುದಕ್ಕೂ ನಾವು ಕ್ಷಮೆಯಾಚಿಸುತ್ತೇವೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الليتوانية الدرية الصربية الكينياروندا الرومانية المجرية التشيكية الموري المالاجاشية الولوف الأذربيجانية الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು