عَنْ سَلْمَانَ رَضيَ اللهُ عنه قَالَ:
قَالَ لَنَا الْمُشْرِكُونَ: إِنِّي أَرَى صَاحِبَكُمْ يُعَلِّمُكُمْ حَتَّى يُعَلِّمَكُمُ الْخِرَاءَةَ، فَقَالَ: أَجَلْ، إِنَّهُ نَهَانَا أَنْ يَسْتَنْجِيَ أَحَدُنَا بِيَمِينِهِ، أَوْ يَسْتَقْبِلَ الْقِبْلَةَ، وَنَهَى عَنِ الرَّوْثِ وَالْعِظَامِ وَقَالَ: «لَا يَسْتَنْجِي أَحَدُكُمْ بِدُونِ ثَلَاثَةِ أَحْجَارٍ».
[صحيح] - [رواه مسلم] - [صحيح مسلم: 262]
المزيــد ...
ಸಲ್ಮಾನ್ ಅಲ್-ಫಾರಿಸೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಮುಶ್ರಿಕ್‌ಗಳು (ಬಹುದೇವಾರಾಧಕರು) ನಮಗೆ ಹೇಳಿದರು: "ನಿಮ್ಮ ಸಂಗಾತಿಯು (ಪ್ರವಾದಿ) ನಿಮಗೆ ಎಲ್ಲವನ್ನೂ ಕಲಿಸುತ್ತಾರೆ, (ಮಲ ವಿಸರ್ಜನೆ ಮಾಡುವ) ಶೌಚಾಚಾರವನ್ನೂ ಸಹ ಕಲಿಸುತ್ತಾರೆ ಎಂದು ನಾನು ಕಾಣುತ್ತಿದ್ದೇನೆ!" ಅದಕ್ಕೆ (ಸಲ್ಮಾನ್) ಹೇಳಿದರು: "ಹೌದು. ಖಂಡಿತವಾಗಿಯೂ ನಮ್ಮಲ್ಲೊಬ್ಬನು ತನ್ನ ಬಲಗೈಯಿಂದ 'ಇಸ್ತಿಂಜಾ' (ಶುದ್ಧೀಕರಣ) ಮಾಡುವುದನ್ನು, ಅಥವಾ (ಮಲಮೂತ್ರ ವಿಸರ್ಜಿಸುವಾಗ) ಖಿಬ್ಲಾದ ಕಡೆಗೆ ಮುಖ ಮಾಡುವುದನ್ನು ಅವರು (ಪ್ರವಾದಿ) ನಿಷೇಧಿಸಿದ್ದಾರೆ. ಅವರು ಸಗಣಿ ಮತ್ತು ಮೂಳೆಗಳಿಂದ (ಶುದ್ಧೀಕರಿಸುವುದನ್ನು) ನಿಷೇಧಿಸಿದ್ದಾರೆ ಮತ್ತು ಅವರು ಹೇಳಿದರು: 'ನಿಮ್ಮಲ್ಲೊಬ್ಬನು ಮೂರಕ್ಕಿಂತ ಕಡಿಮೆ ಕಲ್ಲುಗಳಿಂದ 'ಇಸ್ತಿಂಜಾ' ಮಾಡಬಾರದು' ".
[صحيح] - [رواه مسلم] - [صحيح مسلم - 262]
ಸಲ್ಮಾನ್ ಅಲ್-ಫಾರಿಸೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಮುಶ್ರಿಕ್‌ಗಳು ನಮಗೆ ಗೇಲಿ ಮಾಡುತ್ತಾ ಹೇಳಿದರು: ಖಂಡಿತವಾಗಿಯೂ ನಿಮ್ಮ ಪ್ರವಾದಿಯು ನಿಮಗೆ ಪ್ರತಿಯೊಂದು ವಿಷಯವನ್ನೂ ಕಲಿಸುತ್ತಾರೆ. ಮೂತ್ರ ಅಥವಾ ಮಲದಿಂದ ನಿಮ್ಮ ಅಗತ್ಯವನ್ನು ಹೇಗೆ ಪೂರೈಸುವುದು ಎಂಬುದನ್ನು ಸಹ ಕಲಿಸುತ್ತಾರೆ! ಆಗ ಸಲ್ಮಾನ್ ಹೇಳಿದರು: ಹೌದು, ಅವರು ನಮಗೆ (ಮಲಮೂತ್ರದ) ಅಗತ್ಯ ಪೂರೈಸುವ ಶಿಷ್ಟಾಚಾರಗಳನ್ನು ಕಲಿಸಿದ್ದಾರೆ. ಅವುಗಳಲ್ಲಿ ಒಂದು ಏನೆಂದರೆ, ಅಗತ್ಯ ಪೂರೈಸಿದ ನಂತರ ಬಲಗೈಯಿಂದ 'ಇಸ್ತಿಂಜಾ' ಮಾಡುವುದನ್ನು ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಅದೇಕೆಂದರೆ, ಬಲಗೈಯನ್ನು ಅಶುದ್ಧಿಯಿಂದ ರಕ್ಷಿಸುವುದಕ್ಕಾಗಿ ಮತ್ತು ಗೌರವಿಸುವುದಕ್ಕಾಗಿ. ಅಥವಾ ಮೂತ್ರ ಅಥವಾ ಮಲ ವಿಸರ್ಜಿಸುವಾಗ ಕಅಬಾದ ಕಡೆಗೆ ಮುಖ ಮಾಡುವುದನ್ನು (ನಿಷೇಧಿಸಿದ್ದಾರೆ). ಹಾಗೆಯೇ ಪ್ರಾಣಿಗಳ ಲದ್ದಿ, ಹಿಕ್ಕೆಗಳು ಮತ್ತು ಮೂಳೆಗಳಿಂದ 'ಇಸ್ತಿಜ್ಮಾರ್' (ಕಲ್ಲು ಇತ್ಯಾದಿಗಳಿಂದ ಒಣ ಶುದ್ಧೀಕರಣ) ಮಾಡುವುದನ್ನು ನಿಷೇಧಿಸಿದ್ದಾರೆ. ಅದಲ್ಲದೆ, (ಮಲಮೂತ್ರ ವಿಸರ್ಜಿಸಿದ) ವ್ಯಕ್ತಿಯು ಮೂರಕ್ಕಿಂತ ಕಡಿಮೆ ಕಲ್ಲುಗಳಿಂದ 'ಇಸ್ತಿಜ್ಮಾರ್' ಮಾಡಬಾರದು (ಎಂದೂ ಹೇಳಿದ್ದಾರೆ).