ಹದೀಸ್‌ಗಳ ಪಟ್ಟಿ

ನಿಮ್ಮಲ್ಲೊಬ್ಬರು ವುದೂ (ಅಂಗಸ್ನಾನ) ಮಾಡುವಾಗ, ಮೂಗಿಗೆ ನೀರನ್ನು ಎಳೆದು ಹೊರಬಿಡಲಿ. ನಿಮ್ಮಲ್ಲೊಬ್ಬನು ಇಸ್ತಿಜ್ಮಾರ್ (ಕಲ್ಲು ಮುಂತಾದ ವಸ್ತುಗಳಿಂದ ಶುಚಿ) ಮಾಡುವಾಗ ಬೆಸ ಸಂಖ್ಯೆಯಲ್ಲಿ ಮಾಡಲಿ
عربي ಆಂಗ್ಲ ಉರ್ದು
ನೀವು ಮಲ ವಿಸರ್ಜನೆ ಮಾಡುವ ಸ್ಥಳಕ್ಕೆ ಹೋದರೆ ಕಿಬ್ಲದ ದಿಕ್ಕಿಗೆ ಮುಖ ಮಾಡಬೇಡಿ ಮತ್ತು ಅದರ ಕಡೆಗೆ ಬೆನ್ನು ಹಾಕಬೇಡಿ. ಬದಲಿಗೆ, ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಿ
عربي ಆಂಗ್ಲ ಉರ್ದು
ನಿಮ್ಮಲ್ಲೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ತನ್ನ ಜನನಾಂಗವನ್ನು ಬಲಗೈಯಲ್ಲಿ ಹಿಡಿಯಬಾರದು, ಬಲಗೈಯಿಂದ ಶೌಚವನ್ನು ಒರೆಸಬಾರದು, ಮತ್ತು ಪಾತ್ರೆಯೊಳಗೆ ಶ್ವಾಸ ಬಿಡಬಾರದು
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ,ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಖುಬುಸಿ ವಲ್ ಖಬಾಇಸ್ (ಓ ಅಲ್ಲಾಹ್, ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಿದ್ದರು
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಲಮೂತ್ರ ವಿಸರ್ಜನೆಯ ಸ್ಥಳದಿಂದ ಹೊರ ಬಂದರೆ "ಗುಫ್ರಾನಕ್" ಎಂದು ಹೇಳುತ್ತಿದ್ದರು
عربي ಆಂಗ್ಲ ಉರ್ದು