عَنْ أَنَسِ بْنِ مَالِكٍ رَضيَ اللهُ عنه قَالَ:
كَانَ رَسُولُ اللهِ صَلَّى اللهُ عَلَيْهِ وَسَلَّمَ يَدْخُلُ الْخَلَاءَ، فَأَحْمِلُ أَنَا وَغُلَامٌ نَحْوِي إِدَاوَةً مِنْ مَاءٍ وَعَنَزَةً فَيَسْتَنْجِي بِالْمَاءِ.
[صحيح] - [متفق عليه] - [صحيح مسلم: 271]
المزيــد ...
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯಕ್ಕೆ ಪ್ರವೇಶಿಸುತ್ತಿದ್ದರು. ಆಗ ನಾನು ಮತ್ತು ನನ್ನ ವಯಸ್ಸಿನ ಇನ್ನೊಬ್ಬ ಬಾಲಕ ನೀರಿನ ಒಂದು ಸಣ್ಣ ಚರ್ಮದ ಪಾತ್ರೆ ಮತ್ತು ಒಂದು ಚಿಕ್ಕ ಕೋಲನ್ನು ಹೊತ್ತುಕೊಂಡು ಹೋಗುತ್ತಿದ್ದೆವು. ಆಗ ಅವರು ನೀರಿನಿಂದ ಇಸ್ತಿಂಜಾ (ಶುದ್ಧೀಕರಣ) ಮಾಡುತ್ತಿದ್ದರು.
[صحيح] - [متفق عليه] - [صحيح مسلم - 271]
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ಮತ್ತು ಅವರ ವಯಸ್ಸಿನ ಇನ್ನೊಬ್ಬ ಸೇವಕ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ (ಮಲಮೂತ್ರ ವಿಸರ್ಜನೆಯ) ಅಗತ್ಯವನ್ನು ಪೂರೈಸಲು ಹೊರಟಾಗ ಅವರನ್ನು ಹಿಂಬಾಲಿಸುತ್ತಿದ್ದರು. ಅವರು ತಮ್ಮೊಂದಿಗೆ ಈಟಿಯ ತುದಿಯಂತಹ ಮೊನಚಾದ ತುದಿಯಿರುವ ಒಂದು ಕೋಲನ್ನು ಹೊತ್ತೊಯ್ಯುತ್ತಿದ್ದರು. ಅದರ ಮೇಲೆ ಮರೆಮಾಡುವ ವಸ್ತ್ರವನ್ನು ನೇತುಹಾಕಿ ಅದನ್ನು ಅವರು (ಪ್ರವಾದಿ) ಸುತ್ರ (ಮರೆ) ವಾಗಿ ಬಳಸುತ್ತಿದ್ದರು. ಅಥವಾ ಅವರು ಅದನ್ನು ತಮ್ಮ ನಮಾಝ್‌ಗೆ ಸುತ್ರವಾಗಿ ಇರಿಸಿಕೊಳ್ಳುತ್ತಿದ್ದರು. ಅವರು ತಮ್ಮೊಂದಿಗೆ ನೀರಿನಿಂದ ತುಂಬಿದ ಒಂದು ಸಣ್ಣ ಚರ್ಮದ ಪಾತ್ರೆಯನ್ನೂ ಹೊತ್ತೊಯ್ಯುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಅಗತ್ಯವನ್ನು ಪೂರೈಸಿದ ನಂತರ, ಅವರಲ್ಲೊಬ್ಬರು ಆ ಪಾತ್ರೆಯನ್ನು ಅವರಿಗೆ ನೀಡುತ್ತಿದ್ದರು. ಆಗ ಅವರು ನೀರಿನಿಂದ ಇಸ್ತಿಂಜಾ ಮಾಡುತ್ತಿದ್ದರು.