ಹದೀಸ್‌ಗಳ ಪಟ್ಟಿ

. : :
عربي ಆಂಗ್ಲ ಉರ್ದು
"ಓ ಅಲ್ಲಾಹ್! ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಕಠಿಣವಾಗಿ ವರ್ತಿಸುವವರೊಡನೆ ನೀನು ಕೂಡ ಕಠಿಣವಾಗಿ ವರ್ತಿಸು; ಮತ್ತು ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಮೃದುವಾಗಿ ವರ್ತಿಸುವವರೊಡನೆ ನೀನು ಕೂಡ ಮೃದುವಾಗಿ ವರ್ತಿಸು."
عربي ಆಂಗ್ಲ ಉರ್ದು
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯುತ್ತಮ ನಡವಳಿಕೆಯನ್ನು ಹೊಂದಿದವರಾಗಿದ್ದರು."
عربي ಆಂಗ್ಲ ಉರ್ದು
"ಓ ಸತ್ಯವಿಶ್ವಾಸಿಗಳ ತಾಯಿಯವರೇ! ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ನನಗೆ ತಿಳಿಸಿಕೊಡಿ." ಅವರು ಕೇಳಿದರು: "ನೀವು ಪವಿತ್ರ ಕುರ್‌ಆನ್ ಪಠಿಸುವುದಿಲ್ಲವೇ?" ನಾನು ಹೇಳಿದೆ: "ಪಠಿಸುತ್ತೇನೆ." ಅವರು ಹೇಳಿದರು: "@ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆ ಪವಿತ್ರ ಕುರ್‌ಆನ್ ಆಗಿದೆ."
عربي ಆಂಗ್ಲ ಉರ್ದು
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು."
عربي ಆಂಗ್ಲ ಉರ್ದು
"ನಾನು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಿರುನಾಲಗೆ ಕಾಣುವ ರೀತಿಯಲ್ಲಿ ಪೂರ್ಣವಾಗಿ ನಗುವುದನ್ನು ನೋಡಿಲ್ಲ, ಬದಲಿಗೆ, ಅವರು ಕೇವಲ ಮಂದಹಾಸ ಬೀರುತ್ತಿದ್ದರು."
عربي ಆಂಗ್ಲ ಉರ್ದು
"ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ರಕಅತ್‌ಗಳನ್ನು ಜ್ಞಾಪಕದಲ್ಲಿಟ್ಟಿದ್ದೇನೆ*: ಝುಹರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು ಮತ್ತು ಅದರ ನಂತರ ಎರಡು ರಕಅತ್‌ಗಳು, ಮಗ್ರಿಬ್ ನಂತರ ಮನೆಯಲ್ಲಿ ಎರಡು ರಕಅತ್‌ಗಳು, ಇಶಾ ನಂತರ ಮನೆಯಲ್ಲಿ ಎರಡು ರಕಅತ್‌ಗಳು, ಫಜ್ರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು. (ಇವು ಮಾತ್ರವಲ್ಲದೆ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಯಾರೂ ಹೋಗದಂತಹ ಒಂದು ಸಮಯವಿದೆ. (ಪ್ರವಾದಿ ಪತ್ನಿ) ಹಫ್ಸ ನನಗೆ ತಿಳಿಸಿದರು: ಮುಅಝ್ಝಿನ್ ಅಝಾನ್ ನೀಡಿ ಪ್ರಭಾತವು ಉದಯವಾದಾಗ ಪ್ರವಾದಿಯವರು ಎರಡು ರಕಅತ್‌ ನಮಾಝ್ ಮಾಡುತ್ತಿದ್ದರು." ಇನ್ನೊಂದು ವರದಿಯಲ್ಲಿ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜುಮಾ ನಮಾಝಿನ ಬಳಿಕ ಎರಡು ರಕಅತ್‌ ನಮಾಝ್ ನಿರ್ವಹಿಸುತ್ತಿದ್ದರು."
عربي ಆಂಗ್ಲ ಉರ್ದು
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
. .
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ನಿರ್ವಹಿಸುವಾಗ ತಮ್ಮ ಎರಡು ಕೈಗಳನ್ನು, ತಮ್ಮ ಕಂಕುಳದ ಬಿಳುಪು ಗೋಚರವಾಗುವ ತನಕ ಅಗಲಿಸುತ್ತಿದ್ದರು.
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೀನುವಾಗ ತಮ್ಮ ಕೈಯನ್ನು—ಅಥವಾ ಬಟ್ಟೆಯನ್ನು—ಮುಖದ ಮೇಲಿಡುತ್ತಿದ್ದರು ಮತ್ತು ಶಬ್ದವನ್ನು ಕಡಿಮೆ ಮಾಡುತ್ತಿದ್ದರು—ಅಥವಾ ತಗ್ಗಿಸುತ್ತಿದ್ದರು.
عربي ಆಂಗ್ಲ ಉರ್ದು
"ಸತ್ಯವಿಶ್ವಾಸಿಗಳಿಗೆ - ಅಥವಾ ನನ್ನ ಸಮುದಾಯಕ್ಕೆ - ನಾನು ಹೆಚ್ಚಿನ ಹೊರೆ ಹಾಕುವುದಿಲ್ಲ ಎಂದಾಗಿದ್ದರೆ, ನಾನು ಅವರಿಗೆ ಪ್ರತಿ ನಮಾಝ್‌ನ ಸಮಯದಲ್ಲಿ ಸಿವಾಕ್ (ದಂತ ಕಡ್ಡಿ) ಬಳಸಲು ಆಜ್ಞಾಪಿಸುತ್ತಿದ್ದೆ."
عربي ಆಂಗ್ಲ ಉರ್ದು
. .
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು