عَنْ عَائِشَةَ أُمِّ المُؤمنينَ رضي الله عنها قَالَتْ:
كُنْتُ أَغْتَسِلُ أَنَا وَالنَّبِيُّ صَلَّى اللهُ عَلَيْهِ وَسَلَّمَ مِنْ إِنَاءٍ وَاحِدٍ كِلاَنَا جُنُبٌ، وَكَانَ يَأْمُرُنِي، فَأَتَّزِرُ، فَيُبَاشِرُنِي وَأَنَا حَائِضٌ، وَكَانَ يُخْرِجُ رَأْسَهُ إِلَيَّ وَهُوَ مُعْتَكِفٌ فَأَغْسِلُهُ وَأَنَا حَائِضٌ.
[صحيح] - [متفق عليه] - [صحيح البخاري: 299]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದೇ ಪಾತ್ರೆಯಿಂದ ಸ್ನಾನ ಮಾಡುತ್ತಿದ್ದೆವು. ಆಗ ನಾವಿಬ್ಬರೂ ದೊಡ್ಡ ಅಶುದ್ಧಿಯಲ್ಲಿದ್ದೆವು. ನಾನು ಮುಟ್ಟಿನಲ್ಲಿರುವ ಸಂದರ್ಭದಲ್ಲಿ ಅವರು ನನಗೆ ಸೊಂಟದ ಕೆಳಗಿನ ಬಟ್ಟೆ ಧರಿಸಲು ಆದೇಶಿಸುತ್ತಿದ್ದರು ಮತ್ತು ನನ್ನನ್ನು ಮುದ್ದಾಡುತ್ತಿದ್ದರು. ನಾನು ಮುಟ್ಟಿನಲ್ಲಿರುವ ಸಂದರ್ಭದಲ್ಲಿ ಅವರು ಮಸೀದಿಯಲ್ಲಿ ಈತಿಕಾಫ್ (ಧ್ಯಾನ) ನಿರತರಾಗಿದ್ದಾಗ ನನ್ನ ಕಡೆಗೆ ತಲೆ ತೂರಿಸುತ್ತಿದ್ದರು ಮತ್ತು ನಾನು ಅದನ್ನು ತೊಳೆಯುತ್ತಿದ್ದೆ.
[صحيح] - [متفق عليه] - [صحيح البخاري - 299]
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರೊಂದಿಗಿನ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಖಾಸಗಿ ನಿಮಿಷಗಳನ್ನು ತಿಳಿಸಿದ್ದಾರೆ. ಅವುಗಳಲ್ಲೊಂದು ಏನೆಂದರೆ: ಅವರು ದೊಡ್ಡ ಅಶುದ್ಧಿಗಾಗಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದೇ ಪಾತ್ರೆಯಿಂದ ಸ್ನಾನ ಮಾಡುತ್ತಿದ್ದರು ಮತ್ತು ಇಬ್ಬರು ಅದರಿಂದ ನೀರು ತೆಗೆಯುತ್ತಿದ್ದರು. ಅವರು ಮುಟ್ಟಿನಲ್ಲಿರುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಬಳಿಗೆ ಬಂದರೆ, ಹೊಕ್ಕುಳದಿಂದ ಮೊಣಕಾಲಿನ ತನಕ ಬಟ್ಟೆ ಧರಿಸಲು ಹೇಳುತ್ತಿದ್ದರು. ನಂತರ ಸಂಭೋಗವನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯಲ್ಲಿ ಅವರನ್ನು ಮುದ್ದಾಡುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಈತಿಕಾಫ್ (ಧ್ಯಾನ) ನಿರತರಾಗಿದ್ದಾಗ, ಆಯಿಶರ ಬಳಿಗೆ ತಲೆಯನ್ನು ತೂರಿಸುತ್ತಿದ್ದರು. ಆಗ ಅವರು ಮನೆಯಲ್ಲಿ ಮುಟ್ಟಿನಲ್ಲಿದ್ದ ಸ್ಥಿತಿಯಲ್ಲೇ ಅದನ್ನು ತೊಳೆಯುತ್ತಿದ್ದರು.