+ -

عَنْ أَبِي هُرَيْرَةَ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«لَوْلَا أَنْ أَشُقَّ عَلَى الْمُؤْمِنِينَ -أَوْ: عَلَى أُمَّتِي- لَأَمَرْتُهُمْ بِالسِّوَاكِ عِنْدَ كُلِّ صَلَاةٍ».

[صحيح] - [متفق عليه] - [صحيح مسلم: 252]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸತ್ಯವಿಶ್ವಾಸಿಗಳಿಗೆ - ಅಥವಾ ನನ್ನ ಸಮುದಾಯಕ್ಕೆ - ನಾನು ಹೆಚ್ಚಿನ ಹೊರೆ ಹಾಕುವುದಿಲ್ಲ ಎಂದಾಗಿದ್ದರೆ, ನಾನು ಅವರಿಗೆ ಪ್ರತಿ ನಮಾಝ್‌ನ ಸಮಯದಲ್ಲಿ ಸಿವಾಕ್ (ದಂತ ಕಡ್ಡಿ) ಬಳಸಲು ಆಜ್ಞಾಪಿಸುತ್ತಿದ್ದೆ."

[صحيح] - [متفق عليه] - [صحيح مسلم - 252]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ತಮ್ಮ ಸಮುದಾಯದ ಸತ್ಯವಿಶ್ವಾಸಿಗಳಿಗೆ ಹೊರೆಯಾಗಬಹುದೆಂಬ ಭಯವಿಲ್ಲದಿರುತ್ತಿದ್ದರೆ, ಅವರು ಪ್ರತಿ ನಮಾಝ್‌ನ ಸಮಯದಲ್ಲಿ ಸಿವಾಕ್ ಬಳಸುವುದನ್ನು ಕಡ್ಡಾಯಗೊಳಿಸುತ್ತಿದ್ದರು.

ಹದೀಸಿನ ಪ್ರಯೋಜನಗಳು

  1. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಮೇಲಿರುವ ಕರುಣೆಯನ್ನು ಮತ್ತು ಅವರಿಗೆ ಕಷ್ಟವಾಗಬಹುದೆಂದು ಅವರಿಗಿದ್ದ ಭಯವನ್ನು ತಿಳಿಸಲಾಗಿದೆ.
  2. ಮೂಲತತ್ವದಂತೆ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞೆಯು ಕಡ್ಡಾಯವನ್ನು ಸೂಚಿಸುತ್ತದೆ. ಅದು ಕಡ್ಡಾಯವಲ್ಲ, ಐಚ್ಛಿಕವಾಗಿದೆ ಎಂದು ಸಾಬೀತುಪಡಿಸುವ ಪುರಾವೆ ಇಲ್ಲದಿದ್ದರೆ.
  3. ಪ್ರತಿ ನಮಾಝ್‌ನ ಸಮಯದಲ್ಲಿ ಸಿವಾಕ್ ಬಳಸುವುದರ ಅಪೇಕ್ಷಣೀಯತೆ ಮತ್ತು ಶ್ರೇಷ್ಠತೆಯನ್ನು ತಿಳಿಸಲಾಗಿದೆ.
  4. ಇಬ್ನ್ ದಕೀಕುಲ್ ಈದ್ ಹೇಳಿದರು: "ನಮಾಝ್ ಮಾಡಲು ಎದ್ದೇಳುವಾಗ ಸಿವಾಕ್ ಬಳಸುವುದನ್ನು ಶಿಫಾರಸು ಮಾಡಿರುವುದರ ಹಿಂದಿನ ಯುಕ್ತಿಯೇನೆಂದರೆ, ಅದು ಮನುಷ್ಯನು ಅಲ್ಲಾಹನಿಗೆ ಹತ್ತಿರವಾಗುವ ಸ್ಥಿತಿಯಾಗಿದೆ. ಆದ್ದರಿಂದ ಆರಾಧನೆಯ ಶ್ರೇಷ್ಠತೆಯನ್ನು ಎತ್ತಿ ತೋರಿಸಲು ಅದು ಪರಿಪೂರ್ಣತೆ ಮತ್ತು ಸ್ವಚ್ಛತೆಯ ಸ್ಥಿತಿಯಾಗಿರುವುದು ಅಗತ್ಯವಾಗಿದೆ."
  5. ಹದೀಸ್‌ನ ಸಾಮಾನ್ಯ ಅರ್ಥವು ಸೂಚಿಸುವಂತೆ, ಉಪವಾಸವಿರುವ ವ್ಯಕ್ತಿ ಕೂಡ ಸಿವಾಕ್ ಬಳಸುವುದು ಇದರಲ್ಲಿ ಒಳಪಡುತ್ತದೆ. ಅದು ಝುಹರ್ ಮತ್ತು ಅಸ್ರ್ ನಮಾಝ್‌ನಂತೆ ಮಧ್ಯಾಹ್ನದ ನಂತರ ನಿರ್ವಹಿಸುವ ನಮಾಝ್‌ಗಳಾಗಿದ್ದರೂ ಸಹ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الهولندية الغوجاراتية النيبالية اليوروبا المجرية الجورجية المقدونية
ಅನುವಾದಗಳನ್ನು ತೋರಿಸಿ