عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«لَا تَدْخُلُونَ الْجَنَّةَ حَتَّى تُؤْمِنُوا، وَلَا تُؤْمِنُوا حَتَّى تَحَابُّوا، أَوَلَا أَدُلُّكُمْ عَلَى شَيْءٍ إِذَا فَعَلْتُمُوهُ تَحَابَبْتُمْ؟ أَفْشُوا السَّلَامَ بَيْنَكُمْ».
[صحيح] - [رواه مسلم] - [صحيح مسلم: 54]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ಸತ್ಯವಿಶ್ವಾಸಿಗಳಾಗುವ ತನಕ ನೀವು ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಮತ್ತು ನೀವು ಪರಸ್ಪರ ಪ್ರೀತಿಸುವ ತನಕ ನೀವು ಸತ್ಯವಿಶ್ವಾಸಿಗಳಾಗುವುದಿಲ್ಲ. ನೀವು ಪರಸ್ಪರ ಪ್ರೀತಿಸುವಂತೆ ಮಾಡುವ ಒಂದು ವಿಷಯವನ್ನು ನಾನು ನಿಮಗೆ ತಿಳಿಸಲೇ? ನಿಮ್ಮ ಮಧ್ಯೆ ಸಲಾಮ್ ಹೇಳುವುದನ್ನು ವ್ಯಾಪಕಗೊಳಿಸಿ."
[صحيح] - [رواه مسلم] - [صحيح مسلم - 54]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸತ್ಯವಿಶ್ವಾಸಿಗಳ ಹೊರತು ಬೇರಾರೂ ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಮುಸಲ್ಮಾನರು ಪರಸ್ಪರ ಪ್ರೀತಿಸುವ ತನಕ ಅವರ ವಿಶ್ವಾಸವು ಪೂರ್ಣವಾಗುವುದಿಲ್ಲ ಮತ್ತು ಮುಸ್ಲಿಂ ಸಮಾಜದ ಸ್ಥಿತಿಯು ಸುಧಾರಿಸುವುದಿಲ್ಲ. ನಂತರ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಯು ವ್ಯಾಪಕವಾಗುವ ಒಂದು ಶ್ರೇಷ್ಠ ಸಂಗತಿಯನ್ನು ಸೂಚಿಸಿದರು. ಅದೇನೆಂದರೆ, ಮುಸಲ್ಮಾನರ ನಡುವೆ ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು. ಸಲಾಂ ಅಲ್ಲಾಹು ಅವನ ದಾಸರಿಗೆ ನಿಶ್ಚಯಿಸಿದ ಶುಭಾಶಯವಾಗಿದೆ.