عَنْ أَنَسِ بْنِ مَالِكٍ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«مَنْ عَالَ جَارِيَتَيْنِ حَتَّى تَبْلُغَا جَاءَ يَوْمَ الْقِيَامَةِ أَنَا وَهُوَ» وَضَمَّ أَصَابِعَهُ.
[صحيح] - [رواه مسلم] - [صحيح مسلم: 2631]
المزيــد ...
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಇಬ್ಬರು ಹೆಣ್ಣು ಮಕ್ಕಳನ್ನು ಅವರು ಪ್ರಾಯಕ್ಕೆ ಬರುವವರೆಗೆ ಪೋಷಿಸುತ್ತಾರೋ, ಅವರು ಮತ್ತು ನಾನು ಪುನರುತ್ಥಾನ ದಿನದಂದು ಹೀಗೆ ಬರುವೆವು." (ಹೀಗೆ ಹೇಳುತ್ತಾ) ಅವರು ತಮ್ಮ ಬೆರಳುಗಳನ್ನು ಜೋಡಿಸಿದರು.
[صحيح] - [رواه مسلم] - [صحيح مسلم - 2631]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರಿಗೆ ಇಬ್ಬರು ಹೆಣ್ಣು ಮಕ್ಕಳನ್ನು ಅಥವಾ ಸಹೋದರಿಯರನ್ನು ಕರುಣಿಸಲಾಗಿದೆಯೋ, ಮತ್ತು ಅವರಿಬ್ಬರು ದೊಡ್ಡವರಾಗುವವರೆಗೆ ಮತ್ತು ಪ್ರಾಯಕ್ಕೆ ಬರುವವರೆಗೆ, ಅವರ ಪೋಷಣೆ, ಶಿಕ್ಷಣ, ಒಳಿತಿಗೆ ಮಾರ್ಗದರ್ಶನ ಮಾಡುವುದು, ಕೆಡುಕಿನ ಬಗ್ಗೆ ಎಚ್ಚರಿಸುವುದು ಮುಂತಾದವುಗಳನ್ನು ಮಾಡುತ್ತಾರೋ, ಅವರು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುನರುತ್ಥಾನ ದಿನದಂದು ಇದರಂತೆ ಬರುತ್ತಾರೆ. (ಹೀಗೆ ಹೇಳುತ್ತಾ) ಅವರು ತಮ್ಮ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಜೋಡಿಸಿದರು.