ಉಪವರ್ಗಗಳು

ಹದೀಸ್‌ಗಳ ಪಟ್ಟಿ

“ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ; ನನ್ನ ಸಮಾಧಿಯನ್ನು ಉತ್ಸವ ಸ್ಥಳವಾಗಿ ಮಾಡಬೇಡಿ; ನನ್ನ ಮೇಲೆ ಸ್ವಲಾತ್ ಹೇಳಿರಿ, ನೀವು ಎಲ್ಲಿದ್ದರೂ ನಿಶ್ಚಯವಾಗಿಯೂ ನಿಮ್ಮ ಸ್ವಲಾತ್ ನನ್ನನ್ನು ತಲುಪುತ್ತದೆ.”
عربي ಆಂಗ್ಲ ಉರ್ದು
“ಐದು ವೇಳೆಯ ನಮಾಝ್‌ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್‌ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”
عربي ಆಂಗ್ಲ ಉರ್ದು
ಎಲ್ಲಾ ಒಳ್ಳೆಯ ಕಾರ್ಯಗಳು ದಾನವಾಗಿವೆ
عربي ಆಂಗ್ಲ ಉರ್ದು
“ಯಾರು ತನ್ನ ಜೀವನೋಪಾಯವು ವಿಶಾಲವಾಗಲು ಮತ್ತು ತನ್ನ ಆಯುಷ್ಯವು ದೀರ್ಘವಾಗಲು ಬಯಸುತ್ತಾನೋ ಅವನು ಕುಟುಂಬ ಸಂಬಂಧಗಳನ್ನು ಜೋಡಿಸಲಿ.”
عربي ಆಂಗ್ಲ ಉರ್ದು
ಪುರುಷನು ಖರ್ಚು ಮಾಡುವ ಅತಿಶ್ರೇಷ್ಠ ದೀನಾರ್ ಎಂದರೆ ಅವನು ತನ್ನ ಕುಟುಂಬಕ್ಕಾಗಿ ಖರ್ಚು ಮಾಡುವ ದೀನಾರ್, ಪುರುಷನು ಅಲ್ಲಾಹನ ಮಾರ್ಗದಲ್ಲಿ ತನ್ನ ಸವಾರಿಗಾಗಿ ಖರ್ಚು ಮಾಡುವ ದೀನಾರ್, ಮತ್ತು ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಸಹಚರರಿಗಾಗಿ ಖರ್ಚು ಮಾಡುವ ದೀನಾರ್
عربي ಆಂಗ್ಲ ಉರ್ದು
ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು
عربي ಆಂಗ್ಲ ಉರ್ದು
ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಭಯಪಡಿರಿ, ನಿಮ್ಮ ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಿರಿ, ನಿಮ್ಮ (ರಮದಾನ್) ತಿಂಗಳಲ್ಲಿ ಉಪವಾಸ ಆಚರಿಸಿರಿ, ನಿಮ್ಮ ಸಂಪತ್ತಿನ ಝಕಾತನ್ನು ನೀಡಿರಿ ಮತ್ತು ನಿಮ್ಮ ಆಡಳಿತಗಾರರನ್ನು ಅನುಸರಿಸಿರಿ. ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಸ್ವರ್ಗವನ್ನು ಪ್ರವೇಶಿಸುವಿರಿ
عربي ಆಂಗ್ಲ ಉರ್ದು
ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವ ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದು ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?
عربي ಆಂಗ್ಲ ಉರ್ದು
ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿರಿ, ಆಹಾರವನ್ನು ಉಣಿಸಿರಿ, ಕುಟುಂಬ ಸಂಬಂಧಗಳನ್ನು ಜೋಡಿಸಿರಿ, ಮತ್ತು ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವಾಗ ನಮಾಝ್ ಮಾಡಿರಿ. ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ
عربي ಆಂಗ್ಲ ಉರ್ದು