عَنْ أَبِي هُرَيْرَةَ رَضيَ اللهُ عنهُ أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«بَيْنَمَا رَجُلٌ يَمْشِي بِطَرِيقٍ وَجَدَ غُصْنَ شَوْكٍ عَلَى الطَّرِيقِ فَأَخَّرَهُ، فَشَكَرَ اللَّهُ لَهُ فَغَفَرَ لَهُ».
[صحيح] - [متفق عليه] - [صحيح مسلم: 1914]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಬ್ಬ ವ್ಯಕ್ತಿ ಒಂದು ದಾರಿಯಲ್ಲಿ ನಡೆಯುತ್ತಿದ್ದಾಗ, ದಾರಿಯಲ್ಲಿ ಒಂದು ಮುಳ್ಳಿನ ಕೊಂಬೆಯನ್ನು ಕಂಡನು. ಅವನು ಅದನ್ನು (ದಾರಿಯಿಂದ) ದೂರ ಸರಿಸಿದನು. ಆಗ ಅಲ್ಲಾಹು ಅವನ ಕಾರ್ಯವನ್ನು ಮೆಚ್ಚಿಕೊಂಡು ಅವನ ಪಾಪಗಳನ್ನು ಕ್ಷಮಿಸಿದನು".
[صحيح] - [متفق عليه] - [صحيح مسلم - 1914]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಬ್ಬ ವ್ಯಕ್ತಿ ನಡೆಯುತ್ತಿದ್ದಾಗ, ದಾರಿಯಲ್ಲಿ ಮುಸ್ಲಿಮರಿಗೆ ತೊಂದರೆ ಕೊಡುವ ಮುಳ್ಳುಗಳಿದ್ದ ಒಂದು ಮರದ ಕೊಂಬೆಯನ್ನು ಕಂಡನು. ಅವನು ಅದನ್ನು (ದಾರಿಯಿಂದ) ದೂರ ಸರಿಸಿದನು. ಆಗ ಅಲ್ಲಾಹು ಅವನ ಕಾರ್ಯವನ್ನು ಮೆಚ್ಚಿಕೊಂಡು ಅವನ ಪಾಪಗಳನ್ನು ಕ್ಷಮಿಸಿದನು.