+ -

عَنْ أَبي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«مَا مِنْ صَاحِبِ ذَهَبٍ وَلَا فِضَّةٍ، لَا يُؤَدِّي مِنْهَا حَقَّهَا، إِلَّا إِذَا كَانَ يَوْمُ الْقِيَامَةِ، صُفِّحَتْ لَهُ صَفَائِحُ مِنْ نَارٍ، فَأُحْمِيَ عَلَيْهَا فِي نَارِ جَهَنَّمَ، فَيُكْوَى بِهَا جَنْبُهُ وَجَبِينُهُ وَظَهْرُهُ، كُلَّمَا بَرَدَتْ أُعِيدَتْ لَهُ، فِي يَوْمٍ كَانَ مِقْدَارُهُ خَمْسِينَ أَلْفَ سَنَةٍ، حَتَّى يُقْضَى بَيْنَ الْعِبَادِ، فَيَرَى سَبِيلَهُ، إِمَّا إِلَى الْجَنَّةِ، وَإِمَّا إِلَى النَّارِ» قِيلَ: يَا رَسُولَ اللهِ، فَالْإِبِلُ؟ قَالَ: «وَلَا صَاحِبُ إِبِلٍ لَا يُؤَدِّي مِنْهَا حَقَّهَا، وَمِنْ حَقِّهَا حَلَبُهَا يَوْمَ وِرْدِهَا، إِلَّا إِذَا كَانَ يَوْمُ الْقِيَامَةِ، بُطِحَ لَهَا بِقَاعٍ قَرْقَرٍ، أَوْفَرَ مَا كَانَتْ، لَا يَفْقِدُ مِنْهَا فَصِيلًا وَاحِدًا، تَطَؤُهُ بِأَخْفَافِهَا وَتَعَضُّهُ بِأَفْوَاهِهَا، كُلَّمَا مَرَّ عَلَيْهِ أُولَاهَا رُدَّ عَلَيْهِ أُخْرَاهَا، فِي يَوْمٍ كَانَ مِقْدَارُهُ خَمْسِينَ أَلْفَ سَنَةٍ، حَتَّى يُقْضَى بَيْنَ الْعِبَادِ، فَيَرَى سَبِيلَهُ إِمَّا إِلَى الْجَنَّةِ، وَإِمَّا إِلَى النَّارِ» قِيلَ: يَا رَسُولَ اللهِ، فَالْبَقَرُ وَالْغَنَمُ؟ قَالَ: «وَلَا صَاحِبُ بَقَرٍ، وَلَا غَنَمٍ، لَا يُؤَدِّي مِنْهَا حَقَّهَا، إِلَّا إِذَا كَانَ يَوْمُ الْقِيَامَةِ بُطِحَ لَهَا بِقَاعٍ قَرْقَرٍ، لَا يَفْقِدُ مِنْهَا شَيْئًا، لَيْسَ فِيهَا عَقْصَاءُ، وَلَا جَلْحَاءُ، وَلَا عَضْبَاءُ تَنْطَحُهُ بِقُرُونِهَا وَتَطَؤُهُ بِأَظْلَافِهَا، كُلَّمَا مَرَّ عَلَيْهِ أُولَاهَا رُدَّ عَلَيْهِ أُخْرَاهَا، فِي يَوْمٍ كَانَ مِقْدَارُهُ خَمْسِينَ أَلْفَ سَنَةٍ، حَتَّى يُقْضَى بَيْنَ الْعِبَادِ، فَيَرَى سَبِيلَهُ إِمَّا إِلَى الْجَنَّةِ، وَإِمَّا إِلَى النَّارِ» قِيلَ: يَا رَسُولَ اللهِ، فَالْخَيْلُ؟ قَالَ: «الْخَيْلُ ثَلَاثَةٌ: هِيَ لِرَجُلٍ وِزْرٌ، وَهِيَ لِرَجُلٍ سِتْرٌ، وَهِيَ لِرَجُلٍ أَجْرٌ، فَأَمَّا الَّتِي هِيَ لَهُ وِزْرٌ، فَرَجُلٌ رَبَطَهَا رِيَاءً وَفَخْرًا وَنِوَاءً عَلَى أَهْلِ الْإِسْلَامِ، فَهِيَ لَهُ وِزْرٌ، وَأَمَّا الَّتِي هِيَ لَهُ سِتْرٌ، فَرَجُلٌ رَبَطَهَا فِي سَبِيلِ اللهِ، ثُمَّ لَمْ يَنْسَ حَقَّ اللهِ فِي ظُهُورِهَا وَلَا رِقَابِهَا، فَهِيَ لَهُ سِتْرٌ وَأَمَّا الَّتِي هِيَ لَهُ أَجْرٌ، فَرَجُلٌ رَبَطَهَا فِي سَبِيلِ اللهِ لِأَهْلِ الْإِسْلَامِ، فِي مَرْجٍ وَرَوْضَةٍ، فَمَا أَكَلَتْ مِنْ ذَلِكَ الْمَرْجِ، أَوِ الرَّوْضَةِ مِنْ شَيْءٍ، إِلَّا كُتِبَ لَهُ، عَدَدَ مَا أَكَلَتْ حَسَنَاتٌ، وَكُتِبَ لَهُ، عَدَدَ أَرْوَاثِهَا وَأَبْوَالِهَا، حَسَنَاتٌ، وَلَا تَقْطَعُ طِوَلَهَا فَاسْتَنَّتْ شَرَفًا، أَوْ شَرَفَيْنِ، إِلَّا كَتَبَ اللهُ لَهُ عَدَدَ آثَارِهَا وَأَرْوَاثِهَا حَسَنَاتٍ، وَلَا مَرَّ بِهَا صَاحِبُهَا عَلَى نَهْرٍ، فَشَرِبَتْ مِنْهُ وَلَا يُرِيدُ أَنْ يَسْقِيَهَا، إِلَّا كَتَبَ اللهُ لَهُ، عَدَدَ مَا شَرِبَتْ، حَسَنَاتٍ» قِيلَ: يَا رَسُولَ اللهِ، فَالْحُمُرُ؟ قَالَ: «مَا أُنْزِلَ عَلَيَّ فِي الْحُمُرِ شَيْءٌ، إِلَّا هَذِهِ الْآيَةَ الْفَاذَّةُ الْجَامِعَةُ»: {فَمَنْ يَعْمَلْ مِثْقَالَ ذَرَّةٍ خَيْرًا يَرَهُ، وَمَنْ يَعْمَلْ مِثْقَالَ ذَرَّةٍ شَرًّا يَرَهُ} [الزلزلة: 8].

[صحيح] - [متفق عليه] - [صحيح مسلم: 987]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿರುವವನು ಅವುಗಳ ಹಕ್ಕನ್ನು (ಝಕಾತನ್ನು) ನೀಡದಿದ್ದರೆ, ಪುನರುತ್ಥಾನ ದಿನದಂದು ಅವುಗಳನ್ನು ಅಗ್ನಿಯ ಹಾಳೆಗಳಾಗಿ ಪರಿವರ್ತಿಸಿ, ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಲಾಗುವುದು. ನಂತರ ಅವನ ಪಾರ್ಶ್ವ, ಹಣೆ ಮತ್ತು ಬೆನ್ನುಗಳಿಗೆ ಅದರಿಂದ ಬರೆ ಹಾಕಲಾಗುವುದು. ಅವು ತಣ್ಣಗಾದಾಗಲೆಲ್ಲಾ ಅದನ್ನು ಪುನಃ ಕಾಯಿಸಲಾಗುವುದು. ಐವತ್ತು ಸಾವಿರ ವರ್ಷಗಳಷ್ಟು ದೀರ್ಘವಾದ ದಿನದಂದು ಅಲ್ಲಾಹು ಅವನ ದಾಸರ ಮಧ್ಯೆ ತೀರ್ಪು ನೀಡಿ ಮುಗಿಸುವ ತನಕ ಇದು ಮುಂದುವರಿಯುವುದು. ನಂತರ ಅವನು ಒಂದೋ ಸ್ವರ್ಗಕ್ಕೆ ಅಥವಾ ನರಕಕ್ಕೆ ಅವನ ದಾರಿಯನ್ನು ಕಂಡುಕೊಳ್ಳುವನು."

[صحيح] - [متفق عليه] - [صحيح مسلم - 987]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಸಂಪತ್ತಿನ ವಿಧಗಳನ್ನು ಮತ್ತು ಅವುಗಳ ಝಕಾತ್ ನೀಡದವರಿಗೆ ಪುನರುತ್ಥಾನ ದಿನದಂದು ದೊರೆಯುವ ಶಿಕ್ಷೆಯನ್ನು ವಿವರಿಸಿದ್ದಾರೆ.
ಒಂದು: ಚಿನ್ನ, ಬೆಳ್ಳಿ ಮತ್ತು ಅದೇ ವಿಧಿಯನ್ನು ಹೊಂದಿರುವ ಹಣ ಮತ್ತು ವ್ಯಾಪಾರ ಸರಕುಗಳು. ಇವುಗಳ ಕಡ್ಡಾಯ ಝಕಾತನ್ನು ನೀಡದಿದ್ದರೆ, ಪುನರುತ್ಥಾನ ದಿನದಂದು ಅವುಗಳನ್ನು ಕಾಯಿಸಿ, ಅಗ್ನಿಯ ಹಲಗೆಗಳಾಗಿ ಪರಿವರ್ತಿಸಿ, ನರಕಾಗ್ನಿಯಲ್ಲಿ ಸುಟ್ಟು, ಝಕಾತ್ ನೀಡದವನ ಪಾರ್ಶ್ವ, ಹಣೆ ಮತ್ತು ಬೆನ್ನುಗಳಿಗೆ ಬರೆ ಹಾಕುವ ಮೂಲಕ ಶಿಕ್ಷಿಸಲಾಗುವುದು. ಅವು ತಣ್ಣಗಾದಾಗಲೆಲ್ಲಾ ಅವುಗಳನ್ನು ಪುನಃ ಕಾಯಿಸಲಾಗುವುದು. ಶಿಕ್ಷೆಯ ಈ ಸ್ಥಿತಿಯು ಐವತ್ತು ಸಾವಿರ ವರ್ಷಗಳಷ್ಟು ದೀರ್ಘ ಗಾತ್ರದ ಪುನರುತ್ಥಾನ ದಿನದಂದು ಅಲ್ಲಾಹು ಅವನ ಸೃಷ್ಟಿಗಳ ಮಧ್ಯೆ ತೀರ್ಪು ನೀಡಿ ಮುಗಿಸುವ ತನಕ ಮುಂದುವರಿಯುವುದು. ನಂತರ ಅವನು ಒಂದೋ ಸ್ವರ್ಗವಾಸಿ ಅಥವಾ ನರಕವಾಸಿಯಾಗುವನು.
ಎರಡು: ಒಂಟೆಗಳ ಮಾಲೀಕನು ಅವುಗಳ ಕಡ್ಡಾಯ ಝಕಾತ್ ಮತ್ತು ಹಕ್ಕನ್ನು ನೀಡದಿದ್ದರೆ, ಅವುಗಳ ಬಳಿ ಉಪಸ್ಥಿತರಿರುವ ಬಡವರಿಗೆ ಅವುಗಳ ಹಾಲನ್ನು ನೀಡುವುದು ಅವುಗಳ ಹಕ್ಕುಗಳಲ್ಲಿ ಸೇರುತ್ತದೆ, ಆ ಒಂಟೆಗಳನ್ನು ದಷ್ಟಪುಷ್ಟವಾದ ಗಾತ್ರದಲ್ಲಿ ಮತ್ತು ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತರಲಾಗುವುದು. ನಂತರ ಅವುಗಳ ಮಾಲೀಕನನ್ನು ಒಂದು ವಿಶಾಲ, ಸಮತಟ್ಟಾದ ಬಯಲಿನಲ್ಲಿ ಎಸೆದು, ಅವು ಅವನನ್ನು ತಮ್ಮ ಗೊರಸುಗಳಿಂದ ತುಳಿಯಲು ಮತ್ತು ಹಲ್ಲುಗಳಿಂದ ಕಚ್ಚಲು ಬಿಡಲಾಗುವುದು. ಅವುಗಳಲ್ಲಿ ಕೊನೆಯ ಒಂಟೆ ಸಾಗಿದರೆ ಮೊದಲ ಒಂಟೆ ಪುನಃ ಬರುವುದು. ಐವತ್ತು ಸಾವಿರ ವರ್ಷಗಳಷ್ಟು ದೀರ್ಘ ಗಾತ್ರದ ಪುನರುತ್ಥಾನ ದಿನದಂದು ಅಲ್ಲಾಹು ಅವನ ಸೃಷ್ಟಿಗಳ ಮಧ್ಯೆ ತೀರ್ಪು ನೀಡಿ ಮುಗಿಸುವ ತನಕ ಇದು ಮುಂದುವರಿಯುವುದು. ನಂತರ ಅವನು ಒಂದೋ ಸ್ವರ್ಗವಾಸಿ ಅಥವಾ ನರಕವಾಸಿಯಾಗುವನು.
ಮೂರು: ಹಸು ಮತ್ತು ಮೇಕೆ-ಕುರಿಗಳ ಮಾಲೀಕನು ಅವುಗಳ ಕಡ್ಡಾಯ ಝಕಾತನ್ನು ನೀಡದಿದ್ದರೆ, ಅವುಗಳ ಪೈಕಿ ಒಂದನ್ನೂ ಕಡಿಮೆ ಮಾಡದೆ ದೊಡ್ಡ ಸಂಖ್ಯೆಯಲ್ಲಿ ಅವುಗಳನ್ನು ತರಲಾಗುವುದು. ನಂತರ ಅವನನ್ನು ಒಂದು ವಿಶಾಲ, ಸಮತಟ್ಟಾದ ಬಯಲಿನಲ್ಲಿ ಎಸೆಯಲಾಗುವುದು. ಅವುಗಳ ಪೈಕಿ ಬಗ್ಗಿದ ಕೊಂಬುಗಳಿರುವ, ಕೊಂಬುಗಳಿಲ್ಲದ, ಅಥವಾ ಕೊಂಬುಗಳು ತುಂಡಾದ ಪ್ರಾಣಿಗಳಿರುವುದಿಲ್ಲ. ಬದಲಿಗೆ ಅವೆಲ್ಲವೂ ಪೂರ್ಣರೂಪದಲ್ಲಿರುವುವು. ಅವು ಅವನನ್ನು ತಮ್ಮ ಕೊಂಬುಗಳಿಂದ ತಿವಿಯುವುವು ಮತ್ತು ತಮ್ಮ ಗೊರಸುಗಳಿಂದ ತುಳಿಯುವುವು. ಅವುಗಳಲ್ಲಿ ಕೊನೆಯ ಪ್ರಾಣಿ ಸಾಗಿದರೆ ಮೊದಲ ಪ್ರಾಣಿ ಪುನಃ ಬರುವುದು. ಅವನು ಶಿಕ್ಷೆಯ ಈ ಸ್ಥಿತಿಯಲ್ಲಿ ಐವತ್ತು ಸಾವಿರ ವರ್ಷಗಳಷ್ಟು ದೀರ್ಘ ಗಾತ್ರದ ದಿನವನ್ನು ಕಳೆಯುವನು. ಇದು ಅಲ್ಲಾಹು ಅವನ ಸೃಷ್ಟಿಗಳ ಮಧ್ಯೆ ತೀರ್ಪು ನೀಡಿ ಮುಗಿಸುವ ತನಕ ಮುಂದುವರಿಯುವುದು. ನಂತರ ಅವನು ಒಂದೋ ಸ್ವರ್ಗವಾಸಿ ಅಥವಾ ನರಕವಾಸಿಯಾಗುವನು.
ನಾಲ್ಕು: ಕುದುರೆಗಳನ್ನು ಸಾಕುವುದು. ಇದರಲ್ಲಿ ಮೂರು ವಿಧಗಳಿವೆ.
ಒಂದು: ಮನುಷ್ಯನಿಗೆ ಹೊರೆಯಾಗಿರುವವುಗಳು. ಅಂದರೆ, ಅವನು ಅವುಗಳನ್ನು ತೋರಿಕೆ, ಜಂಭ ಮತ್ತು ಮುಸಲ್ಮಾನರ ವಿರುದ್ಧ ಯುದ್ಧ ಮಾಡಲು ಸಾಕುತ್ತಾನೆ.
ಎರಡು: ಅವನಿಗೆ ಪರದೆಯಾಗಿರುವವುಗಳು. ಅಂದರೆ, ಮನುಷ್ಯನು ಅವುಗಳನ್ನು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವುದಕ್ಕಾಗಿ ಸಾಕುತ್ತಾನೆ. ಅವನು ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ, ಅವುಗಳಿಗೆ ಮೇವು ಮತ್ತು ಆಹಾರವನ್ನು ನೀಡುತ್ತಾನೆ ಹಾಗೂ ಸಂತಾನಾಭಿವೃದ್ಧಿಗಾಗಿ ಅವುಗಳ ಪೈಕಿ ಗಂಡು ಕುದುರೆಯನ್ನು ಇತರರಿಗೆ ಎರವಲು ನೀಡುತ್ತಾನೆ.
ಮೂರು: ಅವನಿಗೆ ಪ್ರತಿಫಲವಾಗಿರುವವುಗಳು. ಅಂದರೆ ಅವನು ಅವುಗಳನ್ನು ಮುಸ್ಲಿಮರಿಗಾಗಿ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಸಾಕುತ್ತಾನೆ. ಅವುಗಳನ್ನು ಒಂದು ಹುಲ್ಲುಗಾವಲಿನಲ್ಲಿ ಅಥವಾ ಆ ಉದ್ಯಾನದಲ್ಲಿ ಮೇಯಲು ಬಿಡುತ್ತಾನೆ. ಅವು ಅಲ್ಲಿಂದ ಏನು ತಿನ್ನುತ್ತದೋ, ಅವು ತಿಂದ ಸಂಖ್ಯೆಯಲ್ಲಿ ಇವನಿಗೆ ಪ್ರತಿಫಲವನ್ನು ದಾಖಲಿಸಲಾಗುವುದು. ಅವುಗಳ ಲದ್ದಿ ಮತ್ತು ಮೂತ್ರಗಳ ಸಂಖ್ಯೆಯಲ್ಲಿ ಇವನಿಗೆ ಪ್ರತಿಫಲವನ್ನು ದಾಖಲಿಸಲಾಗುವುದು. ಅದು ಅದರ ಹಗ್ಗವನ್ನು ಕಡಿದು ಒಂದು ಅಥವಾ ಎರಡು ನೆಗೆತಗಳನ್ನು ನೆಗೆಯುವಾಗ, ಅದರ ಕಾಲು ಗುರುತುಗಳು ಮತ್ತು ಲದ್ದಿಗಳ ಸಂಖ್ಯೆಯಲ್ಲಿ ಅಲ್ಲಾಹು ಅವನಿಗೆ ಪ್ರತಿಫಲವನ್ನು ದಾಖಲಿಸುವನು. ಅವನು ಅದನ್ನು ನದಿಯ ಬಳಿಯಿಂದ ಸಾಗಿಸುವಾಗ ಅವನು ಅದಕ್ಕೆ ನೀರು ಕುಡಿಸಲು ಬಯಸದೇ ಅದೇ ಸ್ವತಃ ನೀರು ಕುಡಿದರೂ, ಅದು ಕುಡಿದ ನೀರಿನ ಸಂಖ್ಯೆಯಲ್ಲಿ ಅಲ್ಲಾಹು ಅವನಿಗೆ ಪ್ರತಿಫಲವನ್ನು ದಾಖಲಿಸುವನು.
ನಂತರ ಪ್ರವಾದಿಯರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕತ್ತೆಯ ಬಗ್ಗೆ, ಅದು ಕೂಡ ಕುದುರೆಯ ವಿಧಿಯನ್ನೇ ಹೊಂದಿದೆಯೇ ಎಂದು ಕೇಳಲಾಯಿತು.
ಆಗ ಅವರು ಉತ್ತರಿಸಿದ್ದೇನೆಂದರೆ, ನಿರ್ದಿಷ್ಟವಾಗಿ ಅವುಗಳ ಬಗ್ಗೆ ವಿವರಿಸುವ ಯಾವುದೇ ನಿಯಮವು ಅವತೀರ್ಣವಾಗಿಲ್ಲ. ಆದರೆ ಈ ಒಂದು ಚಿಕ್ಕ ಅನುಪಮ ವಚನದ ಹೊರತು. ಈ ವಚನವು ಎಲ್ಲಾ ರೀತಿಯ ಸತ್ಕರ್ಮ ಮತ್ತು ದುಷ್ಕರ್ಮಗಳನ್ನು ಸಮಗ್ರವಾಗಿ ಒಳಗೊಳ್ಳುತ್ತದೆ. ಅದು ಅಲ್ಲಾಹನ ಈ ವಚನವಾಗಿದೆ: "ಯಾರು ಒಂದು ಅಣುವಿನ ತೂಕದಷ್ಟು ಒಳಿತನ್ನು ಮಾಡುತ್ತಾರೋ ಅವರು ಅದನ್ನು ಕಾಣುವರು ಮತ್ತು ಯಾರು ಒಂದು ಅಣುವಿನ ತೂಕದಷ್ಟು ಕೆಡುಕನ್ನು ಮಾಡುತ್ತಾರೋ ಅವರು ಅದನ್ನು ಕಾಣುವರು." [ಝಲ್‌ಝಲ 8] ಯಾರಾದರೂ ಅಲ್ಲಾಹನಿಗೆ ವಿಧೇಯತೆ ತೋರುವುದಕ್ಕಾಗಿ ಕತ್ತೆಯನ್ನು ಸಾಕಿದರೆ ಅವನು ಅದಕ್ಕಾಗಿ ಪ್ರತಿಫಲ ಪಡೆಯುತ್ತಾನೆ. ಅದೇ ರೀತಿ, ಯಾರಾದರೂ ಅಲ್ಲಾಹನಿಗೆ ಅವಿಧೇಯತೆ ತೋರುವುದಕ್ಕಾಗಿ ಕತ್ತೆಯನ್ನು ಸಾಕಿದರೆ ಅವನು ಅದಕ್ಕಾಗಿ ಶಿಕ್ಷೆಯನ್ನು ಪಡೆಯುತ್ತಾನೆ. ಇದು ಎಲ್ಲಾ ಕರ್ಮಗಳಿಗೂ ಅನ್ವಯವಾಗುತ್ತದೆ.

ಹದೀಸಿನ ಪ್ರಯೋಜನಗಳು

  1. ಝಕಾತ್ ನೀಡುವುದು ಕಡ್ಡಾಯವಾಗಿದೆ ಮತ್ತು ಅದನ್ನು ನಿಷೇಧಿಸುವವನಿಗೆ ಉಗ್ರ ಎಚ್ಚರಿಕೆ ನೀಡಲಾಗಿದೆ.
  2. ಆಲಸ್ಯದಿಂದಾಗಿ ಝಕಾತ್ ನೀಡದವನು ಸತ್ಯನಿಷೇಧಿಯಾಗುವುದಿಲ್ಲ. ಆದರೆ ಅವನು ಕಡು ಅಪಾಯದಲ್ಲಿದ್ದಾನೆ.
  3. ಮನುಷ್ಯನು ತಾನು ನಿರ್ವಹಿಸುವ ಸತ್ಕರ್ಮದ ಪರಿಣಾಮಗಳಿಗೂ ಪ್ರತಿಫಲವನ್ನು ಪಡೆಯುತ್ತಾನೆ. ಆ ಪರಿಣಾಮಗಳನ್ನು ಅವನು ನಿರ್ವಹಿಸಲು ಉದ್ದೇಶಿಸದಿದ್ದರೂ ಸಹ.
  4. ಸಂಪತ್ತಿನಲ್ಲಿ ಝಕಾತ್ ಅಲ್ಲದ ಬೇರೆ ಹಕ್ಕುಗಳೂ ಇವೆ.
  5. ಒಂಟೆಗಳು ನೀರು ಕುಡಿಯುವ ಸ್ಥಳದಲ್ಲಿ ಉಪಸ್ಥಿತರಿರುವ ಬಡವರಿಗಾಗಿ ಅದರ ಹಾಲು ಕರೆದು ಕೊಡುವುದು ಒಂಟೆಗಳ ಹಕ್ಕುಗಳಲ್ಲಿ ಒಳಪಡುತ್ತದೆ. ಇದರಿಂದ ಅವರಿಗೆ ಮನೆಗೆ ಹೋಗುವುದು ತಪ್ಪುತ್ತದೆ ಮತ್ತು ಇದರಿಂದ ಆ ಜಾನುವಾರುಗಳನ್ನು ಮುದ್ದಿಸಿದಂತಾಗುತ್ತದೆ.ಇಬ್ನ್ ಬತ್ತಾಲ್ ಹೇಳಿದರು: "ಸಂಪತ್ತಿನಲ್ಲಿ ಎರಡು ಹಕ್ಕುಗಳಿವೆ. ವೈಯುಕ್ತಿಕ ಕಡ್ಡಾಯ ಮತ್ತು ಹಾಲು ಕರೆಯುವುದು ಅದು ಅತ್ಯುತ್ತಮ ಸ್ವಭಾವಗಳಾಗಿರುವ ಹಕ್ಕುಗಳಲ್ಲಿ ಒಳಪಡುತ್ತದೆ."
  6. ಸಂತಾನವೃದ್ಧಿಗಾಗಿ ಯಾರಾದರೂ ಒಂಟೆ, ಹಸು ಅಥವಾ ಮೇಕೆಯನ್ನು ಎರವಲು ಪಡೆಯಲು ಬಯಸಿದರೆ ಅವರಿಗೆ ಅದನ್ನು ನೀಡುವುದು ಈ ಹಕ್ಕುಗಳಲ್ಲಿ ಒಳಪಡುತ್ತದೆ.
  7. ಕತ್ತೆಗಳು ಮತ್ತು ಇಲ್ಲಿ ಉಲ್ಲೇಖಿಸದ ಇತರ ಪ್ರಾಣಿಗಳ ವಿಧಿಯೇನೆಂದರೆ, ಅವು ಅಲ್ಲಾಹನ ಈ ವಚನದಲ್ಲಿ ಒಳಪಡುತ್ತವೆ: "ಯಾರು ಒಂದು ಅಣುವಿನ ತೂಕದಷ್ಟು ಒಳಿತನ್ನು ಮಾಡುತ್ತಾರೋ ಅವರು ಅದನ್ನು ಕಾಣುವರು ಮತ್ತು ಯಾರು ಒಂದು ಅಣುವಿನ ತೂಕದಷ್ಟು ಕೆಡುಕನ್ನು ಮಾಡುತ್ತಾರೋ ಅವರು ಅದನ್ನು ಕಾಣುವರು."
  8. ಸತ್ಕರ್ಮಗಳನ್ನು ಅದೆಷ್ಟೇ ಚಿಕ್ಕದಾದರೂ ನಿರ್ವಹಿಸಬೇಕೆಂದು ಪ್ರೇರೇಪಿಸಲಾಗಿದೆ ಮತ್ತು ದುಷ್ಕರ್ಮಗಳನ್ನು ಅದೆಷ್ಟೇ ತುಚ್ಛವಾದರೂ ನಿರ್ವಹಿಸಬಾರದೆಂದು ಎಚ್ಚರಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الهولندية الغوجاراتية القيرقيزية النيبالية الرومانية المجرية الموري الأورومو الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು