ಉಪವರ್ಗಗಳು

ಹದೀಸ್‌ಗಳ ಪಟ್ಟಿ

ಯಾರು ಕಷ್ಟದಲ್ಲಿರುವ ವ್ಯಕ್ತಿಗೆ ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು ಮನ್ನಾ ಮಾಡುತ್ತಾನೋ, ಅವನಿಗೆ ಪುನರುತ್ಥಾನ ದಿನದಂದು, ಅಂದರೆ ಅಲ್ಲಾಹನ ನೆರಳಿನ ಹೊರತು ಬೇರೆ ನೆರಳಿಲ್ಲದ ದಿನದಂದು, ಅಲ್ಲಾಹು ತನ್ನ ಸಿಂಹಾಸನದ ನೆರಳಿನಲ್ಲಿ ನೆರಳು ನೀಡುತ್ತಾನೆ
عربي ಆಂಗ್ಲ ಉರ್ದು
ನೀವು ಈ ಚಂದ್ರನನ್ನು ನೋಡುವಂತೆ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನೋಡುವಿರಿ. ಅವನನ್ನು ನೋಡುವುದರಲ್ಲಿ ನಿಮಗೆ ಯಾವುದೇ ತೊಂದರೆಯಿರುವುದಿಲ್ಲ
عربي ಆಂಗ್ಲ ಉರ್ದು
ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ
عربي ಆಂಗ್ಲ ಉರ್ದು
ನಾನು ನಿಮಗೆ ಸ್ವರ್ಗದ ಜನರ ಬಗ್ಗೆ ತಿಳಿಸಲೇ? ದುರ್ಬಲ ಎಂದು ಪರಿಗಣಿಸಲ್ಪಡುವ ಎಲ್ಲಾ ವಿನಮ್ರ ವ್ಯಕ್ತಿಗಳು. ಅವರು (ಏನಾದರೂ ಸಂಭವಿಸಬೇಕೆಂದು) ಅಲ್ಲಾಹನ ಮೇಲೆ ಆಣೆ ಮಾಡಿದರೆ, ಅಲ್ಲಾಹು ಅದನ್ನು ನೆರವೇರಿಸುತ್ತಾನೆ. ನಾನು ನಿಮಗೆ ನರಕದ ಜನರ ಬಗ್ಗೆ ತಿಳಿಸಲೇ? ಎಲ್ಲಾ ಕಠೋರ, ದುರಾಸೆ ಮತ್ತು ಅಹಂಕಾರಿಗಳಾದ ವ್ಯಕ್ತಿಗಳು
عربي ಆಂಗ್ಲ ಉರ್ದು
ಪುನರುತ್ಥಾನ ದಿನದಂದು ದಾಸನೊಂದಿಗೆ, ಅವನ ಆಯುಷ್ಯದ ಬಗ್ಗೆ—ಅವನು ಅದನ್ನು ಹೇಗೆ ವ್ಯಯಿಸಿದನೆಂದು, ಅವನ ಜ್ಞಾನದ ಬಗ್ಗೆ—ಅವನು ಅದರ ಪ್ರಕಾರ ಏನು ಕಾರ್ಯವೆಸಗಿದನೆಂದು, ಅವನ ಸಂಪತ್ತಿನ ಬಗ್ಗೆ—ಅವನು ಅದನ್ನು ಎಲ್ಲಿಂದ ಸಂಪಾದಿಸಿದನು ಮತ್ತು ಯಾವುದಕ್ಕೆ ಖರ್ಚು ಮಾಡಿದನೆಂದು, ಮತ್ತು ಅವನ ದೇಹದ ಬಗ್ಗೆ—ಅವನು ಅದನ್ನು ಯಾವುದಕ್ಕಾಗಿ ವಿನಿಯೋಗಿಸಿದನೆಂದು ಕೇಳುವ ತನಕ ಅವನ ಎರಡು ಪಾದಗಳು ಅಲುಗಾಡುವುದಿಲ್ಲ
عربي ಆಂಗ್ಲ ಉರ್ದು
ದಿವಾಳಿ ಯಾರೆಂದು ನಿಮಗೆ ತಿಳಿದಿದೆಯೇ?
عربي ಆಂಗ್ಲ ಉರ್ದು
ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿರುವವನು ಅವುಗಳ ಹಕ್ಕನ್ನು (ಝಕಾತನ್ನು) ನೀಡದಿದ್ದರೆ, ಪುನರುತ್ಥಾನ ದಿನದಂದು ಅವುಗಳನ್ನು ಅಗ್ನಿಯ ಹಾಳೆಗಳಾಗಿ ಪರಿವರ್ತಿಸಿ, ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಲಾಗುವುದು
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ, ಒಳಿತಿನ ವಿಷಯದಲ್ಲಿ ಅಲ್ಲಾಹು ಸತ್ಯವಿಶ್ವಾಸಿಗೆ ಅನ್ಯಾಯ ಮಾಡುವುದಿಲ್ಲ. ಒಳಿತು ಮಾಡಿದ್ದಕ್ಕಾಗಿ ಅವನಿಗೆ ಇಹಲೋಕದಲ್ಲಿ (ಜೀವನೋಪಾಯವನ್ನು) ನೀಡಲಾಗುತ್ತದೆ ಮತ್ತು ಪರಲೋಕದಲ್ಲೂ ಪ್ರತಿಫಲ ನೀಡಲಾಗುತ್ತದೆ
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ ನಾನು ನನ್ನ ಕೊಳದ ಬಳಿಯಿದ್ದು ನೀವು ಅದರ ನೀರು ಕುಡಿಯಲು ಬರುವುದನ್ನು ನಾನು ನೋಡುತ್ತೇನೆ. ಆದರೆ ಕೆಲವು ಜನರನ್ನು ಅಲ್ಲಿಗೆ ಬರದಂತೆ ತಡೆಹಿಡಿಯಲಾಗುತ್ತದೆ. ಆಗ ನಾನು ಹೇಳುತ್ತೇನೆ: "ಓ ನನ್ನ ಪರಿಪಾಲಕನೇ! ಅವರು ನನ್ನವರು ಮತ್ತು ನನ್ನ ಸಮುದಾಯದವರು
عربي ಆಂಗ್ಲ ಉರ್ದು
ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು
عربي ಆಂಗ್ಲ ಉರ್ದು