عَنْ عَبْدِ اللهِ بنِ مَسْعُودٍ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«أَوَّلُ مَا يُقْضَى بَيْنَ النَّاسِ يَوْمَ الْقِيَامَةِ فِي الدِّمَاءِ».
[صحيح] - [متفق عليه] - [صحيح مسلم: 1678]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ."
[صحيح] - [متفق عليه] - [صحيح مسلم - 1678]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಜನರು ಪರಸ್ಪರ ನಡೆಸಿದ ದೌರ್ಜನ್ಯಗಳ ಪೈಕಿ ಪುನರುತ್ಥಾನ ದಿನದಂದು ಮೊಟ್ಟಮೊದಲು ರಕ್ತಪಾತದ ತೀರ್ಪು ನೀಡಲಾಗುವುದು , ಅಂದರೆ ಕೊಲೆ ಮತ್ತು ಜಖಂಗಳ ಕುರಿತಾಗಿದೆ.