+ -

عَنْ أَبِي بَرْزَةَ الأَسْلَمِيِّ رضي الله عنه قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«لَا تَزُولُ قَدَمَا عَبْدٍ يَوْمَ القِيَامَةِ حَتَّى يُسْأَلَ عَنْ عُمُرِهِ فِيمَا أَفْنَاهُ، وَعَنْ عِلْمِهِ فِيمَ فَعَلَ، وَعَنْ مَالِهِ مِنْ أَيْنَ اكْتَسَبَهُ وَفِيمَ أَنْفَقَهُ، وَعَنْ جِسْمِهِ فِيمَ أَبْلَاهُ».

[صحيح] - [رواه الترمذي] - [سنن الترمذي: 2417]
المزيــد ...

ಅಬೂ ಬರ್ಝ ಅಸ್ಲಮಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಪುನರುತ್ಥಾನ ದಿನದಂದು ದಾಸನೊಂದಿಗೆ, ಅವನ ಆಯುಷ್ಯದ ಬಗ್ಗೆ—ಅವನು ಅದನ್ನು ಹೇಗೆ ವ್ಯಯಿಸಿದನೆಂದು, ಅವನ ಜ್ಞಾನದ ಬಗ್ಗೆ—ಅವನು ಅದರ ಪ್ರಕಾರ ಏನು ಕಾರ್ಯವೆಸಗಿದನೆಂದು, ಅವನ ಸಂಪತ್ತಿನ ಬಗ್ಗೆ—ಅವನು ಅದನ್ನು ಎಲ್ಲಿಂದ ಸಂಪಾದಿಸಿದನು ಮತ್ತು ಯಾವುದಕ್ಕೆ ಖರ್ಚು ಮಾಡಿದನೆಂದು, ಮತ್ತು ಅವನ ದೇಹದ ಬಗ್ಗೆ—ಅವನು ಅದನ್ನು ಯಾವುದಕ್ಕಾಗಿ ವಿನಿಯೋಗಿಸಿದನೆಂದು ಕೇಳುವ ತನಕ ಅವನ ಎರಡು ಪಾದಗಳು ಅಲುಗಾಡುವುದಿಲ್ಲ."

[صحيح] - [رواه الترمذي] - [سنن الترمذي - 2417]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ಈ ಕೆಳಗಿನ ವಿಷಯಗಳ ಬಗ್ಗೆ ಪ್ರಶ್ನಿಸಲಾಗುವ ತನಕ ಜನರಲ್ಲಿ ಯಾರೂ ವಿಚಾರಣೆಯ ಸ್ಥಳದಿಂದ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವುದಿಲ್ಲ:
ಮೊದಲನೆಯದಾಗಿ, ಅವನ ಜೀವನದ ಬಗ್ಗೆ—ಅವನು ಅದನ್ನು ಯಾವುದಕ್ಕಾಗಿ ಕರಗಿಸಿದನು ಮತ್ತು ವಿನಿಯೋಗಿಸಿದನು?
ಎರಡನೆಯದಾಗಿ, ಅವನ ಜ್ಞಾನದ ಬಗ್ಗೆ—ಅವನು ಅದನ್ನು ಸಂಪಾದಿಸಿದ್ದು ಅಲ್ಲಾಹನಿಗಾಗಿಯೋ? ಅವನು ಅದರ ಪ್ರಕಾರ ಕರ್ಮವೆಸಗಿದ್ದಾನೋ? ಮತ್ತು ಅವನು ಅದನ್ನು ಅದರ ಹಕ್ಕುದಾರರಿಗೆ ಕಲಿಸಿಕೊಟ್ಟಿದ್ದಾನೋ?
ಮೂರನೆಯದಾಗಿ, ಅವನ ಸಂಪತ್ತಿನ ಬಗ್ಗೆ—ಅವನು ಅದನ್ನು ಎಲ್ಲಿಂದ ಸಂಪಾದಿಸಿದನು? ಧರ್ಮಸಮ್ಮತ ಮೂಲದಿಂದಲೋ ಅಥವಾ ಧರ್ಮನಿಷಿದ್ಧ ಮೂಲದಿಂದಲೋ? ಅವನು ಅದನ್ನು ಯಾವುದಕ್ಕಾಗಿ ಖರ್ಚು ಮಾಡಿದನು? ಅಲ್ಲಾಹನಿಗೆ ಇಷ್ಟವಾಗುವ ಮಾರ್ಗದಲ್ಲೋ? ಅಥವಾ ಅಲ್ಲಾಹನಿಗೆ ಕೋಪ ಬರುವ ಮಾರ್ಗದಲ್ಲೋ?
ನಾಲ್ಕನೆಯದಾಗಿ, ಅವನ ದೇಹ, ಶಕ್ತಿ, ಆರೋಗ್ಯ ಮತ್ತು ಯೌವನದ ಬಗ್ಗೆ—ಅವನು ಅದನ್ನು ಯಾವುದಕ್ಕಾಗಿ ಕರಗಿಸಿದನು ಮತ್ತು ವಿನಿಯೋಗಿಸಿದನು?

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية المجرية التشيكية الموري المالاجاشية الأورومو الولوف الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಅಲ್ಲಾಹನಿಗೆ ಇಷ್ಟವಾಗುವ ರೀತಿಯಲ್ಲಿ ಜೀವನವನ್ನು ಸದುಪಯೋಗಪಡಿಸಬೇಕೆಂದು ಪ್ರೇರೇಪಿಸಲಾಗಿದೆ.
  2. ಅಲ್ಲಾಹು ದಾಸರಿಗೆ ಅಸಂಖ್ಯ ಅನುಗ್ರಹಗಳನ್ನು ದಯಪಾಲಿಸಿದ್ದಾನೆ. ಅವನು ದಾಸನಿಗೆ ನೀಡಿದ ಅನುಗ್ರಹಗಳ ಬಗ್ಗೆ ಪ್ರಶ್ನಿಸಲಿದ್ದಾನೆ. ಆದ್ದರಿಂದ ಅಲ್ಲಾಹನ ಅನುಗ್ರಹವನ್ನು ಅವನಿಗೆ ಇಷ್ಟವಾಗುವ ರೀತಿಯಲ್ಲಿ ವಿನಿಯೋಗಿಸುವುದು ಕಡ್ಡಾಯವಾಗಿದೆ.
ಇನ್ನಷ್ಟು