عَنْ أَبِي هُرَيْرَةَ رضي الله عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ يَوْمَ خَيْبَرَ:
«لَأُعْطِيَنَّ هَذِهِ الرَّايَةَ رَجُلًا يُحِبُّ اللهَ وَرَسُولَهُ، يَفْتَحُ اللهُ عَلَى يَدَيْهِ» قَالَ عُمَرُ بْنُ الْخَطَّابِ: مَا أَحْبَبْتُ الْإِمَارَةَ إِلَّا يَوْمَئِذٍ، قَالَ فَتَسَاوَرْتُ لَهَا رَجَاءَ أَنْ أُدْعَى لَهَا، قَالَ فَدَعَا رَسُولُ اللهِ صَلَّى اللهُ عَلَيْهِ وَسَلَّمَ عَلِيَّ بْنَ أَبِي طَالِبٍ، فَأَعْطَاهُ إِيَّاهَا، وَقَالَ: «امْشِ، وَلَا تَلْتَفِتْ، حَتَّى يَفْتَحَ اللهُ عَلَيْكَ» قَالَ فَسَارَ عَلِيٌّ شَيْئًا ثُمَّ وَقَفَ وَلَمْ يَلْتَفِتْ، فَصَرَخَ: يَا رَسُولَ اللهِ، عَلَى مَاذَا أُقَاتِلُ النَّاسَ؟ قَالَ: «قَاتِلْهُمْ حَتَّى يَشْهَدُوا أَنْ لَا إِلَهَ إِلَّا اللهُ وَأَنَّ مُحَمَّدًا رَسُولُ اللهِ، فَإِذَا فَعَلُوا ذَلِكَ فَقَدْ مَنَعُوا مِنْكَ دِمَاءَهُمْ وَأَمْوَالَهُمْ، إِلَّا بِحَقِّهَا وَحِسَابُهُمْ عَلَى اللهِ».
[صحيح] - [رواه مسلم] - [صحيح مسلم: 2405]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಖೈಬರ್ ಯುದ್ಧದ ದಿನ ಹೇಳಿದರು:
"ನಾನು ಈ ಪತಾಕೆಯನ್ನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುವ ಒಬ್ಬ ವ್ಯಕ್ತಿಗೆ ಕೊಡುವೆನು. ಅವನ ಕೈಯಿಂದ ಅಲ್ಲಾಹು ವಿಜಯವನ್ನು ದಯಪಾಲಿಸುವನು." ಉಮರ್ ಬಿನ್ ಖತ್ತಾಬ್ ಹೇಳಿದರು: "ಆ ದಿನದ ಹೊರತು ಬೇರೆ ಯಾವ ದಿನದಲ್ಲೂ ನಾನು ಮುಖಂಡತ್ವವನ್ನು ಬಯಸಿರಲಿಲ್ಲ." ಅವರು ಹೇಳಿದರು: "ನನ್ನನ್ನು ಅದಕ್ಕೆ ಕರೆಯಲಾಗಬಹುದೆಂಬ ನಿರೀಕ್ಷೆಯಿಂದ ನಾನು ಮುಂದೆ ಮುಂದೆ ಕಾಣಿಸಿಕೊಳ್ಳತೊಡಗಿದೆ." ಅವರು ಹೇಳಿದರು: "ಆದರೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲಿ ಬಿನ್ ಅಬೂತಾಲಿಬ್ ರನ್ನು ಕರೆದು ಅದನ್ನು ಅವರಿಗೆ ನೀಡುತ್ತಾ ಹೇಳಿದರು: "ಮುಂದಕ್ಕೆ ಹೋಗು! ಅಲ್ಲಾಹು ನಿನ್ನ ಕೈಯಲ್ಲಿ ವಿಜಯ ದಯಪಾಲಿಸುವ ತನಕ ಹಿಂದಿರುಗಿ ನೋಡಬೇಡ!" ಅಲಿ ಸ್ವಲ್ಪ ಮುಂದಕ್ಕೆ ಚಲಿಸಿ, ನಂತರ ನಿಂತು ಹಿಂದಿರುಗಿ ನೋಡದೆ ಗಟ್ಟಿಯಾಗಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಯಾವುದಕ್ಕಾಗಿ ಅವರೊಡನೆ ಯುದ್ಧ ಮಾಡಬೇಕು?" ಅವರು ಉತ್ತರಿಸಿದರು: "ಅವರು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವ ತನಕ ಅವರೊಂದಿಗೆ ಹೋರಾಡಿರಿ. ಅವರು ಅದನ್ನು ನಿರ್ವಹಿಸಿದರೆ, ಅವರು ನಿನ್ನಿಂದ ಅವರ ರಕ್ತ ಮತ್ತು ಸಂಪತ್ತನ್ನು ರಕ್ಷಿಸಿದರು. ಆದರೆ ಇಸ್ಲಾಮಿನ ಹಕ್ಕುಗಳ ಹೊರತು. ಅವರನ್ನು ವಿಚಾರಣೆ ಮಾಡಬೇಕಾದ ಹೊಣೆ ಅಲ್ಲಾಹನದ್ದು."
[صحيح] - [رواه مسلم] - [صحيح مسلم - 2405]
ನಾಳೆ ಮುಸ್ಲಿಮರು ಮದೀನದ ಸಮೀಪದಲ್ಲಿರುವ ಖೈಬರ್ ಎಂಬ ಸ್ಥಳದಲ್ಲಿರುವ ಯಹೂದಿಗಳ ವಿರುದ್ಧ ಜಯ ಗಳಿಸುವರು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳಿಗೆ ತಿಳಿಸಿದರು. ಅದು ಅವರು ಪತಾಕೆಯನ್ನು ಕೊಡುವ ಒಬ್ಬ ವ್ಯಕ್ತಿಯ ಮೂಲಕವಾಗಿರುವುದು. ಪತಾಕೆ ಎಂದರೆ ಸೈನ್ಯವು ತಮ್ಮ ಚಿಹ್ನೆಯಾಗಿ ಸ್ವೀಕರಿಸಿದ ಧ್ವಜ. ಈ ವ್ಯಕ್ತಿಯ ಗುಣಲಕ್ಷಣಗಳೇನೆಂದರೆ, ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುತ್ತಾರೆ, ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರು ಅವರನ್ನು ಪ್ರೀತಿಸುತ್ತಾರೆ.
ಪ್ರವಾದಿಯವರು ಉದ್ದೇಶಿಸಿದ ವ್ಯಕ್ತಿ ನಾನಾಗಿರಲು ನಾನು ಆ ದಿನದ ಹೊರತು ಬೇರೆ ಯಾವ ದಿನಗಳಲ್ಲೂ ಮುಖಂಡತ್ವವನ್ನು ಇಷ್ಟಪಟ್ಟಿರಲಿಲ್ಲ ಎಂದು ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದಂತೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಪ್ರೀತಿಯನ್ನು ಪಡೆದ ವ್ಯಕ್ತಿ ತಾನಾಗಬೇಕೆಂಬ ನಿರೀಕ್ಷೆಯಿಂದ ಮಾತ್ರ ಅವರು ಮುಖಂಡತ್ವವನ್ನು ಬಯಸಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತನ್ನನ್ನು ನೋಡಿ ಆ ಪತಾಕೆಯನ್ನು ತನ್ನ ಕೈಗೆ ನೀಡಲೆಂಬ ಹುರುಪು ಮತ್ತು ಅಭಿಲಾಷೆಯಿಂದ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತನ್ನ ದೇಹವನ್ನು ಎತ್ತಿ ಎತ್ತಿ ಅವರನ್ನು ನೋಡುತ್ತಿದ್ದರು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲೀ ಬಿನ್ ಅಬೂ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಕರೆದು ಅವರಿಗೆ ಪತಾಕೆಯನ್ನು ನೀಡಿದರು. ಸೈನ್ಯದೊಂದಿಗೆ ಮುಂದಕ್ಕೆ ಚಲಿಸಬೇಕು ಮತ್ತು ಶತ್ರುಗಳಿಗೆ ಮುಖಾಮುಖಿಯಾದ ನಂತರ ಅಲ್ಲಾಹು ಅವರಿಗೆ ಆ ಕೋಟೆಯ ಮೇಲೆ ಗೆಲುವು ಮತ್ತು ಪ್ರಾಬಲ್ಯ ನೀಡುವ ತನಕ ವಿಶ್ರಾಂತಿ, ಯುದ್ಧ ವಿರಾಮ ಅಥವಾ ಒಪ್ಪಂದ ಮುಂತಾದ ಯಾವ ಕಾರಣದಿಂದಲೂ ಹಿಂದಕ್ಕೆ ಬರಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಆಜ್ಞಾಪಿಸಿದರು.
ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮುಂದಕ್ಕೆ ಚಲಿಸಿದರು. ನಂತರ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞೆಗೆ ವಿರುದ್ಧವಾಗಬಹುದು ಎಂಬ ಕಾರಣದಿಂದ ಹಿಂದಿರುಗಿ ನೋಡದೆ, ತಲೆಯನ್ನು ಎತ್ತಿ ಗಟ್ಟಿಯಾಗಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಯಾವುದಕ್ಕಾಗಿ ಅವರೊಡನೆ ಯುದ್ಧ ಮಾಡಬೇಕು?"
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವರು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವ ತನಕ ಅವರೊಂದಿಗೆ ಹೋರಾಡಿರಿ. ಅವರು ನಿನಗೆ ಉತ್ತರ ನೀಡಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ, ಅವರು ತಮ್ಮ ಪ್ರಾಣ ಮತ್ತು ಆಸ್ತಿಗಳನ್ನು ನಿನ್ನಿಂದ ರಕ್ಷಿಸಿಕೊಂಡರು ಮತ್ತು ಅವು ನಿನಗೆ ನಿಷಿದ್ಧವಾಗುವುದು. ಆದರೆ ಅವರು ಇಸ್ಲಾಮಿ ನಿಯಮಗಳ ಪ್ರಕಾರ ಮರಣದಂಡನೆಗೆ ಅರ್ಹವಾಗುವ ಯಾವುದಾದರೂ ಅಪರಾಧ ಅಥವಾ ಪಾತಕಗಳನ್ನು ಎಸಗಿದರೆ ಹೊರತು. ಅವರ ವಿಚಾರಣೆ ಮಾಡಬೇಕಾದ ಹೊಣೆ ಅಲ್ಲಾಹನದ್ದು."