عَنْ أَنَسٍ رَضيَ اللهُ عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«لَوْ كَانَ لِابْنِ آدَمَ وَادِيَانِ مِنْ مَالٍ لَابْتَغَى وَادِيًا ثَالِثًا، وَلَا يَمْلَأُ جَوْفَ ابْنِ آدَمَ إِلَّا التُّرَابُ، وَيَتُوبُ اللهُ عَلَى مَنْ تَابَ».
[صحيح] - [متفق عليه] - [صحيح مسلم: 1048]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಂದು ವೇಳೆ ಆದಮರ ಪುತ್ರನಿಗೆ (ಮನುಷ್ಯನಿಗೆ) ಎರಡು ಕಣಿವೆಗಳಷ್ಟು ಸಂಪತ್ತು ಇದ್ದಿದ್ದರೆ, ಅವನು ಖಂಡಿತವಾಗಿಯೂ ಮೂರನೇ ಕಣಿವೆಯನ್ನು ಬಯಸುತ್ತಿದ್ದನು. ಮತ್ತು ಆದಮರ ಪುತ್ರನ ಹೊಟ್ಟೆಯನ್ನು ಮಣ್ಣನ್ನು ಹೊರತುಪಡಿಸಿ ಬೇರೇನೂ ತುಂಬಿಸುವುದಿಲ್ಲ (ಅಂದರೆ, ಮರಣ ಹೊಂದುವವರೆಗೆ ಅವನ ಆಸೆ ತೀರುವುದಿಲ್ಲ). ಮತ್ತು ಯಾರು ತೌಬಾ (ಪಶ್ಚಾತ್ತಾಪ) ಮಾಡುತ್ತಾರೋ, ಅಲ್ಲಾಹು ಅವನ ತೌಬಾವನ್ನು ಸ್ವೀಕರಿಸುತ್ತಾನೆ".
[صحيح] - [متفق عليه] - [صحيح مسلم - 1048]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಂದು ವೇಳೆ ಆದಮರ ಪುತ್ರನು ಚಿನ್ನದಿಂದ ತುಂಬಿದ ಒಂದು ಕಣಿವೆಯನ್ನು ಪಡೆದರೆ, ಅವನ ಸಹಜ ಸ್ವಭಾವವಾದ ದುರಾಸೆಯಿಂದಾಗಿ, ತನಗೆ ಇನ್ನೂ ಎರಡು ಕಣಿವೆಗಳು ಇರಬೇಕೆಂದು ಅವನು ಬಯಸುತ್ತಾನೆ. ಅವನು ಮರಣ ಹೊಂದುವವರೆಗೆ ಮತ್ತು ಅವನ ಒಡಲು ಅವನ ಸಮಾಧಿಯ ಮಣ್ಣಿನಿಂದ ತುಂಬುವವರೆಗೆ ಅವನು ಈ ಪ್ರಪಂಚಕ್ಕಾಗಿ ದುರಾಸೆಯಿಂದಲೇ ಇರುತ್ತಾನೆ.